ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲದಲ್ಲಿ ಕಾಫಿ ಹೂ: ಕೈಗೆಟುಕದ ಇಳುವರಿ

ಅಕಾಲಿಕ ತುಂತುರು ಮಳೆ; ಏಕಕಾಲದಲ್ಲಿ ಹೂ, ಕಾಯಿ
Last Updated 26 ಡಿಸೆಂಬರ್ 2016, 9:59 IST
ಅಕ್ಷರ ಗಾತ್ರ

ಯಳಂದೂರು: ಅಕಾಲದಲ್ಲಿ ಬಿದ್ದ ತುಂತುರು ಮಳೆಗೆ ಕಾಫಿ ಅಲ್ಲಲ್ಲಿ ಹೂ ಬಿಟ್ಟಿದೆ. ಹಣ್ಣಾದ ಗಿಡದಲ್ಲಿ ಫಲವೂ ಕುಸಿದಿದೆ. ಆದರೂ, ಆದಿವಾಸಿ ಮಹಿಳೆ ಯರಿಗೆ ಬಿಡುವಿಲ್ಲದ ಕೆಲಸ ದಕ್ಕುತ್ತಿದೆ.

ಮೆಣಸು ಮತ್ತು ಪಾನೀಯ ಬೆಳೆಗಳ ಕೃಷಿ ಕಾರ್ಯಗಳಿಗೆ ಬಿಸಿಲ ದಿನಗಳು ಕೂಲಿ ಏರಿಕೆಗೆ ಕಾರಣವಾಗಿದ್ದರೆ, ಬೆಳೆಗಾರರಿಗೆ ಕಾಫಿ, ಮೆಣಸು, ಏಲಕ್ಕಿ ನಿರ್ವಹಣೆ ಕೊರತೆ ಕಾಡಿದೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಕಾಡಿನ ಹಾಡಿಗಳಲ್ಲಿ ಸಂಬಾರ ಮತ್ತು ಪಾನೀಯ ಕೃಷಿಗೂ ಆದ್ಯತೆ ನೀಡಲಾ ಗಿದೆ. ಪೂರ್ಣ ಬೆಳೆಯಾಗಿ ಮತ್ತು ಮಿಶ್ರ ಕೃಷಿಯಾಗಿ ನೀರಾವರಿ, ನೆರಳಿನ ಅನುಕೂಲದಿಂದ ಬೆಳೆಸಲಾಗಿದೆ ಎಂದರು.

ಇತ್ತೀಚಿನ ಅಕಾಲಿಕ ಮಳೆ ಯಿಂದಾದ ವ್ಯತ್ಯಾಸಗಳು ಫಲವತ್ತತೆ ಯಲ್ಲಿ ಬಿಂಬಿತವಾಗಿದೆ. ಹೂ, ಕಾಯಿ ಏಕಕಾಲದಲ್ಲಿ ಕಾಣಿಸಿಕೊಂಡು ಆದಾಯ ಕುಸಿತಕ್ಕೆ ಕಾರಣವಾಗಿದೆ.
ಕಾವೇರಿ, ಅರೇಬಿಕಾ ತಳಿಗಳನ್ನು ಇಲ್ಲಿ ಕಾಣಬಹುದು. ಮಾರ್ಚ್‌–ಏಪ್ರಿಲ್‌ ನಲ್ಲಿ ಹೂ ಅರಳಲು ಮಳೆ ಕೊರತೆಯಾಯಿತು. ಡಿಸೆಂಬರ್‌ವರೆಗೆ ಮಳೆ ಇಲ್ಲದೆ ನಿರಾಸೆ ಆಯಿತು.
ಈಚೆಗೆ ಸುರಿದ ತುಂತುರು ಹನಿಗೆ ಅಕಾಲಿಕ ಹುಸಿ ಹೂ ಬಿಟ್ಟಿದೆ. ಇದರಿಂದ ಗಿಡದಲ್ಲಿ ಕಾಯಿ ಕಚ್ಚುವುದಿಲ್ಲ ಎನ್ನು ತ್ತಾರೆ ಹೊಸಪೋಡಿನ ಜಡೇಸ್ವಾಮಿ.

ಕರಿಮೆಣಸು (ಪೈಪರ್ ನೀಗ್ರಮ್) ಬಹು ವಾರ್ಷಿಕ ಹಬ್ಬು ಬಳ್ಳಿಯಾಗಿ ಕಾಫಿ ತೋಟಗಳ ನಡುವೆ ಇಲ್ಲಿ ಬೆಳೆಸ ಲಾಗುತ್ತಿದೆ. 125–200 ಸೆಂ.ಮೀ ಮಳೆ ಇದಕ್ಕೆ ಅವಶ್ಯ. 10–40 ಸೆಂಟಿ ಗ್ರೇಡ್ ಉಷ್ಣಾಂಶ ಬೇಕು. ಆದರೆ, ಇವೆರಡು ವ್ಯತ್ಯಾಸಗಳೂ ಇದರ ಉತ್ಪಾದನೆಯ ಕುಸಿತಕ್ಕೆ ಕಾರಣ ಎನ್ನುವ ಅಳಲು ವಾಣಿಜ್ಯ ಬೇಸಾಯಗಾರನ್ನು ಕಾಡಿದೆ.

ಕೂಲಿ ಕಾರ್ಮಿಕರಿಗೆ ಬೇಡಿಕೆ
ಯಳಂದೂರು:
ಗಂಡಾಳುಗಳಿಗೆ ಬೇಡಿಕೆ ಹೆಚ್ಚಿಸುತ್ತಿದ್ದ ಮೆಣಸು ಉತ್ಪಾದನೆ ತಗ್ಗಿದೆ. ರೋಗಬಾಧೆ ತಟ್ಟಿದೆ. ₹ 300 ಕೂಲಿ ನೀಡಿ ತೋಟದ ನಿರ್ವಹಣೆ ಮಾಡುತ್ತಿದ್ದೇವೆ. ಕಾಫಿಗೆ ಡಿಸೆಂಬರ್ ಆರಂಭದಲ್ಲಿ ಬೆಳೆದ ಕಳೆಗಳನ್ನು ಕತ್ತರಿಸಿ, ಹೊದಿಕೆ ಮಾಡಿದ್ದೇವೆ.


ಈಗ ಚಳಿಗಾಲ ಹೆಚ್ಚುತ್ತಿದ್ದಂತೆ ಕಾಫಿ ಕಟಾವಿಗೆ ಬಂದಿದೆ. ಹೆಣ್ಣಾಳುಗಳಿಗೆ ₹ 200 ಕೂಲಿ ಕೊಟ್ಟು ಕೊಯ್ಲು ಮಾಡುತ್ತಿದ್ದೇವೆ. 1 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಆಶ್ರಯ 1.5 ಟನ್‌, ನೀರಾವರಿಯಲ್ಲಿ 2 ಟನ್‌ ಕಾಫಿ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಈ ಬಾರಿ ಅದರ ಅರ್ಧ ತಲುಪುವುದೂ ಅನುಮಾನ ಎನ್ನುತ್ತಾರೆ ಬಂಗ್ಲೇಪೋಡಿನ ಮಾದೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT