ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥೋತ್ಸವಕ್ಕೆ ಸಿದ್ಧವಾದ ಇಂಚಲ ಮಠ

ಡಿಸೆಂಬರ್ 29ರಿಂದ ಜ.2ರವರೆಗೆ ಇಂಚಲ ಶಿವಾನಂದ ಭಾರತಿ ಸ್ವಾಮೀಜಿ 77ನೇ ಜಯಂತ್ಯುತ್ಸವ
Last Updated 27 ಡಿಸೆಂಬರ್ 2016, 8:45 IST
ಅಕ್ಷರ ಗಾತ್ರ

ಬೈಲಹೊಂಗಲ: ಇಲ್ಲಿಗೆ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧುಸಂಸ್ಥಾನ ಮಠದಲ್ಲಿ ಇದೇ 29ರಿಂದ ಜನವರಿ 2ರವರೆಗೆ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 77ನೇ ಜಯಂತ್ಯುತ್ಸವ ಹಾಗೂ 47ನೇ ಅಖಿಲ ಭಾರತ ವೇದಾಂತ ಪರಿಷತ್, ರಜತ ರಥೋತ್ಸವ, ಮಹಾರಥೋತ್ಸವ ನಡೆಯಲಿದೆ.
ಇಂಚಲ ಸಾಧುಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಎಲ್ಲ ಸಮಾರಂಭಗಳ ಸಾನಿಧ್ಯ ವಹಿಸುವರು.

ಪ್ರತಿದಿನ ಬೆಳಿಗ್ಗೆ 4.30ಕ್ಕೆ ಕರ್ತುೃ ಗದ್ದುಗೆಗೆ ರುದ್ರಾಭಿಷೇಕ, 6.30ರಿಂದ 7.30ರ ವರೆಗೆ ಸರ್ವ ಮಹಾತ್ಮರಿಂದ ಶ್ರೀ ಮದ್ಭಗವದ್ಗೀತಾ ಪಾರಾಯಣ, 8ರಿಂದ 8.30ರ ವರೆಗೆ ಸಂಗೀತ ಸೇವೆ, 8.30 ರಿಂದ 11.30ರ ವರೆಗೆ ಮಹಾತ್ಮರಿಂದ ಅಧ್ಯಾತ್ಮ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 10.30ರ ವರೆಗೆ ಶ್ರೀಗಳ ತುಲಾಭಾರ, ಮಹಾಪೂಜೆ ನಡೆಯಲಿದೆ.

29ರಂದು ಬೆಳಿಗ್ಗೆ 6ಕ್ಕೆ ಹಂಪಿ ಹೇಮ ಕೂಟ ಶ್ರೀ ಶಿವರಾಮಾವಧೂತಾಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ ಪ್ರಣವ ಧ್ವಜಾರೋಹಣ ನೆರವೇರಿಸುವರು. ನಂತರ ಶ್ರೀಗಳಿಂದ ಕಳಸ ಸ್ಥಾಪನೆ ನಡೆಯಲಿದೆ. ಅಂದು ಬೆಳಿಗ್ಗೆ 8.30ಕ್ಕೆ ‘ಕರುಣ ವಿದ್ಯೆಗಳುಳ್ಳ ಗುರುಭಜನೆಯನು’ ಎಂಬ ವಿಷಯ ಕುರಿತು ವೇದಾಂತ ಪ್ರವಚನ ನಡೆಯಲಿದೆ. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 12ಕ್ಕೆ ಸಿದ್ದನಗೌಡ ಪಾಟೀಲ ನೇತೃತ್ವದಲ್ಲಿ ಅರವಳ್ಳಿ, ಇಂಚಲ ಗ್ರಾಮಗಳ ಸದ್ಭಕ್ತರಿಂದ ಇಂಚಲ ಶ್ರೀಗಳ ತುಲಾಭಾರ ನಡೆಯಲಿದೆ. ಸಂಜೆ 6.30ಕ್ಕೆ ‘ತೇಷಾಂ ಅಹಂ ಸಮುದ್ಧರ್ತಾ’ ವಿಷಯ ಕುರಿತು ಪ್ರವಚನ ನಡೆಯಲಿದೆ.

30ರಂದು ಬೆಳಿಗ್ಗೆ 8.30ಕ್ಕೆ ‘ಸುಮ್ಮನಾಗದು ವಿಧಿಯೊಳೊಂದದೆ ಮುಕ್ತಿ’ ಎಂಬ ವಿಷಯ ಕುರಿತ ಆಧ್ಯಾತ್ಮ ಪ್ರವಚನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಇಂಚಲದ ಮಲ್ಲಪ್ಪ ಬಾಳಪ್ಪ ಹಲಕಿ ಹಾಗೂ ಕುಟುಂಬದವರಿಂದ ಇಂಚಲ ಶ್ರೀಗಳ ತುಲಾಭಾರ ನೆರವೇರಲಿದೆ.

ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ‘ವಿಮಲ ಮಾನಸ ದಿಂದೆ ಶುಭತೀರ್ಥಮುಂಟೆ?’ ಎಂಬ ವಿಷಯ ಕುರಿತು ಆಧ್ಯಾತ್ಮ ಪ್ರವಚನ ನಡೆಯಲಿದೆ. ವಿಜಯಪುರದ ಷಣ್ಮುಖಾ ರೂಢ ಮಠದ ಶಿವಪುತ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

31ರಂದು ಬೆಳಿಗ್ಗೆ 8.30ಕ್ಕೆ ‘ಪರ ಬೊಮ್ಮದರು ವಿನಿಂದುರೆ ಜಾಣ್ಮೆ ಯುಂಟೆ?’ ಎಂಬ ವಿಷಯ ಕುರಿತು ಅಧ್ಯಾತ್ಮ ಪ್ರವಚನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಶ್ರೀಗಳ ತುಲಾಭಾರ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ‘ಶರಣತತಿಗೆ ಸಂತಸದೊಳು ಸವೆವುದುಂಬುದೆಂತು ತನುವಿದಳಿವುದಾಗಿ’ ವಿಷಯ ಕುರಿತು ಪ್ರವಚನ ನಡೆಯಲಿದೆ.

ಹುಕ್ಕೇರಿ ಶ್ರೀಗುರು ಶಾಂತೇಶ್ವರ ಸಂಸ್ಥಾನ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ವಿಜಯಪುರದ ಶಿವಪುತ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ಜನವರಿ 1ರಂದು ಬೆಳಿಗ್ಗೆ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಅಚ್ಚಳಿಯ ದಾಭರಣವಾವುದು?- ಬಗೆ ಗೊಳಿಸುವ ವಿದ್ಯೆ ಎಂಬು ವಿಷಯ ಕುರಿತ ಆಧ್ಯಾತ್ಮ ಪ್ರವಚನ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮ ದಲ್ಲಿ ಕರುಣದಿಂದತಿಶಯವಹ ಧರ್ಮ ಮುಂಟೆ? ಎಂಬ ವಿಷಯ ಕುರಿತು ಅಧ್ಯಾತ್ಮ ಪ್ರವಚನ ನಡೆಯಲಿದೆ. ಬೀದರ ಚಿದಂಬರ ಶ್ರೀಸಿದ್ಧಾರೂಢ ಆಶ್ರಮದ ಶಿವಕುಮಾರೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ನಂತರ ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ.

ಇಂಚಲ ಶ್ರೀಗಳ 77ನೇ ಜಯಂತ್ಯುತ್ಸವ ನಿಮಿತ್ತ ತೊಟ್ಟಿಲೋತ್ಸವ ಕಾರ್ಯಕ್ರಮ, ಸುವರ್ಣ ಸಿಂಹಾಸನಾ ರೋಹಣ, ಕನಕ ಕಿರೀಟ ಧಾರಣೆ, ಮಹಾಮಂಗಲ ನಡೆಯಲಿದೆ.
2ರಂದು ಬೆಳಿಗ್ಗೆ 8.30ಕ್ಕೆ  ನಡೆಯುವ ಕಾರ್ಯಕ್ರಮದಲ್ಲಿ ಗುರುವೇ ನಿಮ್ಮಯ ಕರುಣದೊಳೆನ್ನ ತತ್ವದಿರವನ ರಿದು ನಿತ್ಯ ಸುಖಿಯಾದೆ ಎಂಬ ವಿಷಯ ಕುರಿತು ಅಧ್ಯಾತ್ಮ ಪ್ರವಚನ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳು ನಡೆಯಲಿವೆ.

ಶಾಸಕ ಡಾ.ವಿಶ್ವನಾಥ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ಮಾಜಿ ಶಾಸಕ ಮಹಾಂತೇಶ ಕೌಜಲಗಿ ಆಗಮಿಸುವರು. ಮಧ್ಯಾಹ್ನ 2ಕ್ಕೆ ಶ್ರೀಗಳ ಪಲ್ಲಕ್ಕಿ ಉತ್ಸವ, ಸಂಜೆ 4.30ಕ್ಕೆ ಶ್ರೀಗಳ ರಜತ ರಥೋ ತ್ಸವ, ಸಂಜೆ 5ಕ್ಕೆ ಶಿವಯೋಗೀಶ್ವರರ ಮಹಾರಥೋತ್ಸವ ನಡೆಯಲಿದ್ದು, ಪ್ರತಿದಿನ ವಿವಿಧ ಮಠಮಾನ್ಯಗಳ ಪೂಜ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT