ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ: ಅಭ್ಯರ್ಥಿಗಳು ಖರ್ಚು ಮಾಡಿದ್ದು ₹14 ಸಾವಿರ ಕೋಟಿ

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಚುನಾವಣೆ ಸಂದರ್ಭ ಒಟ್ಟು  ₹ 14 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್‌ ಹಾಗೂ ಬೆಂಬಲಿಗರು ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಸುಮಾರು ₹2,300 ಕೋಟಿಯಷ್ಟು ಅಧಿಕ ಹಣ ವ್ಯಯಿಸಿದ್ದಾರೆ.

ಚುನಾವಣಾ ಆಯೋಗದ ವರದಿ, ತೆರಿಗೆ ಇಲಾಖೆಯ ದಾಖಲೆ ಮತ್ತು ಇತರ ವರದಿಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಹಿಲರಿ ಮತ್ತು ಟ್ರಂಪ್‌ ಅವರು ಚುನಾವಣೆಗೆ ಮುನ್ನ ಭಾರಿ ಪ್ರಚಾರ ಕೈಗೊಂಡಿದ್ದರು. ಹಿಲರಿ ಒಟ್ಟಾರೆಯಾಗಿ ತಮ್ಮ ಎದುರಾಳಿಗಿಂತ 28 ಲಕ್ಷ ಅಧಿಕ ಮತಗಳನ್ನು ಪಡೆದಿದ್ದರು. ಆದರೆ ಅಧಿಕ ಎಲೆಕ್ಟೋರಲ್‌ ಮತಗಳನ್ನು ಪಡೆದ ಕಾರಣ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಲು ಹಿಲರಿ ಜತೆ ಪೈಪೋಟಿ ನಡೆಸಿದ್ದ ಬೆರ್ನಿ ಸ್ಯಾಂಡರ್ಸ್‌ ₹ 1,577 ಕೋಟಿ ಖರ್ಚು ಮಾಡಿದ್ದಾರೆ.ಟ್ರಂಪ್‌ ಜತೆ ಪೈಪೋಟಿ ನಡೆಸಿದ್ದ ಟೆಡ್‌ ಕ್ರೂಜ್‌ ₹ 1.094 ಕೋಟಿ ಹಣ ವ್ಯಯಿಸಿದ್ದಾರೆ. ಇತರ ಅಭ್ಯರ್ಥಿಗಳಾದ ಜೆಬ್‌ ಬುಷ್‌ ಮತ್ತು ಮಾರ್ಕೊ ರೂಬಿಯೊ ಕ್ರಮವಾಗಿ ₹1,047 ಮತ್ತು ₹ 754 ಕೋಟಿ ಖರ್ಚು ಮಾಡಿರುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT