ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿ

Last Updated 31 ಡಿಸೆಂಬರ್ 2016, 8:55 IST
ಅಕ್ಷರ ಗಾತ್ರ

ಕೆಂಭಾವಿ:  ಇಡೀ ವಿಶ್ವಕ್ಕೆ ಮಾದ ರಿಯಾದ ಸಂವಿಧಾನವನ್ನು ರೂಪಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶದ ಸಂಪತ್ತು ಎಂದು ಶಾಸಕ ಗುರು ಪಾಟೀಲ ಸಿರವಾಳ ಹೇಳಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋ ಜಿಸಿದ್ದ ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಅಂಗವಾಗಿ ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ಜಿಲ್ಲಾ ಮಟ್ಟದ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಸಿ ಅವರು ಮಾತನಾಡಿದರು.

ಸಂವಿಧಾನದಲ್ಲಿರುವ ಅಂಶಗಳನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು. ಆಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ. ಸರ್ಕಾರ ಹಲವಾರು ಯೋಜ ನೆಗಳನ್ನು ರೂಪಿಸುತ್ತದೆ. ಅವುಗಳನ್ನು ಪಡೆಯಲು ಸಂವಿದಾನ ಸಹ ಕಾರಿಯಾಗಿದೆ ಎಂದರು.

ದೇಶದ ಸಂವಿಧಾನವನ್ನು ರಚನೆ ಮಾಡಿ ಅದರ ತತ್ವ ಸಿದ್ಧಾಂತದ ಆಧಾರದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಅಂಬೇಡ್ಕರ ಅವರ ಕೊಡುಗೆ ಅಪಾರ ಎಂದು  ಹೇಳಿದರು.

ಮಳಖೇಡದ ಹಜರತ್ ಸಯ್ಯದ ಶಾ ಖಾದರಿ ಮಾತನಾಡಿ, ಅಂಬೇಡ್ಕರ್‌ ಅವರು ಜಗತ್ತಿನ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಅವರ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ನಡೆಯಬೇಕು ಎಂದು ಹೇಳಿದರು.

ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಬಸನಗೌಡ ಯಡಿಯಾಪೂರ, ಹೊನ್ನಪ್ಪ ರಸ್ತಾಪೂರ, ಜೀವನಹಳ್ಳಿ ವೆಂಕಟೇಶ, ಮಲ್ಲಿಕಾರ್ಜುನ ಪೂಜಾರಿ, ಬಸನಗೌಡ ಹೊಸಮನಿ, ನೀಲಕಂಠ ಬಡಿಗೇರ, ಈಶ್ವರ ಬಡಿಗೇರ, ರುದ್ರಗೌಡ ಚಿಂಚೋಳಿ, ಶಂಕರಗೌಡ ಹೊಸಮನಿ, ಭೀಮರಾವ ನಾಟೇಕಾರ, ಅಯ್ಯಪ್ಪಗೌಡ ವಂದಗನೂರ, ಅಶೋಕ ಸೊನ್ನದ, ಅಪ್ಪಾಸಾಹೇಬಗೌಡ ಮಾಲಿಪಾಟೀಲ, ಸೋಮಲಿಂಗಪ್ಪ ದೊಡಮನಿ, ಪ್ರಶಾಂತ ದೊಡಮನಿ, ಶಿವಶರಣ ಯಾಳಗಿ ಸೇರಿದಂತೆ ವಿವಿಧ ದಲಿತ ನಾಯಕರು ಇದ್ದರು.
ಮಲ್ಲಿಕಾರ್ಜುನ ಸಜ್ಜನ ನಿರೂಪಿಸಿದರು, ತಿಪ್ಪಣ್ಣ ಶಿಕ್ಷಕರು ಸ್ವಾಗತಿಸಿದರು, ಗೋಪಾಲ ತಳವಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT