ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ, ನಾಟಕಕಾರ ಸಿದ್ಧಲಿಂಗ ದೇಸಾಯಿ

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಕವಿ, ನಾಟಕಕಾರ ಸಿದ್ಧಲಿಂಗ ದೇಸಾಯಿ (75) ಭಾನುವಾರ ಮುಂಜಾನೆ ಇಲ್ಲಿ ನಿಧನರಾದರು.
ತಾಲ್ಲೂಕಿನ ಮುಮ್ಮಿಗಟ್ಟಿಯ ನಿವಾಸಿಯಾಗಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ–ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿ ಭಾಷಾಂತರ ಸಹಾಯಕರಾಗಿ ಹಾಗೂ ಕರ್ನಾಟಕ ಏಕೀಕರಣ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
‘ಚಿಗಳಿ’, ‘ಕ್ಯಾದಗೀ ಜವುಳು’, ‘ಕವಿ ಸಂಹಾರ’ ಅವರ ಕವನ ಸಂಕಲನಗಳು. ‘ಉಂಡ ನೀರು ಉಗುಳುದರಾಗ ಬಂದ್‌ ನಿಲ್ಲತಿ ಬಾಗಲ್ದಾಗ... ಎಂಬ ಅವರ ಹಾಡು ಉತ್ತರ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿತ್ತು.

‘ಸಿಕ್ಕೇದುಂಗುರ’  ರೇಡಿಯೋ ನಾಟಕ 1987ರ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಹಲವಾರು ರಂಗ ಪ್ರದರ್ಶನ ಕಂಡಿದೆ.
‘ಚಿಮಣಾ’ ಎಂಬ ಇನ್ನೊಂದು ನಾಟಕ ಉತ್ತಮ ಬಾನುಲಿ ನಾಟಕ ಪ್ರಶಸ್ತಿ ಪಡೆದು ರಾಷ್ಟ್ರೀಯ ನಾಟಕವಾಗಿ ಪ್ರಸಾರಗೊಂಡಿತ್ತು.
ಕರ್ನಾಟಕ- ಮಹಾರಾಷ್ಟ್ರ ಗಡಿ ಚಳವಳಿಯಿಂದ ಜೆಪಿ ಅವರ ನವ ನಿರ್ಮಾಣ ಕ್ರಾಂತಿ, ಗೋಕಾಕ ಕನ್ನಡ ಚಳವಳಿ ಹೀಗೆ ಅನೇಕ ಸಾಮಾಜಿಕ, ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ದೇಸಾಯಿ ಅವರು ಹಲವಾರು ವರ್ಷಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾಗಿದ್ದರು.

ಮುಮ್ಮಿಗಟ್ಟಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.
ಚಿಕ್ಕಹೊಂಬಾಳೇಗೌಡ


ಭಾರತೀನಗರ (ಮಂಡ್ಯ ಜಿಲ್ಲೆ): ಕೆಎಎಸ್‌ ಅಧಿಕಾರಿ ಭೀಮಾ ನಾಯ್ಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಕಾರು ಚಾಲಕ ರಮೇಶ್‌ ಅವರ ತಂದೆ ಚಿಕ್ಕಹೊಂಬಾಳೇಗೌಡ (70) ಭಾನುವಾರ ಬೆಳಿಗ್ಗೆ ನಿಧನರಾದರು.

ಇಲ್ಲಿಗೆ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದ ಅವರ ಮನೆಯಲ್ಲಿ ಮೃತಪಟ್ಟರು. ಪತ್ನಿ, ಪುತ್ರ ಇದ್ದಾರೆ. ಚಿಕ್ಕಹೊಂಬಾಳೇಗೌಡ ಅವರ ಒಬ್ಬ ಪುತ್ರ ರಮೇಶ್‌, ಕೆಎಎಸ್‌ ಅಧಿಕಾರಿ ಭೀಮಾ ನಾಯ್ಕ ಹಾಗೂ ಮಹಮ್ಮದ್‌ ಅವರ ಕಿರುಕುಳದಿಂದ ಬೇಸತ್ತು ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪುತ್ರನ ಅಕಾಲಿಕ ಮರಣದಿಂದ ತಂದೆ ತೀವ್ರ ನೊಂದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT