ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟು ರದ್ದು: ಮೋದಿ ನಿರ್ಧಾರ ವಿನಾಶಕಾರಿ’

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದು ನಿರ್ಧಾರ ‘ವಿನಾಶಕಾರಿ’ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಟೀವ್‌ ಎಚ್‌. ಹ್ಯಾಂಕ್‌  ಟೀಕಿಸಿದ್ದಾರೆ. 
 
‘ಮೋದಿ ಅವರ ನಿರ್ಧಾರ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ’ ಎಂದು  ಬುಧವಾರ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ. 
 
‘ಭಾರತದ ಅರ್ಥ ವ್ಯವಸ್ಥೆಯ ಮೇಲೆ ನೋಟು ರದ್ದು ಪರಿಣಾಮ ಕುರಿತು ನನ್ನ ಊಹೆ ಹುಸಿ ಆಗದು. ನಾನು  ಹೇಳಿರುವುದು  ಖಂಡಿತವಾಗಿಯೂ  ನಿಜವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಆನ್ವಯಿಕ ಅರ್ಥಶಾಸ್ತ್ರಜ್ಞರಾಗಿ ಹ್ಯಾಂಕ್‌ ಕೆಲಸ ಮಾಡುತ್ತಿದ್ದಾರೆ.  
 
ಸಂಕಷ್ಟ ತರಲಿದೆಯೇ 2017?: ‘ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ  ಮುಂಚೂಣಿಯಲ್ಲಿದ್ದ ಭಾರತದ ಸ್ಥಾನ  2017ರಲ್ಲಿ ಕುಸಿತ ಕಾಣಲಿದೆ’  ಎಂದು ಅವರು ಭವಿಷ್ಯ ಹೇಳಿದ್ದಾರೆ. 
 
‘ತಯಾರಿಕಾ ವಲಯಕ್ಕೆ ಭಾರಿ ದೊಡ್ಡ ಪೆಟ್ಟು ಬಿದ್ದಿದ್ದು, ಅಂತಿಮವಾಗಿ ದೇಶದ  ಆರ್ಥಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆರ್ಥಿಕ ಕುಸಿತ ತಡೆಯಲು ಮತ್ತು ಹೂಡಿಕೆ ಉತ್ತೇಜಿಸುವ ಉದ್ದೇಶದಿಂದ ಭಾರತದ ಬ್ಯಾಂಕ್‌ಗಳು ಇದೀಗ ಬಡ್ಡಿದರ ಕಡಿತದ ಸಾಹಸಕ್ಕೆ ಕೈ ಹಾಕಿವೆ’ ಎಂದು  ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT