ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರೊ ಟು ಹೀರೊ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ತಂದೆಯೊಬ್ಬ ಕಷ್ಟಪಟ್ಟು ಅಣೆಕಟ್ಟು ಯೋಜನೆಯ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿರುತ್ತಾನೆ. ಆದರೆ, ಅದನ್ನು ಪ್ರೆಸೆಂಟ್ ಮಾಡಬೇಕಾದ ದಿನ ಆತನಿಗೆ ದನಿ ಬರುವುದಿಲ್ಲ. ಎಲ್ಲರ ಮುಂದೆಯೂ ಮುಜುಗರ ಅನುಭವಿಸುತ್ತಾನೆ. ನನ್ನ ಕನಸಿನ ಪ್ರಾಜೆಕ್ಟ್ ಇನ್ನೇನೂ ಕೈ ತಪ್ಪುತ್ತದೆ ಎಂಬ ಚಡಪಡಿಕೆಯಲ್ಲಿದ್ದಾಗ, ಆತನ ಮಗ ಸ್ಥಳಕ್ಕೆ ಬರುತ್ತಾನೆ. ತಂದೆಯೇ ಪ್ರಾಜೆಕ್ಟ್‌ ಬಗ್ಗೆ ಅಲ್ಲಿದ್ದವರಿಗೆ ವಿವರಿಸಿ, ಕಡೆಗೆ ಅದು ತಂದೆಗೇ ಒಲಿಯುವಂತೆ ಮಾಡುತ್ತಾನೆ. ಅಲ್ಲಿಗೆ ಶುಭಂ.

ಕತ್ತಲ ಚಿತ್ರಮಂದಿರದಲ್ಲಿ ಬೆಳಕು ಹರಿದ ತಕ್ಷಣ ಚಪ್ಪಾಳೆ ಕೇಳಿಬಂತು. ಈಗಾಗಲೇ ರಾಜ್ಯದ 15 ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಿರುವ ‘ಜಿರೋ ಮೇಡ್‌ ಇನ್ ಇಂಡಿಯಾ’ ಚಿತ್ರ ಹಲವು ವಿಷಯಗಳಿಗೆ ಗಮನಸೆಳೆದಿದೆ. ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗುವ ಜತೆಗೆ, ಚಲನಚಿತ್ರ ಪ್ರಶಸ್ತಿಗಳ ಸಮೀಪಕ್ಕೆ ಹೋಗಿರುವುದು ಇದರಲ್ಲಿ ಒಂದು. ಶಾಲೆಯಲ್ಲಿ ಜೀರೊ ಎಂದು ಎಲ್ಲರಿಂದ ಕರೆಯಿಸಿಕೊಳ್ಳುವ ವಿದ್ಯಾರ್ಥಿ, ಕಡೆಗೆ ಅದೇ ಶಾಲೆಗೆ ಹಾಗೂ ತಂದೆ ಪಾಲಿಗೆ ಹೀರೊ ಆಗುವುದು ಈ ಚಿತ್ರದ ತಿರುಳು.

ಹಾಸನದ ಗಿರಿದೇವ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ಆ್ಯಕ್ಷನ್‌–ಕಟ್ ಹೇಳಿರುವ ಚಿತ್ರವಿದು. ‘ಇದು ನನ್ನ ಮೊದಲ ಪ್ರಯತ್ನ. ಕಮ್ಮಿ ಬಜೆಟ್‌ನ ಚಿತ್ರ ಇದಾಗಿದ್ದು, ಪ್ರಚಾರದ ಕೊರತೆಯಿಂದಾಗಿ ಹೆಚ್ಚು ಜನರಿಗೆ ತಲುಪುತ್ತಿಲ್ಲ. ಇದೀಗ ಸುಮಾರು 20 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ’ ಎಂದು ಗಿರಿದೇವ್ ಹೇಳಿದರು.

ಈಗಾಗಲೇ ಹಲವು ಡಾನ್ಸ್‌ ಷೋಗಳಲ್ಲಿ ಗಮನ ಸೆಳೆದಿರುವ ಮಾಸ್ಟರ್ ಮಧುಸೂದನ್ ಈ ಚಿತ್ರದ ಪ್ರಮುಖ ಆಕರ್ಷಣೆ. ‘ಈ ಚಿತ್ರದಲ್ಲಿ ನಾನು ಮಾಡಿರೊ ಇಂಪಾರ್ಟೆಂಟ್ ರೋಲ್ ಹಾಗೂ ಹಾಡಿರುವ ಹಾಡು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ. ದಯವಿಟ್ಟು ನನಗೆ ಸಪೋರ್ಟ್ ಮಾಡಿ ಪ್ಲೀಸ್’ ಎಂದು ಮಧುಸೂದನ್ ಮನವಿ ಮಾಡಿದ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟರಾಜ್ ಅವಕಾಶ ನೀಡಿದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರಕ್ಕೆ ಬಂಡವಾಳ ಹಾಕಿರುವ ಎ.ಜಿ.  ವೈದ್ಯ, ಅನನ್ಯಾ ಜಿ., ಹರಿದೇವ್, ಎಂ. ಸಾಧಿಕ್ ಹಾಗೂ ಆದ್ಯ, ‘ಮನ ಮುಟ್ಟುವಂತಿರುವ ತಂದೆ–ಮಗನ ಚಿತ್ರದ ಕಥೆ ಬಂಡವಾಳ ಹಾಕಲು ಪ್ರೇರೇಪಿಸಿತು’ ಎಂದರು. ಪರಾಗ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ತಾಂತ್ರಿಕವರ್ಗ ಯಾವುದೇ ಸಂಭಾವನೆ ಪಡೆಯದೇ ಚಿತ್ರಕ್ಕೆ ದುಡಿದಿರುವುದು ವಿಶೇಷ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT