ಪ್ರತೀಕಾರ

ಫ್ಲೊರಿಡಾದ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ: 5 ಸಾವು

ಅಮೆರಿಕದ ಫ್ಲೊರಿಡಾದ ಫೋರ್ಟ್‌ ಲೌಡರ್ಡೇಲ್‌ ವಿಮಾನ ನಿಲ್ದಾಣದಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ (ಸ್ಥಳೀಯ ಕಾಲಮಾನ) ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯ ಭೀತಿಯಿಂದ ಓಡಿದ ಪ್ರಯಾಣಿಕರು –ಎಎಫ್‌ಪಿ ಚಿತ್ರ
ಫ್ಲೊರಿಡಾ: ಅಮೆರಿಕದ ಫ್ಲೊರಿಡಾದ ಫೋರ್ಟ್‌ ಲೌಡರ್ಡೇಲ್‌ ವಿಮಾನ ನಿಲ್ದಾಣದಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ (ಸ್ಥಳೀಯ ಕಾಲಮಾನ) ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.
 
ವಿಮಾನ ನಿಲ್ದಾಣದ ಲಗೇಜ್‌ ಇಳಿಸಿಕೊಳ್ಳುವ ಪ್ರದೇಶದಲ್ಲಿ (Baggage claim area) ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ. 
 
ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಕೋರ ಅಲಾಸ್ಕಾ ಮೂಲದ ಎಸ್ಟೆಬನ್‌ ಸ್ಯಾಂಟಿಯಾಗೊ (26) ಎಂದು ಗುರುತಿಸಲಾಗಿದೆ. ಈತ ಇರಾಕ್‌ನ ನ್ಯಾಷನಲ್‌ ಗಾರ್ಡ್‌ನಲ್ಲಿ ಸೈನಿಕನಾಗಿದ್ದ. ಸೇವೆ ತೃಪ್ತಿದಾಯಕವಾಗಿಲ್ಲ ಎಂಬ ಕಾರಣ ನೀಡಿ ಕಳೆದ ವರ್ಷ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ.
 
ಎಸ್ಟೆಬನ್‌ ಸ್ಯಾಂಟಿಯಾಗೊ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಸಹೋದರ ತಿಳಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಆದರೆ, ಈ ದಾಳಿಗೆ ಕಾರಣವೇನು ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments
ಈ ವಿಭಾಗದಿಂದ ಇನ್ನಷ್ಟು
ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಮಾಜಿ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌

ವಿದೇಶ
ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಮಾಜಿ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌

23 Mar, 2018
ಶುದ್ಧ ನೀರಿಗಾಗಿ ಪ್ರತಿ ದಿನ ಈಜುವ ಇಂಡೊನೇಷ್ಯಾ ಮಹಿಳೆ

ವಿದೇಶ
ಶುದ್ಧ ನೀರಿಗಾಗಿ ಪ್ರತಿ ದಿನ ಈಜುವ ಇಂಡೊನೇಷ್ಯಾ ಮಹಿಳೆ

23 Mar, 2018

ವಿದೇಶ
ಪಾಕ್‌ ಹೈಕಮಿಷನರ್‌ ಭಾರತಕ್ಕೆ ವಾಪಸ್‌

ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನರ್‌ ಸೊಹೈಲ್‌ ಮಹಮೂದ್‌ ಅವರು ಗುರುವಾರ ರಾತ್ರಿ ಇಸ್ಲಾಮಾಬಾದ್‌ನಿಂದ ಹಿಂತಿರುಗಿದ್ದಾರೆ.

23 Mar, 2018
ಮಾಲ್ಡೀವ್ಸ್‌: ತುರ್ತು ಪರಿಸ್ಥಿತಿ ರದ್ದು

ಕೊಲಂಬೊ
ಮಾಲ್ಡೀವ್ಸ್‌: ತುರ್ತು ಪರಿಸ್ಥಿತಿ ರದ್ದು

23 Mar, 2018

ಬೀಜಿಂಗ್‌
ಕ್ಷಿಪಣಿ ಮೇಲೆ ನಿಗಾವಹಿಸುವ ಉಪಕರಣ ಖರೀದಿಸಿದ ಪಾಕಿಸ್ತಾನ

ಕ್ಷಿಪಣಿಗಳ ಮೇಲೆ ನಿಗಾ ವಹಿಸುವ ಶಕ್ತಿಶಾಲಿ ಉಪಕರಣವನ್ನು ಪಾಕಿಸ್ತಾನಕ್ಕೆ ಚೀನಾ ಮಾರಾಟ ಮಾಡಿದೆ.

23 Mar, 2018