ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ನಾಯಿ

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ದೊಡ್ಡ ನಾಯಿ
ಬೌ ಬೌ ಅಂತು
ಕಲ್ ಎತ್ಕೊಂಡೆ
ಕುಂಯ್ ಕುಂಯ್ ಅಂತು
ನಂಗೆ ಬಾರಿ ನಗು ಬಂತು

ಹೆದ್ರಕೋ ಬೇಡ
ಅಂದ್ಬಿಟ್ಟೆ
ನಾಯಿ ಹತ್ರ ಬರ್ಲಿಲ್ಲ
ಬಿಸ್ಕತ್ ಎತ್ಕೊಂಡ್
ತೋರ್‌ಸ್ಬಿಟ್ಟೆ
ಬಾಲ ರೈಟ್ ಲೆಫ್ಟ್ ಅಂದ್ಬಿಡ್ತು

ಕತ್ಲಲಿ ಮನೆಯ
ಕಾಯ್ತಿ ನೀನು
ಹಗಲಲಿ ಕೆಲ್ಸ
ನಿಂಗೇನು?
ನಾಯಿ ಬಿಸ್ಕತ್ ತಿಂತಿತ್ತು
ಬಾಲ ರೈಟ್ ಲೆಫ್ಟ್ ಅಂತಿತ್ತು

ಬಿಸ್ಕತ್ ಖಾಲಿ
ಆಗ್ಬಿಡ್ತು
ನಾಯಿ ನನ್ನನು
ನೋಡ್ತಿತ್ತು
ಇನ್ನೂ ಬಿಸ್ಕತ್ ಕೊಡುವೆ ನಿಂಗೆ
ನಂಗೆ ಹೆಲ್ಪು ಮಾಡುವೆಯಾ?


ತಂದ್ಕೊಡು ನಂಗೊಂದ್
ನಾಯಿ ಮರಿ
ಇಲ್ಲ ಅನ್ಬೇಡ
ಜಾಣಮರಿ
ಬೌ ಬೌ ಅನ್ನುತ ಎದ್ ನಿಲ್ತು
ಓಣಿಯ ತಿರುವಲಿ ಓಡ್ ಹೋಯ್ತು

*
ಕಾನ್ಸಂಟ್ರೇಷನ್ ಕಲ್ಸು

ಮರವೇ ನಿಂಗೆ ಮೂವ್‌ಮೆಂಟ್ ಇಲ್ಲ
ಓಡಾಡ್ಬೇಕು ಅನ್ಸಲ್ವಾ?
ನಿಂತೂ ನಿಂತು ನಡ ನೋಯಲ್ವಾ
ಮಲಗ್ಬೇಕು ಅನ್ಸಲ್ವಾ?

ನಿನ್ನ ಊಟ ಗಾಳಿ ಎಂದೂ
ಒಂದ್ಕಡೆ ನಿಂತಲ್ ನಿಲ್ಲಲ್ಲ!
ಮೋಡವು ನಿನ್ನಯ ಫ್ರೆಂಡಂತಲ್ಲ
ಅದಕೂ ನಿಲ್ಲೋದ್ ಗೊತ್ತಿಲ್ಲ!

ಬೆಂಕಿ ಕಂಡ್ರೆ ನಿಂಗ್ ಭಯ ಅಲ್ವಾ
ಉರೀತಾ ಹರಿಯುತ್ತಲ್ಲ!
ನಿನ್ನಯ ಶತ್ರು ಮಾನವ ಕೂಡ
ಅರೆಕ್ಷಣ ನಿಂತಲ್ ನಿಲ್ಲಲ್ಲ!

ಒಂದ್ಕಡೆ ಹುಟ್ಟಿ ಅಲ್ಲೇ ಬೆಳೆದು
ಅಲ್ಲೇ ಬದುಕನು ಕಳಿತೀಯಾ!
ಭೂಮಿಲಿ ಹುಟ್ಟಿ ಬೆಳೆವಾ ಜೀವಕೆ
ಹಸಿರನು ಉಸಿರನು ನೀಡ್ತಿಯಾ!

ಮರವೇ ಮರವೆ ಕಾನ್ಸಂಟ್ರೇಷನ್
ನಂಗೂ ಸಲ್ಪ ಕಲ್ಸಪ್ಪ!
ಮರ್ಕಟ ಬುದ್ಧಿ ಅಂತ ಟೀಚರ್
ಬಯ್ಯೋದನ್ನ ತಪ್ಸಪ್ಪ!

*
ಥಂಡಿಯ ತಾತ ಬಂದಿರಲು...

ಗಡ ಗಡ ಗಡ ಗಡ ನಡುಗಿತು ಜನತೆ
ಥಂಡಿಯ ತಾತ ಬಂದಿರಲು
ಗುರು ಗುರು ಗುರು ಗುರು ನಿದ್ದೆಯ ಮಾಡಿತು
ಕಂಬಳಿಯನ್ನು ಹೊತ್ತಿರಲು

ಕಟ ಕಟ ಕಟ ಕಟ ಹಲ್ಲನು ಕಡಿದರು
ಗಾಳಿಯನೇರಿ ನೀ ಬರಲು
ನಿಗಿ ನಿಗಿ ನಿಗಿ ನಿಗಿ ಬೆಂಕಿಯ ಝಳಕೆ
ನಿಂತರು ನಡುಗನು ಓಡಿಸಲು

ಕುರು ಕುರು ಕುರು ಕರು ಚುರುಮರಿ ಚೂಡಾ
ರುಚಿಕರ ತಿನ್ನಲು ಥಂಡಿಯಲಿ
ಬಿಸಿ ಬಿಸಿ ಬಿಸಿ ಬಿಸಿ ಬೆಚ್ಚನ ಚಹವು
ಹಿತಕರ ಹುರುಪನು ಹೆಚ್ಚಿಸಲು

ಗಳ ಗಳ ಗಳ ಗಳ ಎಲೆಗಳು ಉದುರಲು
ಹಸುರಿನ ಬನಗಳು ಬಾಡಿರಲು
ಹೆಜ್ಜೆಯ ಹಾಕುತ ಸುಗ್ಗಿಯು ಬಂದಿತು
ಫೈರನು ಚಳಿಯು ಮಾಗಿಸಲು
– ಡಾ. ಕರವೀರಪ್ರಭು ಕ್ಯಾಲಕೊಂಡ, ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT