ನವದೆಹಲಿ: ನೋಟು ರದ್ದತಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ನೋಟಿಸ್ ನೀಡಿದ್ದು, ಇದೇ 20ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ನಡೆಯಲಿದೆ.

ನೋಟು ರದ್ದತಿ ನಿರ್ಧಾರ ಪ್ರಕ್ರಿಯೆ ಮತ್ತು ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್ ಸಂಸದ ಕೆ.ವಿ. ಥಾಮಸ್ ನೇತೃತ್ವದ ಸಮಿತಿ ವಿವರ ಕೇಳಲಿದೆ. ಸಮಿತಿಯ ಪ್ರಶ್ನೆಗಳಿಗೆ ಉತ್ತರಿಸಲು ಉರ್ಜಿತ್ ಪಟೇಲ್ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ನಿಯಮಾವಳಿಗಳ ಸಂಸದೀಯ ಸಮಿತಿಯೂ ಈ ಸಂಬಂಧ ಉರ್ಜಿತ್ ಅವರಿಗೆ ನೋಟಿಸ್ ನೀಡಿತ್ತು.

ನಾವು ಉರ್ಜಿತ್ ಪಟೇಸ್ ಅವರಿಗೆ ಪ್ರಶ್ನೆಗಳನ್ನು ಕಳುಹಿಸಿದ್ದು, ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಜನವರಿ 20ರ ಮುಂಚಿತವಾಗಿ ಅವರು ಉತ್ತರಗಳನ್ನು ಕಳುಹಿಸಲಿದ್ದಾರೆ. ಅವರ ಉತ್ತರ ಸಿಕ್ಕಿದ ನಂತರ ಆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ಕೆವಿ ಥಾಮಸ್ ಹೇಳಿದ್ದಾರೆ.

ಒಂದು ವೇಳೆ ಉರ್ಜಿತ್ ಅವರು ನೀಡಿರುವ ವಿವರಣೆ ತೃಪ್ತಿಕರವಲ್ಲದೇ ಇದ್ದರೆ, ಪ್ರಧಾನಿ ಮೋದಿಯವರಿಗೆ ನೋಟಿಸ್ ನೀಡಲಾಗುವುದೇ? ಎಂಬ ಪ್ರಶ್ನೆಗೆ ಉತ್ತರಿದ ಥಾಮಸ್, ನೋಟು ರದ್ದತಿ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ವ್ಯಕ್ತಿಯಲ್ಲಿ ವಿವರಣೆ ಕೇಳಬಹುದು.

ಆದರೆ ಜನವರಿ 20ರಂದು ನಡೆಯಲಿರುವ ಸಭೆಯ ನಂತರವೇ ಈ ಬಗ್ಗೆ ಯೋಚಿಸಲಾಗುವುದು. ಒಂದು ವೇಳೆ ನಮ್ಮ ಸದಸ್ಯರು ತೀರ್ಮಾನಿಸುವುದಾದರೆ ಪ್ರಧಾನಿಯವರಲ್ಲಿಯೂ ವಿವರಣೆ ಕೇಳಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.