ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಅರಿವಿಗೆ ‘ದಿ ಜಂಗಲ್‌್ ಬಾಯ್‌’ ವಿಡಿಯೊ

Last Updated 11 ಜನವರಿ 2017, 8:33 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಾಧವ ಸಿನಿಮಾಟೊಗ್ರಾಫರ್‌್ಸ್‌ ತಂಡದವರು ಸಿದ್ಧಪಡಿಸಿರುವ ದಿ ಜಂಗಲ್‌ ಬುಕ್‌ ಮಾದರಿಯ ಪರಿಸರ ಅರಿವಿನ ‘ದಿ ಜಂಗಲ್‌ ಬಾಯ್‌’  ವಿಡಿಯೊ ಸಿಡಿಯನ್ನು ಸೇಂಟ್‌ ಪಾಲ್ಸ್‌ ಶಾಲೆಯಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.

ಈ ವಿಡಿಯೊದಲ್ಲಿ ಮೋಗ್ಲಿಯ ಮಾದರಿಯ ಪಾತ್ರದಲ್ಲಿ ಸೇಂಟ್‌್ ಪಾಲ್ಸ್‌ ಶಾಲೆಯ 3ನೇ ತರಗತಿ ವಿದ್ಯಾರ್ಥಿ ನೀಲ್‌ ಅಮಿತ್‌ ಕೊಸಾಂಡಲ್‌ ಅಭಿನಯಿಸಿ ದ್ದಾನೆ. ಮೂರುವರೆ ನಿಮಿಷದ ಈ ವಿಡಿಯೊ ಅನ್ನು ಕಾಡಿನಲ್ಲಿಯೇ ಚಿತ್ರೀಕರಿಸಲಾಗಿದೆ. ವನ್ಯಪ್ರಾಣಿಗಳನ್ನು ವಿಡಿಯೊದೊಂದಿಗೆ ಜೋಡಿಸಿ ಮಿಕ್ಸ್‌ ಮಾಡಲಾಗಿದೆ. ತಕ್ಷಣಕ್ಕೆ ಜಂಗಲ್‌ ಬುಕ್‌ ಚಿತ್ರವನ್ನೇ ನೋಡಿದಂತೆ ಭಾಸವಾಗುವಂತಿದೆ.

‘ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಉದ್ದೇಶದಿಂದ ಈ ವಿಡಿಯೊ ಸಿದ್ಧಪಡಿಸಲಾಗಿದೆ. ವಿಡಿಯೊದ ಕೊನೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವ, ಕಾಡು ಉಳಿಸುವುದು, ನೀರು, ಗಾಳಿ ಹಾಗೂ ಮರ–ಗಿಡಗಳ ಸಂರಕ್ಷಣೆ, ಮಾಲಿನ್ಯ ವಾಗದಂತೆ ನೋಡಿಕೊಳ್ಳುವುದು, ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಸಂದೇಶ ಸಾರಲಾಗಿದೆ. ಮಕ್ಕಳು ಇದನ್ನು ನೋಡುವುದರಿಂದ ಪರಿಸರದ ಮಹತ್ವ ತಿಳಿಯುತ್ತದೆ’ ಎಂದು ಜಾಧವ ಸಿನಿಮಾಟೊಗ್ರಾಫರ್‌್ಸ್‌ನ ಜೆ. ಪ್ರಶಾಂತ್‌ ಹೇಳಿದರು.
‘ಈ ವಿಡಿಯೊ ವೀಕ್ಷಿಸಲು https://www.youtube.com/watch?v=4A5HmuAarK8 ಕೊಂಡಿ ಸಂಪರ್ಕಿಸಬಹುದು’ ಎಂದರು.

ಸಿಡಿ ಬಿಡುಗಡೆ ಮಾಡಿದ ಫಾ. ಬಾಸಿಲ್‌ ವಾಗೋ, ‘ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ವಿಡಿಯೊ ಚೆನ್ನಾಗಿ ಮೂಡಿಬಂದಿದೆ.
ಇಂಥ ವಿನೂತನ ಪ್ರಯತ್ನಗಳಿಗೆ ಪ್ರೋತ್ಸಾಹ ದೊರೆಯ ಬೇಕು’ ಎಂದು ಅವರು  ಆಶಿಸಿದರು.

ಜಾಧವ ಸಿನಿಮಾಟೊಗ್ರಾಫರ್‌್ಸ್‌ನ ಜೆ. ಗುರುನಾಥ, ವಿನೋದ ಪಾರಿಶ್ವಾಡ, ಬಾಲಕ ನೀಲ್‌ ಹಾಗೂ ಅವರ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT