ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಮೂಲ್‌’; ₹ 22 ಕೋಟಿ ನಿವ್ವಳ ಲಾಭ

ಕಾಫಿ ಡೇ ಸಂಸ್ಥೆಗೆ ತಿಂಗಳಿಗೆ 3 ಲಕ್ಷ ಲೀಟರ್‌ ಹಾಲು ಸರಬರಾಜು; ರೇವಣ್ಣ ಹೇಳಿಕೆ
Last Updated 13 ಜನವರಿ 2017, 8:39 IST
ಅಕ್ಷರ ಗಾತ್ರ
ಹಾಸನ: ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್‌) 2016ರ ನವೆಂಬರ್‌ ಅಂತ್ಯಕ್ಕೆ ₹ 650 ಕೋಟಿ ವಹಿವಾಟು ನಡೆಸಿ, ₹ 22.59 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ತಿಳಿಸಿದರು.
 
ಒಕ್ಕೂಟದ ಅಧ್ಯಕ್ಷನಾದಾಗ ಕೇವಲ ₹ 25 ಕೋಟಿ ವಹಿ ವಾಟು ಇತ್ತು.
 
ನವೆಂಬರ್‌ ಅಂತ್ಯಕ್ಕೆ ₹ 650 ಕೋಟಿ ವಹಿ ವಾಟು ನಡೆಸಿದ್ದು, 2017ರ ಅಂತ್ಯಕ್ಕೆ ಒಂದು ಸಾವಿರ ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ. 
 
ಬರಗಾಲದಲ್ಲಿ ರೈತರಿಗೆ ನೆರವು ನೀಡುವ ಹಿನ್ನಲೆಯಲ್ಲಿ ಉತ್ಪಾದಕರಿಗೆ ಅಕ್ಟೋಬರ್‌ ತಿಂಗಳಿಂದ ಪ್ರತಿ ಲೀಟರ್ ಹಾಲಿಗೆ ₹ 1.50ರಂತೆ ಖರೀದಿ ದರ ಹೆಚ್ಚಿಸಲಾಗಿದೆ. ಪ್ರಸ್ತುತ ಉತ್ಪಾದಕರಿಗೆ ಶೇಕಡಾ 3.5 ಜಿಡ್ಡು ಮತ್ತು ಶೇಕಡಾ 8.5 ಘನಾಂಶವಿರುವ ಹಾಲಿಗೆ ₹ 24.80 ರಂತೆ ಪಾವತಿಸಲಾಗುತ್ತಿದೆ. ಲಾಭದ ಹಣವನ್ನು ರೈತರ ಖಾತೆಗೆ ಡಿಸೆಂಬರ್‌ ನಿಂದ ಜಮಾ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.
 
ಹೈದರಬಾದ್‌ನಲ್ಲಿ ಮಾರಾಟ ಮಾಡುತ್ತಿರುವ ನಂದಿನಿ ಬ್ರಾಂಡ್‌ನ ಹಾಲಿನ ಮಾರುಕಟ್ಟೆಯನ್ನು ಅಕ್ಟೋಬರ್‌ ನಿಂದ ‘ಅಮೂಲ್’ ವಹಿಸಿಕೊಂಡಿದ್ದು, ಪ್ರತಿ ದಿನ 80 ಸಾವಿರ ಲೀಟರ್‌ನಷ್ಟು ಹಾಲು ಮತ್ತು ಮೊಸರು ಮಾರಾಟ ಮಾಡಲಾಗುತ್ತಿದ್ದು, ಡಿಸೆಂಬರ್‌ ಅಂತ್ಯಕ್ಕೆ 1 ಲಕ್ಷ ಲೀ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳ ಲಾಗುವುದು.
 
ಅಲ್ಲಿ ಟೋನ್ಡ್‌ ಮಿಲ್ಕ್‌ ಹಾಲಿನ ದರಗಳನ್ನು ಪ್ರತಿ ಲೀಟರ್‌ಗೆ ₹ 2 ರಂತೆ ಹೆಚ್ಚಿಸಿ, ₹ 37–39 ದರ ನಿಗದಿ ಪಡಿಸ ಲಾಗಿದೆ. ಅಲ್ಲದೇ ಹೈದರಾಬಾದ್‌ ನಗರ ದಲ್ಲಿ ಹಾಲು, ಮೊಸರು ಮಾರಾಟದ ಜತೆಗೆ ಪನ್ನೀರ್‌, ಪೇಡ, ಸುವಾಸಿತ ಹಾಲು, ತುಪ್ಪ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
 
ಪ್ರಸ್ತುತ ದಿನಕ್ಕೆ 6.75 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬರದಿಂದಾಗಿ 50 ಸಾವಿರ ಲೀಟರ್‌ ಕಡಿಮೆ ಆಗಿದೆ. ಪ್ರತಿನಿತ್ಯ ಅಸ್ಸಾಂ, ಗುವಾಹಟಿ, ಲಡಾಕ್‌, ಜಮ್ಮು ಕಾಶ್ಮೀರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಒಟ್ಟು 1.20 ಲಕ್ಷ ಲೀಟರ್‌ ಸರಬರಾಜು ಮಾಡಲಾಗುತ್ತಿದೆ. 
 
ಕಾಫಿ ಡೇ ಸಂಸ್ಥೆಗೆ ತಿಂಗಳಿಗೆ 3 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಮಾರಾಟ ಮಾಡಲು ಜನವರಿಯಿಂದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನ ಗಳಲ್ಲಿ 6 ಲಕ್ಷ ಲೀ.ಗೆ ಹೆಚ್ಚಿಸಲು ಉದ್ದೇಶಿ ಸಲಾಗಿದೆ. ಇದೇ ರೀತಿ ಆಂದ್ರ ಪ್ರದೇಶದ ಅಂಗನವಾಡಿ ಮಕ್ಕಳಿಗೆ 6 ರಿಂದ 8 ಲಕ್ಷ ಲೀಟರ್‌ ಹಾಲನ್ನು ನವೆಂಬರ್‌ನಿಂದ ಸರಬರಾಜು ಮಾಡಲಾಗುತ್ತಿದೆ ಎಂದು ನುಡಿದರು.
 
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಗಳು ದಿನಕ್ಕೆ 10 ಲಕ್ಷ ಲೀ. ಹಾಲು ಮಾರಾಟ ಮಾಡುತ್ತಿವೆ. ನಂದಿನಿ ಹಾಲು ಮಾರಾಟಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಸ್ಪಂದಿಸದಿದ್ದರೆ ಕೋರ್ಟ್‌ ಮೊರೆ ಹೋಗ ಲಾಗುವುದು ಎಂದು ಎಚ್ಚರಿಸಿದರು.
 
₹ 320 ಕೋಟಿ ವೆಚ್ಚದ ಮೆಗಾ ಡೇರಿ ಆರಂಭಿಸಲು ಒಕ್ಕೂಟಕ್ಕೆ ಸೇರಿದ 14 ಎಕರೆ ಜಾಗ (ಪಶು ಆಹಾರ ತಯಾರಿಕ ಘಟಕದ ಆವರಣ) ವಾಪಸ್‌ ನೀಡುವಂತೆ ಕೆಎಂಫ್‌ಗೆ ಮನವಿ ಮಾಡ ಲಾಗಿದೆ. ಕೆಎಂಎಫ್‌ ಜಾಗ ನೀಡಲು ಒಪ್ಪಿಕೊಂಡಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಅನುಮತಿ ನೀಡುತ್ತಿಲ್ಲ. ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ ಎಂದರು.
 
ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ಇದ್ದರು.
 
**
ವಹಿವಾಟಿನ ವಿವರಹಾಮೂಲ್ ನಲ್ಲಿನ ವಹಿವಾಟು ಹಾಗೂ ಸಂಗ್ರಹವಾಗುವ ಹಾಲಿನ ಮಾಹಿತಿ ಇಲ್ಲಿದೆ
₹ 25 ಕೋಟಿ
1994ರಲ್ಲಿನ ವಹಿವಾಟು
₹ 650 ಕೋಟಿ
2016ರಲ್ಲಿನ ವಹಿವಾಟು
1.25 ಲಕ್ಷ ಲೀ.
ಪ್ರತಿ ನಿತ್ಯ ಹಾಲು ಸರಬರಾಜು
6.75 ಲಕ್ಷ ಲೀ.
 ನಿತ್ಯ ಸಂಗ್ರಹ ಆಗುವ ಹಾಲು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT