ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳ್ಕುದ್ರು ಮೀನು ಸಂಸ್ಕರಣಾ ಘಟಕ ವಿರೋಧಿಸಿ ಪ್ರತಿಭಟನೆ

Last Updated 16 ಜನವರಿ 2017, 5:45 IST
ಅಕ್ಷರ ಗಾತ್ರ

ಬ್ರಹ್ಮಾವರ: ಹಂಗಾರಕಟ್ಟೆ ಬಾಳ್ಕುದ್ರು ವಿನಲ್ಲಿ ಮೀನು ಸಂಸ್ಕರಣಾ ಘಟಕಕ್ಕೆ ಕೋರ್ಟ್ ತಡೆಯಾಜ್ಞೆ ಇದ್ದರೂ ಪೂಜೆ ಮಾಡಿ ಆರಂಭಕ್ಕೆ ಸಿದ್ಧತೆ ನಡೆಸಿರು ವುದನ್ನು ವಿರೋಧಿಸಿ ಸಾರ್ವಜನಿಕರು ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸಾರ್ವಜನಿಕರ ಪರವಾಗಿ ಮಾತನಾಡಿದ ಡೆನ್ನಿಸ್ ಡಿಸೋಜ, ಮೀನು ಸಂಸ್ಕರಣಾ ಘಟಕದಿಂದ ಪರಿಸರದಲ್ಲಿ ದರ್ವಾಸನೆ ಬೀರುತ್ತದೆ. ಪಕ್ಕದಲ್ಲಿಯೇ ಶಾಲೆ ಇದೆ. ನೂರಾರು ಮನೆಗಳಿದೆ. ಪರಿಸರ ದುರ್ವಾಸನೆಯಿಂದ ಕೂಡುವ ಕಾರಣ ಇದರ ವಿರುದ್ಧವಾಗಿ ಹೋರಾಡಿ ಕೋರ್ಟ್‌ ಕಚೇರಿ ಅಲೆದಾಡುತ್ತಿದ್ದೇವೆ.

ಇದರ ವಿರುದ್ಧ ಹೋರಾಟ ನಡೆಸಿ ಈ ಘಟಕಕ್ಕೆ ತಡೆಯಾಜ್ಞೆಯನ್ನು ತರಲಾಗಿತ್ತು. ಹೈಕೋರ್ಟ್ ಕೂಡಾ ತಡೆಯಾಜ್ಞೆ ಯನ್ನು ವಿಧಿಸಿದೆ. ಆದೇಶದಲ್ಲಿ ಕೇವಲ ಫಿಶ್ ಕಟ್ಟಿಂಗ್ ಘಟಕವನ್ನು ನೂತನ ಸ್ಥಳಕ್ಕೆ ಸ್ಥಳಾಂತರಕ್ಕೆ ಮಾತ್ರ ಅವಕಾಶ ವಿದ್ದು, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ನೂರಾರು ಮಂದಿ ಗ್ರಾಮಸ್ಥರು ಮತ್ತು ಬಾಳ್ಕುದ್ರು ಹಿತರಕ್ಷಣಾ ವೇದಿಕೆ ಯ ಸದಸ್ಯರು ಫಿಶ್ ಮಿಲ್‌ಗೆ  ತೆರಳುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಕೋಟ ಠಾಣೆಯ  ಪೊಲೀಸರು ಸಾರ್ವಜನಿಕ ರನ್ನು ಸಮಾಧಾನಿಸುವ ಯತ್ನ ನಡೆಸಿದರಾದರೂ ಸಮಧಾನಗೊಳ್ಳ ಲಿಲ್ಲ. ಕೆಲಕಾಲ ವಾಗ್ವಾದ ನಡೆಯಿತು.

ಸ್ಥಳಕ್ಕೆ ಬಂದ ಉದ್ಯಮಿ ಕೇಶವ ಕುಂದರ್, ಘಟಕಕ್ಕೆ ಬರುವ ವಾಹನ ಗಳನ್ನು ಅರ್ಧ ಗಂಟೆಯಲ್ಲಿ ಬಿಡಬೇಕು ಎಂದು ಎಸ್‌ಐಗೆ ಸೂಚಿಸಿದ ಕಾರಣ ಮತ್ತೆ ಗ್ರಾಮಸ್ಥರು ಆಕ್ರೋಶಿತರಾದರು.

ಬ್ರಹ್ಮಾವರ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್ ಸ್ಥಳಕ್ಕೆ ಬಂದು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು. ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ ನಂತರವಷ್ಟೇ ಘಟಕ ಆರಂಭಿಸಲು ಸೂಚನೆ ನೀಡಿದ ನಂತರ ಪ್ರತಿಭಟನೆ ಯನ್ನು ಹಿಂತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT