ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆ ಬೆಳೆಯಲು...

ಎಣಿಕೆ ಗಳಿಕೆ 35
Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

* ಬೇಸಾಯಕ್ಕೆ  ಬಿಳಿ ಗುಂಡಿ ಅಣಬೆ, ಭತ್ತದ ಹುಲ್ಲಿನ ಅಣಬೆ, ಹಾಲು ಅಣಬೆ ಮತ್ತು ಕಪ್ಪೆಚಿಪ್ಪಿನ ಅಣಬೆ ಮಾತ್ರ ಯೋಗ್ಯ. ಬಿಳಿ ಗುಂಡಿ ಅಣಬೆ ಹೆಚ್ಚು ಜನಪ್ರಿಯ. ಇದನ್ನು ತಂಪು ಹವೆ ಇರುವ ಕಡೆ ಬೆಳೆಯಬಹುದು.

*  ಭತ್ತದ ಹುಲ್ಲಿನ ಅಣಬೆ ಉಷ್ಣ ವಲಯದಲ್ಲಿ ಚೆನ್ನಾಗಿ ಬರುತ್ತದೆ. ಹಾಲು ಅಣಬೆ ಇತ್ತೀಚೆಗೆ ಜನಪ್ರಿಯವಾಗಿದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ. ಇತರೆ ಅಣಬೆಗಳಿಗೆ ಹೋಲಿಸಿದರೆ, ಇದರ ಕಟಾವನ್ನು 2-3 ಮೂರು ದಿನಗಳು ಮುಂದೂಡಬಹುದು.

* ಭತ್ತದ ಹುಲ್ಲನ್ನು ಎರಡರಿಂದ ಮೂರು ಅಂಗುಲ ಉದ್ದಕ್ಕೆ ಕತ್ತರಿಸಿ ಅನಂತರ 8 ಗಂಟೆ ಕಾಲ ನೀರಿನಲ್ಲಿ ನೆನೆಸಿ ನಂತರ

1 ಗಂಟೆ ಕುದಿಸಬೇಕು.

*  ನೀರನ್ನು ಬಸಿದು, ಬೇಯಿಸಿದ ಹುಲ್ಲನ್ನು ಶುಚಿಯಾದ ಜಾಗದಲ್ಲಿ ಹರಡಿ ನೀರು ಬಸಿದು ಹೋಗುವಂತೆ ಮಾಡಬೇಕು. ಆರಿದ ನಂತರ ಪಾಲಿಥಿನ್ ಚೀಲದ ತಳಭಾಗದಲ್ಲಿ ಸ್ವಲ್ಪ ಅಣಬೆ ಬೀಜಗಳನ್ನು ಹರಡಬೇಕು. ಅನಂತರ ಒಂದು ಪದರ ಭತ್ತದ ಹುಲ್ಲು, ಅಣಬೆ ಬೀಜ ಹರಡಬೇಕು.

*  ಹೀಗೆ ಪದರ ಪದರವಾಗಿ ಹುಲ್ಲು ಮತ್ತು ಬೀಜಗಳನ್ನು ಚೀಲ ತುಂಬುವವರೆಗೆ ಹಾಕಿಡಬೇಕು. ಇದಕ್ಕೆ 100 ಗ್ರಾಂ ಬೀಜ ಬೇಕಾಗುತ್ತದೆ. ಚೀಲದ ಬಾಯನ್ನು ಚೆನ್ನಾಗಿ ಕಟ್ಟಿ, ಚೀಲದ ತಳಭಾಗದಲ್ಲಿ ಮೂರರಿಂದ ನಾಲ್ಕು ಸಣ್ಣ ರಂಧ್ರಗಳನ್ನು, ಚೀಲದ ಸುತ್ತ ಐದಾರು ರಂಧ್ರಗಳನ್ನು ಮಾಡಿ ತಂಪಾದ ಸ್ಥಳಗಳಲ್ಲಿ 20 ದಿನಗಳ ಕಾಲ ಇಟ್ಟರೆ ಅಣಬೆಗಳು ಚೆನ್ನಾಗಿ ಮೊಳಕೆ ಬಂದಿರುತ್ತವೆ.

*  ಆಗ ಚೀಲವನ್ನು ಕತ್ತರಿಸಿ ನೀರು ಚುಮುಕಿಸಬೇಕು. ಮತ್ತೆ ಹುಲ್ಲಿನ ಪೆಂಡೆಮೇಲೆ ನೀರು ಚುಮುಕಿಸಿದರೆ ಉಳಿದ ಮೊಳಕೆಗಳು ಬೆಳೆಯುತ್ತವೆ.

*  ಬೆಳೆದ ಅಣಬೆಯನ್ನು 3 ಸಲ ಕೊಯ್ಲು ಮಾಡಬಹುದು. 2 ಕೆ.ಜಿ ಒಣಗಿದ ಹುಲ್ಲಿನಿಂದ ಸುಮಾರು

1 ಕೆ.ಜಿ ಅಣಬೆಗಳನ್ನು ಪಡೆಯಬಹುದು.

* ಕಟಾವು ಮಾಡಿದ ನಂತರ ಎರಡು ದಿನ ಕೆಡದಂತೆ ಇಡಬಹುದು. ಕಪ್ಪೆ ಚಿಪ್ಪಿನ ಅಣಬೆಯನ್ನು ಸುಲಭವಾಗಿ ಕೈ ತೋಟದ ತರಕಾರಿಯಂತೆ ಮನೆಗಳಲ್ಲಿ ಬೆಳೆಯಬಹುದು. 23 ರಿಂದ 25 ದಿನಗಳಲ್ಲಿ ಮೊದಲ ಕೊಯ್ಲು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT