ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ ಎಪಿಎಂಸಿ; ಬಿಜೆಪಿ 7, ಕಾಂಗ್ರೆಸ್‌ 5

Last Updated 17 ಜನವರಿ 2017, 6:42 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಭತ್ತ, ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬಿಜೆಪಿ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದ್ದ ಭಾಗದಲ್ಲಿ ಸುಧಾರಣೆ ಕಂಡಿದ್ದರೆ, ಮುನ್ನಡೆ ಇದ್ದ ಭಾಗದಲ್ಲಿ ಹಿನ್ನಡೆ ಅನುಭವಿಸಿದೆ. ಬಿಜೆಪಿ ಕಾಂಗ್ರೆಸ್‌ಗಿಂತ ಅಧಿಕ ಸ್ಥಾನ ಪಡೆದು ಜಯಭೇರಿ ಭಾರಿಸಿದ್ದರೂ, ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ. ನಾಮ ನಿರ್ದೇಶನ ಸದಸ್ಯರೆ ಕಾಂಗ್ರೆಸ್‌ಗೆ ವರದಾನವಾಗಲಿದೆ.

ಬಿಜೆಪಿಯು ಜನಾದೇಶ ನಮಗಿದೆ. ತಾಂತ್ರಿಕ ಕಾರಣದಿಂದ ಕಾಂಗ್ರೆಸ್‌ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದರೂ ಅದಕ್ಕೆ ಜನ ಮನ್ನಣೆ ಇರುವುದಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬೇಕಿದೆ.

ವಿವಿಧ ಕ್ಷೇತ್ರಗಳಲ್ಲಿ ವಿಜೇತರಾದವರ ವಿವರ ಹೀಗಿದೆ:
ಗುಂಡೂರ ಕ್ಷೇತ್ರ: 
ಅಕ್ಕಮಹಾದೇವಮ್ಮ  (ಬಿಜೆಪಿ), ತಿಮ್ಮಾಪುರ ಕ್ಷೇತ್ರ: ಗಂಗಾಧರ  (ಬಿಜೆಪಿ)
ನವಲಿ ಕ್ಷೇತ್ರ:  ಹನುಮನಗೌಡ (ಕಾಂಗ್ರೆಸ್). ಯರಡೋಣ ಕ್ಷೇತ್ರ:  ಮಲ್ಲಮ್ಮ ಬಸಪ್ಪ ಹೊಸಮನಿ (ಕಾಂಗ್ರೆಸ್).ಕಾರಟಗಿ ವರ್ತಕರ ಕ್ಷೇತ್ರ: ನಾಗರಾಜ್ ಅರಳಿ (ಬಿಜೆಪಿ). ಕರಡೋಣ ಕ್ಷೇತ್ರ:  ಸಣ್ಣ ಗೋವಿಂದಪ್ಪ ( ಕಾಂಗ್ರೆಸ್). ಚಳ್ಳೂರ ಕ್ಷೇತ್ರ: ಸಣ್ಣೆಪ್ಪ (ಬಿಜೆಪಿ). ಸಿದ್ದಾಪುರ ಕ್ಷೇತ್ರ: ಶರಣಪ್ಪ ಭಾವಿ(ಬಿಜೆಪಿ).ಕಾರಟಗಿ ಕ್ಷೇತ್ರ: ಶಶಿಧರಗೌಡ ಪಾಟೀಲ್ (ಕಾಂಗ್ರೆಸ್)
ಮುಸ್ಟೂರ ಕ್ಷೇತ್ರ: ಸೋಮಶೇಖರಗೌಡ (ಬಿಜೆಪಿ). ಹುಳ್ಕಿಹಾಳ ಕ್ಷೇತ್ರ: ಸುರೇಶಪ್ಪ ನಾಡಿಗೇರ (ಬಿಜೆಪಿ). ಬೇವಿನಾಳ ಕ್ಷೇತ್ರ:ತಿರುಪತೆಪ್ಪ ಗುಡಿತಾಳ  (ಕಾಂಗ್ರೆಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT