ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ಕ್ಲಬ್‌ ಮೇಲೆ ದಾಳಿ ಪ್ರಕರಣ: ಟರ್ಕಿ ಪೊಲೀಸರಿಂದ ಶಂಕಿತನ ಬಂಧನ

Last Updated 17 ಜನವರಿ 2017, 7:10 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಹೊಸ ವರ್ಷಾಚರಣೆ ವೇಳೆ 39 ಮಂದಿ ಬಲಿಯಾದ ಇಸ್ತಾಂಬುಲ್‌ನ ನೈಟ್‌ಕ್ಲಬ್‌ ಮೇಲಿನ ದಾಳಿ ಪ್ರಕರಣ ಸಂಬಂಧ ಟರ್ಕಿ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದಾರೆ.

ಶಂಕಿತನು ಇಸ್ತಾಂಬುಲ್‌ನ ಎಸೆನ್ಯುರ್ಟ್‌ ಜಿಲ್ಲೆಯ ಮನೆಯೊಂದರಲ್ಲಿ ನಾಲ್ಕುವರ್ಷದ ಮಗನೊಂದಿಗೆ ಅವಿತುಕೊಂಡಿದ್ದ. ಘಟನೆ ಬಳಿಕ ಪೊಲೀಸರು ದಾಳಿಕೋರರ ಬಂಧನಕ್ಕೆ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಸ್ಥಳೀಯ ಸುದ್ದಿವಾಹಿನಿ ವರದಿಮಾಡಿದೆ.

ಶಂಕಿತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ದಾಳಿ ಕುರಿತು ಹಾಗೂ ತಲೆಮರೆಸಿಕೊಂಡಿರುವ ದಾಳಿಕೊರನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವರದಿಯಾಗಿದೆ.

ಐಷರಾಮಿ ಹಾಗೂ ಅಂತರರಾಷ್ಟ್ರೀಯ ನೈಟ್‌ ಕ್ಲಬ್‌ ಎಂದೇ ಹೆಸರಾಗಿರುವ ರೈನಾ ನೈಟ್‌ ಕ್ಲಬ್‌ ಮೇಲೆ ಹೊಸ ವರ್ಷಾಚರಣೆಯ ರಾತ್ರಿ ಇಬ್ಬರು ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ 39 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT