ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರಕ್ಕೆ ಗ್ರಹಣ

₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣ: ಆಗಸ್ಟ್ 28ರಂದು ನಾಮಕಾವಸ್ತೆಗೆ ಉದ್ಘಾಟನೆ
Last Updated 17 ಜನವರಿ 2017, 9:17 IST
ಅಕ್ಷರ ಗಾತ್ರ

ಚಿಂತಾಮಣಿ: ನಗರ ಹೊರವಲಯದ ಮಾಡಿಕೆರೆಯಲ್ಲಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾವು ಅಭಿವೃದ್ಧಿ ಕೇಂದ್ರ ಸಾರ್ವಜನಿಕ ಉಪಯೋಗಕ್ಕೆ ಬಾರದೇ ಅನಾಥವಾಗಿದೆ. ಮಾವಿನ ಹಣ್ಣಿನ ಕೊಯ್ಲಿನಿಂದ ಹಿಡಿದು ಮಾರು ಕಟ್ಟೆಯವರೆಗೂ ಪ್ರತಿ ಹಂತದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರ ವನ್ನು ನಿರ್ಮಿಸಲಾಗಿದೆ. ಮಾವು ಬೆಳೆಗಾ ರರು ಮತ್ತು ತರಕಾರಿ ಸೇರಿದಂತೆ ತೋಟ ಗಾರಿಕೆ ಬೆಳೆಗಳ ರೈತರು ಮಾವು ಅಭಿ ವೃದ್ಧಿ ಕೇಂದ್ರದಿಂದ ತಮಗೆ ಅನುಕೂಲ ವಾಗಲಿದೆ ಅಂದುಕೊಂಡಿದ್ದರು.

ಕೇಂದ್ರದಲ್ಲಿರುವ ತರಬೇತಿ ಕೇಂದ್ರ, ಅಧಿಕಾರಿಗಳ ಕೊಠಡಿಗಳು, ಪ್ರಾತ್ಯಕ್ಷಿತೆ ಕೇಂದ್ರ, ಮಾವಿನ ಬೇರ್ಪಡೆ (ಗ್ರೇಡಿ ಂಗ್‌) ಮಾಡುವುದು, ಹಣ್ಣನ್ನು ಮಾಗಿಸು ವ ಕೇಂದ್ರ, ಬೇರೆ ಬೇರೆ ಜಿಲ್ಲೆಗಳಿಂದ ಬಂದ 50 ರೈತರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ, (ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ), ಅಧಿಕಾ ರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಉಳಿದುಕೊಳ್ಳಲು ವಿಶ್ರಾಂತಿ ಕೊಠಡಿ ಗಳು ಇವೆ. ಆದರೆ ಈ ಯಾವ ಸೌಲಭ್ಯ ಗಳು ಉಪಯೋಗವಾಗುತ್ತಿಲ್ಲ. ಇದ ರಿಂದ ಕೋಟ್ಯಂತರ ರೂಪಾಯಿ ವೆಚ್ಚ ದಲ್ಲಿ ನಿರ್ಮಾಣವಾಗಿರುವ ಕೇಂದ್ರಕ್ಕೆ ಗ್ರಹಣ ಬಡಿದಿದೆ.

ಹಣ್ಣು ಬೇರ್ಪಡಿಸುವುದು, ಸ್ವಚ್ಛ ಗೊಳಿಸುವುದು, ಮಾಗಿಸುವುದು ಮತ್ತಿ ತರ ಯಂತ್ರಗಳನ್ನು ಅಳವಡಿಸು ವುದಕ್ಕೆ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಘಟಕದ (ಸಿಎಫ್‌ಟಿ ಆರ್‌ಐ) ಅನುಮೋದನೆ ಅಗತ್ಯವಿದೆ. ಆದ್ದರಿಂದ ಕೆಲಸಗಳು ತಡವಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುವರು.

5 ವರ್ಷಗಳಿಂದ ಅನಾಥವಾಗಿದ್ದ ಕೇಂದ್ರವನ್ನು  ಆ.22 ರಂದು ಅಧಿ ಕೃತವಾಗಿ ಉದ್ಘಾಟಿಸಲಾಯಿತು.  ಮಾವು ಅಭಿವೃದ್ಧಿ ಮಂಡಳಿ ಹಿಂದಿನ ಅಧ್ಯಕ್ಷ ಮತ್ತು ಚುನಾಯಿತ ಪ್ರತಿನಿಧಿಗಳು ನಾಮ ಫಲಕದಲ್ಲಿ ಹೆಸರು ನಮೂದಿಸುವ  ಸಲು ವಾಗಿ ಉದ್ಘಾಟನೆ ಶಾಸ್ತ್ರ ಪೂರ್ಣಗೊ ಳಿಸಿದ್ದಾರೆ ಎನ್ನುವ ಮಾತುಗಳು ರೈತ ರಿಂದ ಕೇಳಿ ಬರುತ್ತಿವೆ.

ರಾಜ್ಯದಲ್ಲಿ   ಶೇ 40 ರಷ್ಟು ಮಾವು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಕೋಲಾರ ಜಿಲ್ಲೆಯಲ್ಲಿ  ಶ್ರೀನಿವಾಸಪುರ  ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಚಿಂತಾಮಣಿ ತಾಲ್ಲೂಕು ಮಾವು ಬೆಳೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ರೈತರ ಉಪಯೋಗಕ್ಕಾಗಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಅವರು ‘ರಾಷ್ಟ್ರೀಯ ಕೃಷಿ ವಿಕಾಸ’ ಯೋಜನೆ ಯಡಿ ₹ 14 ಕೋಟಿ  ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಕೇಂದ್ರವನ್ನು ಮಂಜೂರು ಮಾಡಿಸಿದ್ದರು.  

ಕೋಲಾರ ಜಿಲ್ಲೆ ವಿಭಜನೆಯಾಗಿ ಚಿಕ್ಕಬಳ್ಳಾಪುರ ಅಸ್ತಿತ್ವಕ್ಕೆ ಬಂದಾಗ ಕೋಲಾರ ಜಿಲ್ಲೆಗೆ ಮಾವು ಅಭಿವೃದ್ಧಿ ಕೇಂದ್ರ ಬೇಕು ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್‌ ಆಗ್ರಹಿಸಿದ್ದರು. ಇದ ರಿಂದ ಸುಧಾಕರ್ ಮತ್ತು ರಮೇಶ್‌ ಕುಮಾರ್ ನಡುವೆ ವಿವಾದ ಉಂಟಾಗಿತ್ತು.

ಆಗ ಮಾವು ಅಭಿವೃದ್ಧಿ ಕೇಂದ್ರವನ್ನು ವಿಭಜಿಸಿ  ಶ್ರೀನಿವಾಸಪುರದ ಹೊಗಳ್ಗೆರೆ ಮತ್ತು ಚಿಂತಾಮಣಿಯ ಮಾಡಿಕೆರೆಯಲ್ಲಿ ತಲಾ ₹ 7 ಕೋಟಿ ವೆಚ್ಚದಲ್ಲಿ ಕೇಂದ್ರ ವನ್ನು ನಿರ್ಮಿಸಲಾಯಿತು. ಗಿಡಗಳ ನಾಟಿ ಯಿಂದ ಹಿಡಿದು ಹಣ್ಣು ಬರುವವರೆಗೂ ಹೊಗಳ್ಗೆರೆಯ ಕೇಂದ್ರದಲ್ಲಿ ಹಾಗೂ ಹಣ್ಣು ಕೊಯ್ಲಿನ ನಂತರ ಮಾರುಕಟ್ಟೆ ಯವರೆಗೂ ಮಾಡಿಕೆರೆ ಅಭಿವೃದ್ಧಿ ಕೇಂದ್ರದಲ್ಲಿ ಬೆಳೆಗಾರರಿಗೆ ಅಗತ್ಯವಾದ ತರಬೇತಿ ನೀಡಲು ತೀರ್ಮಾನಿಸ ಲಾಯಿತು.

ಮಾಡಿಕೆರೆ ಕೇಂದ್ರದಲ್ಲಿ ಹಣ್ಣಿನ ಕೊಯ್ಲಿನ ನಂತರ ತಂತ್ರಜ್ಞಾನಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವುದು ಪ್ರಮುಖ ಉದ್ದೇಶ ವಾಗಿತ್ತು. ಇಲ್ಲಿ ಕಟ್ಟಡಗಳು ನಿರ್ಮಾಣ ವಾಗಿ 5 ವರ್ಷಗಳಾಗಿದ್ದರೂ ಅಗತ್ಯ ಯಂತ್ರಗಳನ್ನು ಅಳವಡಿಸಿಲ್ಲ. ಇದರಿಂದ ಉದ್ದೇಶ ಈಡೇರದೆ ನನೆಗುದಿಗೆ ಬಿದ್ದಿದೆ.  ವರ್ಷಕ್ಕೆ ಒಂದೆರಡು ದಿನ ವಿಚಾರ ಸಂಕಿರಣಗಳು ಮಾತ್ರ ನಡೆಯುತ್ತಿವೆ.  ಇಷ್ಟಕ್ಕೆ ಮಾತ್ರ ಕೇಂದ್ರದ ಕೆಲಸಗಳು ನಡೆಯುತ್ತಿವೆ.

ಹಣವಿಲ್ಲ ಎಂದು ಯೋಜನೆಗಳು ತಡವಾಗುವುದು, ಸ್ಥಗಿತಗೊಳ್ಳುವುದು ಸಾಮಾನ್ಯ, ಆದರೆ ಇಲ್ಲಿ ಹಣವಿದ್ದರೂ ಯೋಜನೆ ಪೂರ್ಣವಾಗುತ್ತಿಲ್ಲ. ₹ 4 ಕೋಟಿ ಹಣ ಖರ್ಚಾಗಿದೆ. ಉಳಿದ ಹಣ ಜಿಲ್ಲಾ ಪಂಚಾಯಿತಿ ಖಾತೆಯಲ್ಲಿದೆ. ಸದಾ ರೈತರ ಕುರಿತು ಜಪ ಮಾಡುವ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಬೇಕು. ಕೇಂದ್ರಕ್ಕೆ ಅಗತ್ಯವಾದ  ಸೌಲಭ್ಯಗಳನ್ನು ಒದಗಿಸಿ  ಅನುಕೂಲ ಮಾಡಿಕೊಡಬೇಕು ಎಂದು ಮಾವು ಬೆಳೆಗಾರರು ಆಗ್ರಹಿಸುತ್ತಾರೆ.

–ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT