ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4242 ಮಂದಿ ಪಿಂಚಣಿ ರದ್ದು

ಗುಡಿಬಂಡೆ: ಪರದಾಡುವ ಸ್ಥಿತಿಯಲ್ಲಿ ಅಂಗವಿಕಲರು, ವಿಧವೆಯರು*8-**/`1
Last Updated 18 ಜನವರಿ 2017, 4:38 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳು ಪಿಂಚಣಿ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಆಧಾರ್ ಸಂಖ್ಯೆ ಲಿಂಕ್ ಮಾಡದ 4242 ಮಂದಿಯ ಪಿಂಚಣೆ ರದ್ದುಗೊಳಿ ಸಲಾಗಿದ್ದು ಇದರಿಂದ ಅಂಗವಿಕಲರು, ವಿಧವೆಯರು ಮತ್ತು ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ.

ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ ಫಲಾನುಭವಿಗಳು ಕಡ್ಡಾಯ ವಾಗಿ ಆಧಾರ್ ಸಂಖ್ಯೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಬಗ್ಗೆ ಕಂದಾಯ ಇಲಾಖೆ ಸಾರ್ವಜನಿಕವಾಗಿ ಸೂಚನೆ ನೀಡಿದೆ. ಆದರೆ ತಾಲ್ಲೂಕಿನ ಬಹುತೇಕ ಫಲಾನುಭವಿ ಗಳು ಆಧಾರ ಸಂಖ್ಯೆಯನ್ನೇ ಹೊಂದಿಲ್ಲ.

ಕಂದಾಯ ಇಲಾಖೆ ಆಯಾ ಗ್ರಾಮ ಸಹಾಯಕರ ಮೂಲಕ ಫಲಾನುಭ ವಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಆದರೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವರು ಇದುವರೆಗೆ ಆಧಾರ್ ಸಂಖ್ಯೆ ಹೊಂದಿಲ್ಲ. ಆಧಾರ್ ಸಂಖ್ಯೆ ಲಿಂಕ್ ಮಾಡದವರಿಗೆ ಡಿಸೆಂ ಬರ್ ಮತ್ತು ಜನವರಿಯ ಮಾಸಾಶನ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನೇ ಬದುಕಿಗೆ ನಂಬಿಕೊಂಡಿದ್ದ ಫಲಾನು ಭವಿಗಳು ಹೇಗೆ ಜೀವನ ನಡೆಸಬೇಕು ಎನ್ನುವ ಆತಂಕದಲ್ಲಿ ಇದ್ದಾರೆ. 

ಉದ್ಯೋಗ ಖಾತರಿ, ವಿದ್ಯಾರ್ಥಿ ವೇತನ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಗಳಿಗೂ ಆಧಾರ್ ಲಿಂಕ್ ಮಾಡಲು ಆದೇಶ ಇದೆ.
ಇಲ್ಲಿನ ಪಡಸಾಲೆ ಕೇಂದ್ರದಲ್ಲಿನ ಆಧಾರ್ ನೋಂದಣಿ ಕೇಂದ್ರ ಮತ್ತು ಸೋಮೇನಹಳ್ಳಿ ನಾಡಕಚೇರಿಯಲ್ಲಿ ನೋಂದಣಿ ಕೆಲಸ ಮಾಡುವವರು ಇಲ್ಲದ ಕಾರಣ ಜನರು ವೃದ್ದರು ಆಧಾರ್ ನೋಂದಣಿ ಮಾಡಿಸಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  ಸರ್ಕಾರ ಈ ಹಿಂದೆ ಕೈಗೊಂಡಿದ್ದ ಆಧಾರ್ ನೋಂದಣಿ ಅಭಿಯಾನವನ್ನು ಮತ್ತೆ ತೀವ್ರ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುವರು.

ತಹಶೀಲ್ದಾರ್ ಕಚೇರಿ ಮೂಲಗಳ ಪ್ರಕಾರ ಸಾಮಾಜಿಕ ಭದ್ರತೆ ಯೋಜನೆ ಯಡಿ ಪಿಂಚಣಿ ಪಡೆಯುತ್ತಿ ರುವವರ ಸಂಖ್ಯೆ 13,800 ಇದೆ. ಇವರಲ್ಲಿ 9,558 ಜನರು ಆಧಾರ್ ಹೊಂದಿದ್ದಾರೆ. 4242 ಫಲಾನುಭವಿ ಗಳು ಆಧಾರ್ ಸಂಖ್ಯೆ ಲಿಂಕ್ ಮಾಡ ಬೇಕಿದೆ.

ಫಲಾನುಭವಿಯ ನಿರ್ವಹಣಾ ವ್ಯವಸ್ಥೆ (ಬಿಎಂಎಸ್)ನಲ್ಲಿ 4242 ಫಲಾನುಭವಿಗಳುನ್ನು ರದ್ದು ಮಾಡ ಲಾಗಿದೆ. ಇದರಲ್ಲಿ ಉಪ ಖಜಾನೆ ಯವರು 2642 ಫಲಾನುಭವಿಗಳ ಮಾಸಾಶನ ರದ್ದುಪಡಿಸಿದ್ದಾರೆ.

ಬೇಡಿ ತಿನ್ನಬೇಕಿದೆ
ಇಂದಿರಾಗಾಂಧಿ ಕಾಲದಿಂದ ನನಗೆ ತಿಂಗಳಿಗೆ ₹ 30 ಮಾಸಾಶನ ಪಡೆಯುತ್ತಿದ್ದೆ. ಈಗ ₹ 500 ನೀಡುತ್ತಿದ್ದಾರೆ.  ಅಂದಿನಿಂದ ಇಂದಿನವರೆಗೂ ಯಾವುದೇ ತೊಂದರೆಯಾಗಿ ರಲಿಲ್ಲ. ನನಗೆ ಇದೇ ಜೀವನಾಧಾರ. ವಯಸ್ಸಾಗಿದ್ದು ಕಣ್ಣು ಸರಿಯಾಗಿ ಕಾಣುತ್ತಿಲ್ಲ.  ಕೂಲಿ ಮಾಡಲು ಆಗುವುದಿಲ್ಲ. ಮಾಸಾಶನ ರದ್ದಾಗಿದೆ. ಭಿಕ್ಷೆ ಬೇಡಿ ಜೀವನ ಮಾಡಬೇಕಾಗಿದೆ. ಆದ್ದರಿಂದ ತಕ್ಷಣ ನನಗೆ ಅಧಿಕಾರಿಗಳು ನೆರವಾಗಬೇಕು ಎನ್ನುವರು ಅಂಬೇಡ್ಕರ್ ನಗರದ ವಾಸಿ  ಗಂಗಮ್ಮ.

*
ಮಾಸಾಶನ ರದ್ದಾಗಿರುವ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ ಪುಸ್ತಕ, ಈ ಹಿಂದೆ ನೀಡಿದ ಮಾಸಾಶನ ಮಂಜೂ ರಾತಿ ಪತ್ರ, ಪಡಿತರ ಚೀಟಿ ನಕಲು ಪ್ರತಿಗಳು, 2 ಭಾವಚಿತ್ರ ನೀಡಿ ಮತ್ತೆ ನೋಂದಾಯಿಸಿಕೊಳ್ಳಬೇಕು.
-ಸಿಗ್ಬತುಲ್ಲಾ, ಗ್ರೇಡ್-2 ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT