ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಗದ ಸಿರಿ’ ಪ್ರಯೋಗ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ನಗರದ ಇಸ್ರೋ ಲೇಔಟ್‌ನ ಲ್ಲಿರುವ ಆಲ್‌ ಫೈನ್‌ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸ ವದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಗೀತೆಯನ್ನು 205 ವಿದ್ಯಾರ್ಥಿಗಳು ಒಟ್ಟಾಗಿ ಹಾಡಿದರು. ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್ ಅವರ ಮಾರ್ಗದರ್ಶನದಲ್ಲಿ ಈ ಪ್ರಯೋಗ ನಡೆಯಿತು.

ಶಾಲೆಯ 4, 5 ಹಾಗೂ 6ನೇ ತರಗತಿಯ ಮಕ್ಕಳು ಸೇರಿ ವಾದ್ಯ ಸಂಗೀತದ ಲಯಕ್ಕೆ ತಕ್ಕಂತೆ ಸುಶ್ರಾವ್ಯವಾಗಿ ಹಾಡಿದರು. ‘ಸುಮಾರು ಹದಿನೈದು ವರ್ಷಗಳ ಹಿಂದೆ ಗಾಯಕ ಸಿ.ಅಶ್ವತ್ಥ್ ಅವರು ‘ಅನಿಕೇತನ’ ಧ್ವನಿಸುರುಳಿಯ ಹಾಡುಗಳನ್ನು ವಾದ್ಯಸಂಗೀತದ ಜೊತೆಗೆ ನೂರು ಗಾಯಕರಿಂದ ಹಾಡಿಸಿದ್ದರು.

ಅವರೇ ನನಗೆ ನನಗೆ ಸ್ಫೂರ್ತಿ’ ಎನ್ನುತ್ತಾರೆ ಶಾಲೆಯ ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್. ಶಾಲಾ ಮಕ್ಕಳ ಈ ಪ್ರಯೋಗಕ್ಕೆ ಪ್ರಾಂಶುಪಾಲಕರಾದ ಜಯಲಕ್ಷ್ಮೀ ಶಾಸ್ತ್ರಿ,  ಶಾಲಾ ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ಪೋಷಕರು ಸಾಕ್ಷಿಯಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT