ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಲಾವಿದರ ದಿನ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಶಹನಾಯ್ ಎಂದಾಕ್ಷಣ ಬಿಸ್ಮಿಲ್ಲಾ ಖಾನ್‌ ಅವರು ನೆನಪಾದಂತೆ ಭಾರತದಲ್ಲಿ ಕ್ಲಾರಿಯೋನೆಟ್‌ ಎಂದಾಕ್ಷಣ ನೆನಪಾಗುವವರು ಪಂ. ನರಸಿಂಹಲು ವಡವಾಟಿ.

ಪಂ.ಸಿದ್ಧರಾಮ ಜಂಬಲದಿನ್ನಿ ಅವರಿಂದ ಗಾಯನವನ್ನೂ ಕಲಿತಿರುವ ವಡವಾಟಿಯವರು ಕ್ಲಾರಿಯೋನೆಟ್‌ ನುಡಿಸುತ್ತಿದ್ದರೆ, ಕ್ಲಾರಿಯೋನೆಟ್‌ ಮೂಲಕ ಹಾಡುತ್ತಿದ್ದಾರೇನೋ ಎಂದು ಭಾಸವಾಗುತ್ತದೆ. ಜೈಪುರ್ ಮತ್ತು ಗ್ವಾಲಿಯರ್ ಘರಾಣೆಗೆ ಸೇರಿದ ವಡವಾಟಿಯವರು ಗಾಯನ ಶೈಲಿಯಲ್ಲಿ  ಕ್ಲಾರಿಯೋನೆಟ್ ನುಡಿಸುವುದರಲ್ಲಿ ಸಿದ್ಧಹಸ್ತರು.

ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ 2013ರಿಂದಲೂ, ವಡವಾಟಿ ಅವರ ಜನ್ಮ ದಿನವಾದ ಜ.21ರಂದು ಎಲ್ಲಾ ಕ್ಷೇತ್ರದ ಕಲಾವಿದರನ್ನು ಸ್ಮರಿಸುವ ‘ಕಲಾವಿದರ ದಿನ’ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಶನಿವಾರ ಯವನಿಕದಲ್ಲಿ ಕಲಾವಿದರ ದಿನದ ಪ್ರಯುಕ್ತ ‘ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ’ ಆಯೋಜಿಸಲಾಗಿದೆ.

**

‘ಸಂಗೀತ ಸಂಜೆ’
ಉದ್ಘಾಟನೆ– ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್,
ಅತಿಥಿ– ಸಚಿವ ತನ್ವೀರ್ ಸೇಠ್‌, ಕೆ.ಮರುಳಸಿದ್ದಪ್ಪ, ಅಶೋಕ ಎನ್‌. ಚಲವಾದಿ,
ಅಧ್ಯಕ್ಷತೆ– ಸರ್ವಮಂಗಳಾ ಶಂಕರ್, ಗೌರವಾರ್ಪಣೆ–ಪಂ. ನರಸಿಂಹಲು ವಡವಾಟಿ,
ಸಂಗೀತ ಕಾರ್ಯಕ್ರಮ– ಮೋನಿಕಾ ಷಾ, ವಡವಾಟಿ ಶಾರದಾ ಭರತ್,
ಗಾಯನ– ಭಾರತ್‌ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ,
ಆಯೋಜನೆ– ಭಾರತ್‌ ಸಾಂಸ್ಕೃತಿಕ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಸ್ಥಳ: ಯವನಿಕ, ನೃಪತುಂಗ ರಸ್ತೆ, ಶನಿವಾರ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT