ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿವರ್ತನೆಯಿಂದ ಗ್ರಾಹಕರಿಗೆ ಲಾಭ’

Last Updated 21 ಜನವರಿ 2017, 5:50 IST
ಅಕ್ಷರ ಗಾತ್ರ

ಮೂಡಿಗೆರೆ: ನಗದು ರಹಿತ ವಹಿವಾಟಿಗೆ ಪರಿವರ್ತಿತರಾಗುವ ಬ್ಯಾಂಕ್‌ ಗ್ರಾಹಕರಿಗೆ ಹಲವು ಲಾಭಗಳಿವೆ ಎಂದು ಕರ್ನಾಟಕ ಬ್ಯಾಂಕ್‌ ವ್ಯವಸ್ಥಾಪಕ ಪ್ರದೀಪ್‌ ಅಭಿಪ್ರಾ ಯಪಟ್ಟರು.

ಪಟ್ಟಣದ ಜೇಸಿಐ ಭವನದಲ್ಲಿ ಶುಕ್ರವಾರ ಜೇಸಿಐ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ‘ನಗದು ರಹಿತ ವಹಿವಾಟು’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಆರ್ಥಿಕ ಪರಿಸ್ಥಿತಿಯಲ್ಲಾದ ಬದಲಾವಣೆಗೆ ಅನುಗುಣವಾಗಿ ಬ್ಯಾಂಕ್‌ ಗ್ರಾಹಕರು ಕೂಡ ಬದಲಾಗಬೇಕಿದ್ದು, ನಗದು ರಹಿತ ವಹಿವಾಟು ನಡೆಸಲು ಮುಂದಾಗಬೇಕು.

ನಗದು ರಹಿತ ವಹಿವಾಟು ನಡೆಸುವುದರಿಂದ ಆರ್ಥಿಕ ಚಟುವಟಿಕೆಗಳನ್ನು ಸುಲಭಗೊಳಿ ಸುವುದರ ಜತೆಗೆ, ಕೋಟಾ ನೋಟುಗ ಳಿಂದ ವಂಚಿತವಾಗುವ ಸಮಸ್ಯೆ, ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ನಿಲ್ಲುವ ಸಮಸ್ಯೆ, ರಜೆ ದಿನಗಳಂದು ವಹಿವಾಟು ನಡೆಸಲಾಗದ ಪರಿಸ್ಥಿತಿ, ಹಣ ಸಾಗಿಸು ವಾಗ ಕಳ್ಳಕಾಕರ ಭಯ ಮುಂತಾದ ಸಮಸ್ಯೆಗಳಿಂದ ಸುಲಭವಾಗಿ ಪಾರಾಗ ಬಹುದು. ಅಲ್ಲದೇ ನಗದು ರಹಿತ ವಹಿವಾಟಿನಿಂದ ದಾಖಲೆ ಯುಕ್ತ ವ್ಯವ ಹಾರ ನಡೆಸಲು ಸಾಧ್ಯವಾಗುತ್ತದೆ ಎಂದರು. ತಮ್ಮದೇ

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಬ್ಯಾಂಕಿನ ವ್ಯವಸ್ಥಾಪಕ ವೇಣುಗೋಪಾಲ ಭಟ್‌ ಮಾತನಾಡಿ, ಬಹಳ ಹಿಂದಿ ನಿಂದಲೂ ನಗದು ರಹಿತ ವಹಿವಾಟು ಬ್ಯಾಂಕ್‌ಗಳಲ್ಲಿ ಜಾರಿಯಲ್ಲಿದ್ದರೂ, ಹೆಚ್ಚಿನ ಗ್ರಾಹಕರು ನಗದು ರಹಿತವಾಗಿ ವಹಿವಾಟು ನಡೆಸುತ್ತಿಲ್ಲ. ಇದೀಗ ನೋಟು ರದ್ದುಗೊಂಡ ಹಿನ್ನೆಲೆಯಲ್ಲಿ ನಗದು ರಹಿತ ವಹಿವಾಟು ಅಗತ್ಯ, ಸಮಯ ಉಳಿತಾಯ ಮಾಡಲು ನಗದು ರಹಿತ ವಹಿವಾಟು ಅತ್ಯಂತ ಉಪಯುಕ್ತ ವಾಗಿದೆ.

ಎಸ್‌ಬಿಎಂ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ತಮ್ಮದೇ ಆ್ಯಪ್‌ಗಳನ್ನು ಜಾರಿಗೊಳಿಸಿದ್ದು, ಗ್ರಾಹಕರು ಅವುಗಳಲ್ಲಿ ನೋಂದಾಯಿತರಾಗುವ ಮೂಲಕ ಬ್ಯಾಂಕ್‌ನಿಂದ ದೂರ ಉಳಿದುಕೊಂಡೇ ತಮ್ಮ ವಹಿವಾಟು ನಡೆಸಬಹುದು ಎಂದರು.

ಜೇಸಿಐ ಅಧ್ಯಕ್ಷ ನಯನ್‌ಕಣಚೂರು ಮಾತನಾಡಿ, ದೇಶದ ಆರ್ಥಿಕ ಬೆಳವಣಿ ಗೆಗೆ ಪ್ರತಿಯೊಬ್ಬರೂ ಕೈ ಜೋಡಿಸ ಬೇಕಾದ ಅಗತ್ಯವಿದ್ದು, ಇದೀಗ ಆರ್ಥಿಕ ಕ್ಷೇತ್ರದಲ್ಲಿ ಮುಂಚೂಣಿಯ ಲ್ಲಿರುವ ನಗದು ರಹಿತ ವಹಿವಾಟಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲು ವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಕಾರ್ಯಾಗಾರದಲ್ಲಿ ಬಾಗಿಯಾ ದವರು ನೆರೆಹೊರೆಯವರಿಗೆ ಮಾಹಿತಿ ನೀಡಿದರೆ ಉದ್ದೇಶ ಈಡೇರಿದಂತೆ ಎಂದರು. ಜೇಸಿಐ ಸಂಸ್ಥೆ ಕಾರ್ಯದರ್ಶಿ ಶಶಿಕಿ ರಣ್‌, ಯೋಗೇಶ್‌, ಅತುಲ್‌ರಾವ್‌, ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT