ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತಿ

Last Updated 23 ಜನವರಿ 2017, 9:57 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ನಡೆಯಿತು. ಪ್ರಭಾರ ಪ್ರಾಂಶುಪಾಲ  ರಾಜಾನಾರಾಯಣ ಅರಳಿಕಟ್ಟಿ, ಶಿಕ್ಷಕರಾದ ಸೈಯದ್ ಶಬನಾ ತಲತ್, ಪ್ರಭುಲಿಂಗ ವಸ್ತ್ರದ, ಕನಕಾಚಲ ಮಾತನಾಡಿದರು. ಶಿಕ್ಷಕರಾದ ಶಂಕ್ರಪ್ಪ ಸೋಮನಕಟ್ಟಿ, ಶಾಮೀದಸಾಬ ಲೈನದಾರ, ಶಿಕ್ಷಕರಾದ ಸಲ್ಮಾಂ ಜಹಾನ್, ತಿಪ್ಪಮ್ಮ, ವಿದ್ಯಾ ಅರಳಿಕಟ್ಟಿ, ವಿಜೇಂದ್ರ, ಮಂಜುಳಾ ಮೈಗೂರು ಇದ್ದರು.

ಸಮೀಪದ ಸೋಮಸಾಗರ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಂಪಾಪತಿ ತರ್ಲಕಟ್ಟಿ, ಪ್ರಮುಖರಾದ ಪರಶುರಾಮ ವನಗಡ್ಡಿ, ಶರಣಪ್ಪ ಬಡಿಗೇರ, ಶಿಕ್ಷಕ ಮಂಜುನಾಥ ಇದ್ದರು.

ತಾವರಗೇರಾ ವರದಿ:  ಸಮೀಪದ ಜುಮಲಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗಮ್ಮ ಗುರಿಕಾರ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿದರು. ಉಪಾಧ್ಯಕ್ಷೆ ಹುಲಿಗೆಮ್ಮ , ಸದಸ್ಯರಾದ ಅಡಿವೇಶ ಪಾಟೀಲ್, ಶಶಿಧರ ಪಾಟೀಲ್, ಅಭಿವೃದ್ಧಿ ಅಧಿಕಾರಿ ವೆಂಕಟೇಶ ಇದ್ದರು.

ಕುಕನೂರು ವರದಿ: 12ನೇ ಶತಮಾನದ ಶಿವಶರಣರ ನಡುವೆ ಅಂಬಿಗರ ಚೌಡಯ್ಯ ಪ್ರಜ್ವಲವಾಗಿದ್ದರು. ದಿಟ್ಟತನ ಮೆರೆದು ಕ್ರಾಂತಿಕಾರಿ ಶರಣ ಎಂದು ಖ್ಯಾತಿ ಪಡೆದಿದ್ದರು ಎಂದು ಮಹದೇವ ದೇವರು ಹೇಳಿದರು. ಪಟ್ಟಣದಲ್ಲಿ ಶನಿವಾರ ಗಂಗಾಮತ ಸಮಾಜದಿಂದ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಸಾನಿಧ್ಯ ವಹಿಸಿ ಮಾತನಾಡಿದರು. 

ಸಾವಿರಾರು ವರ್ಷ­ಗಳಿಂದ ಧರ್ಮ ದೇವರ ಬಗ್ಗೆ ಜನರಲ್ಲಿದ್ದ ಮೂಢನಂಬಿಕೆ ತೊಡೆದು ಹಾಕುವಲ್ಲಿ ಶರಣರ ಜೊತೆ ಕೈಜೋಡಿಸಿದರು. ಶರ­ಣರ ವಿಚಾರಗಳನ್ನು ಅನುಸರಿಸಿದರೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ್ಯೆ ಸುಭದ್ರಾ ಮಲಿಯಪ್ಪ ಅಣ್ಣಿಗೇರಿ, ಉಪಾಧ್ಯಕ್ಷ ಸಿರಾಜುದ್ದೀನ್ ಕರಮುಡಿ, ಮುಖ್ಯಾಧಿಕಾರಿ ಶ್ರೀಶೈಲಗೌಡ್ರ ಸಂಕನಗೌಡ್ರ, ಕನಕಪ್ಪ ಬ್ಯಾಡರ್, ಬಸವರಾಜ ಅಡವಿ, ರೈತ ಹಿತರಕ್ಷಣೆ ಸಂಘದ ಅಧ್ಯಕ್ಷ ಶರಣಯ್ಯ ಬಂಡಿ, ಮುಖಂಡರಾದ ಸಿ.ಬಸವರಾಜ, ಜಗದೀಶಯ್ಯ ಕಳ್ಳಿಮಠ, ಮಲಿಯಪ್ಪ ಅಣ್ಣಿಗೇರಿ, ಬುಡ್ಡಪ್ಪ ಬಾರಕೇರ್, ಶರಣಪ್ಪ ಕೋನಾರಿ, ವೀರಣ್ಣ ಬಾರಕೇರ್, ಫಕೀರಪ್ಪ ಕೋನಾರಿ, ಲಿಂಗರಾಜ ಕೋನಾರಿ, ಸಿದ್ದಲಿಂಗಪ್ಪ ವಾಲಿಕಾರ, ನಾಗರಾಜ ವಾಲಿಕಾರ್, ಗುರು ಬಾರಕೇರ್, ಪರಶುರಾಮ ಬಾರಕೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT