ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತೀಶ ಶುಗರ್ಸ್ ಅವಾರ್ಡ್ಸ್ ಸ್ಪರ್ಧೆಗೆ ತೆರೆ

ಅಂತಿಮ ಹಂತದ ವಿವಿಧ ವಿಭಾಗದ ಸ್ಪರ್ಧೆಯ ಫಲಿತಾಂಶ 
Last Updated 24 ಜನವರಿ 2017, 7:12 IST
ಅಕ್ಷರ ಗಾತ್ರ

ಗೋಕಾಕ: ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 16ನೇ ಸತೀಶ ಶುಗರ್ಸ್ ಅವಾರ್ಡ್‌್ಸ ಭಾನುವಾರ ನಡೆದ ಅಂತಿಮ ಹಂತದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ವಿಜೇತರ ವಿವರ.

ಪ್ರೌಢ ಶಾಲಾ ವಿಭಾಗ
ಜಾನಪದ ನೃತ್ಯ ಸ್ಪರ್ಧೆ:
ಜಿ.ಪಿ.ಯು.ಸಿ. ಸಹನಾ ಹಿರೇಮಠ ತಂಡಪ್ರಥಮ ಎನ್ಎಸ್ಎಫ್ ಶಾಲೆ ಪೂಜಾ ಬಿಲಕುಂದಿ ತಂಡ ದ್ವಿತೀಯ ಹಾಗೂ ಕಲ್ಲೋಳಿ ಎಂ.ಡಿ.ಆರ್.ಎಸ್. ಅಫಸಾನಾ ಬಟಕುರ್ಕಿ ತಂಡತೃತೀಯ; ವಿಜ್ಞಾನ ವಸ್ತು ಪ್ರದರ್ಶನ: ಕುಡಚಿ ಪ್ರೌಢ ಶಾಲೆ ಶಿವುಕುಮಾರ ಪಾಟೀಲ ಹಾಗೂ ಜುನ್ನೇದಿಯಾ ಪ್ರೌಢ ಶಾಲೆ ಮಹಮ್ಮದ ಸೋಯೇಬ ಮಟಗಾರ ಪ್ರಥಮ. ಹಾರೂ ಗೊಪ್ಪದ ಜಿ.ಎಚ್.ಎಸ್. ಸುರೇಶ ಚಿಕ್ಕೊಪ್ಪ ಹಾಗೂ ಶಿವಾನಂದ ಹೊಸೂರ ದ್ವಿತೀಯ ಹಾಗೂ ಮಯೂರ ಶಾಲೆ ಮಹಮ್ಮದ ಐಯಾನ ಬುಡ್ಡನ್ನವರ ಹಾಗೂ ಮಹಮ್ಮದ್ ಅಮನ್‌ ಬುಡ್ಡನ್ನವರ ತೃತೀಯ.

ಕಾಲೇಜು ವಿಭಾಗ: ಗಾಯನ ಸ್ಪರ್ಧೆ : ಕಲ್ಲೋಳಿ ಬಸವೇಶ್ವರ ಪಿ.ಯು. ಕಾಲೇಜು ಪ್ರೀತಿ ಮಂಟೂರಪ್ರಥಮ ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ಕಾಲೇಜು ಸೌಮ್ಯ ಸೊಂಡೂರದ್ವಿತೀಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿವರಾಜ ಕುಪಾಟಿ ತೃತೀಯ.

ಸಮೂಹ ನೃತ್ಯ ಸ್ಪರ್ಧೆ:  ಜೆ.ಎಸ್.ಎಸ್. ಬಿಬಿಎ ಕಾಲೇಜು ರಾಹುಲ ವಾಳದ ತಂಡ ಪ್ರಥಮ. ಎಸ್.ಎಲ್.ಜೆ. ಪಾಲಿ ಟೆಕ್ನಿಕ್ ರವಿ ರಸೂಲ ತಂಡ ದ್ವಿತೀಯ ಹಾಗೂ ಎಲ್.ಆರ್.ಜೆ. ಪಿಯು ಕಾಲೇಜು ಆಕಾಶ ಪಾಟೀಲ ತಂಡ ತೃತೀಯ.

ವಿಜ್ಞಾನ ವಸ್ತು ಪ್ರದರ್ಶನ:  ಎಲ್.ಇ.ಟಿ. ಪದವಿ ಕಾಲೇಜು ಬಾಳೇಶ ಶಿಳ್ಳಿ ಹಾಗೂ ಯಲ್ಲಪ್ಪ ಉಪ್ಪಾರ– ಪ್ರಥಮ. ಅರಭಾವಿ ಕೆ.ಆರ್.ಸಿ. ಕಾಲೇಜ ಕಿರಣಕುಮಾರ ಎಚ್. ಹಾಗೂ ಶಿವುಕುಮಾರ ಪಾಟೀಲ– ದ್ವಿತೀಯ. ಜಿ.ಪಿ.ಯು.ಸಿ. ಆನಂದ ಮಾಲ ದಿನ್ನಿ ಹಾಗೂ ಬಸವರಾಜ ಹಳ್ಳೂರ ತೃತೀಯ.

ಗಾಯನ ಮತ್ತು ವಸ್ತು ಪ್ರದರ್ಶನ ದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹15 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ₹13 ಸಾವಿರ ನಗದು, ಟ್ರೋಫಿ, ತೃತೀಯ ಸ್ಥಾನ ಪಡೆದವರಿಗೆ ₹10 ಸಾವಿರ ನಗದು ಟ್ರೋಫಿ ನೀಡಲಾಯಿತು.

ಪ್ರೌಢ ಶಾಲಾ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹30 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ₹20 ಸಾವಿರ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆದವರಿಗೆ ₹15 ಸಾವಿರ ನಗದು  ಹಾಗೂ ಟ್ರೋಫಿ ನೀಡಲಾಯಿತು.

ಕಾಲೇಜು ವಿಭಾಗದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹60ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ₹40 ಸಾವಿರ ನಗದು  ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆದವರಿಗೆ ₹30 ಸಾವಿರ ನಗದು ಟ್ರೋಫಿ ನೀಡಲಾಯಿತು.

ಪ್ರಿಯಾಂಕಾ ಜಾರಕಿಹೊಳಿ, ರಾಹುಲ ಜಾರಕಿಹೊಳಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾ ಪಂಚಾಯ್ತಿ   ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಸದಸ್ಯ ಟಿ.ಆರ್.ಕಾಗಲ, ಸಿದ್ಧಲಿಂಗ ದಳವಾಯಿ, ಸಾಮಾಜಿಕ ಕಾರ್ಯಕರ್ತ ರಾಜಾ ಮಾಯಕ, ಕೈಗಾರಿ ಕೋದ್ಯಮಿಗಳಾದ ನಾಗರಾಜ ತಳವಾರ, ಗಣೇಶ ಕುಂದ ವಾಡ, ಸಂಘಟಕರಾದ ಎಸ್.ಎ. ರಾಮ ಗಾನಟ್ಟಿ, ರಿಯಾಜ್‌ ಚೌಗಲಾ ವಿಜೇತರಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT