ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಗೆ ಸಂಗೀತವೇ ಪ್ರಮುಖ ಸಾಧನ

Last Updated 30 ಜನವರಿ 2017, 7:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ‘ಹರಿದಾಡುವ ಮನಸ್ಸಿಗೆ ಕಡಿವಾಣ ಹಾಕಿ ಏಕಾಗ್ರತೆ ಹೆಚ್ಚಿಸುವ ಮತ್ತು ಚಿತ್ತಶುದ್ಧಿ ಮಾಡುವ ಸಂಗೀತವೇ ಭಕ್ತಿಗೆ ಪ್ರಮುಖ ಸಾಧನ. ನಾದಬ್ರಹ್ಮ ಉಪಾಸನೆಯಿಂದ ಬದುಕು ಸಂತಸದಿಂದ ಕೂಡಿರುತ್ತದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಬಸವನಗುಡಿ ರಸ್ತೆಯ ಸ್ಥಾನಕ ನಂದೀಶ್ವರ ದೇವಾಲಯದಲ್ಲಿ (ಹಳೆ ಗಣೇಶ ಗುಡಿ) ಚಿಂತಲಪಲ್ಲಿ ಸಂಗೀತ ಪರಂಪರಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತ್ಯಾಗರಾಜರು, ಪುರಂದರದಾಸರು ಮತ್ತು ಕೈವಾರದ ಯೋಗಿ ನಾರೇಯಣ ಯತೀಂದ್ರರ ಆರಾಧನಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇವತ್ತು ಜನರು ಟಿ.ವಿ, ಇಂಟರ್‌ನೆಟ್‌ಗಳ ಸಹವಾಸದಲ್ಲಿ ಚಿತ್ತವಿಕಾರಕ್ಕೆ ಒಳಗಾಗುತ್ತಿದ್ದಾರೆ. ಈ ಚಿತ್ರಣ ಬದಲಾಗಬೇಕು. ಯುವ ಜನರು ಹೆಚ್ಚೆಚ್ಚು ಸಂಗೀತ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಸಂಗೀತ ಭಗವಂತನ ಸೇವೆಗೆ ಉಪಯೋಗವಾದರೆ ಜೀವನ ಸಾರ್ಥಕವಾಗುತ್ತದೆ. ಈ ನಗರದಲ್ಲಿ ಸಂಗೀತದ ಶ್ರೇಷ್ಠ ಪರಂಪರೆ ಇದೆ. ವಿದ್ಯಾರ್ಥಿಗಳು ಅದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.


ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಷ ಭಟ್ಟ ಮಾತನಾಡಿ, ‘ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಉನ್ನತ ಸ್ಥಾನವಿದೆ. ಅಂತಹ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ದಾಸವರೇಣ್ಯರ ಆರಾಧನಾ ಮಹೋತ್ಸವವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುವ ಮೂಲಕ ಮುಂದಿನ ತಲೆಮಾರಿಗೆ ಸಂಗೀತ ಕೊಂಡೊಯ್ಯುವ ಆಶಯ ಹೊಂದಿರುವ ಈ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.

ಅಟ್ಟೂರು ಸ್ವಾಮಿ ಕೆ.ಎಸ್.ವೆಂಕಟೇಶಯ್ಯ, ಚಿಂತಲಪಲ್ಲಿ ಸಂಗೀತ ಪರಂಪರಾ ಟ್ರಸ್ಟ್‌ನ ಅಧ್ಯಕ್ಷೆ ನಿರ್ಮಲಾ ಶ್ರೀಧರ್, ಗೌರವ ಅಧ್ಯಕ್ಷ ಅಶ್ವತ್ಥ್ ನಾರಾಯಣಾಚಾರ್, ಕಾರ್ಯದರ್ಶಿ ಚಿಂತಲಪಲ್ಲಿ ಕಿಶೋರ್‌ ಕುಮಾರ್, ಸಹ ಕಾರ್ಯದರ್ಶಿ ಜಿ.ಸತ್ಯನಾರಾಯಣ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT