ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ₹ 3 ಕೋಟಿ ಮೀಸಲು

ನಾಯಕನಹಟ್ಟಿ ಪ.ಪಂ.ನಿಂದ ₹ 17.21ಲಕ್ಷ ಉಳಿತಾಯ ಬಜೆಟ್‌ ಮಂಡನೆ
Last Updated 1 ಫೆಬ್ರುವರಿ 2017, 6:00 IST
ಅಕ್ಷರ ಗಾತ್ರ
ನಾಯಕನಹಟ್ಟಿ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರೋತ್ಥಾನ ಯೋಜನೆ ಯಡಿ  ₹ 3 ಕೋಟಿ ಅನುದಾನ ಮೀಸಲಿಟ್ಟಿರುವುದು ಸೇರಿದಂತೆ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯ್ತಿಯಲ್ಲಿ 2017–18ನೇ ಸಾಲಿಗೆ ₹ 6.8 ಕೋಟಿ ವೆಚ್ಚದ ಯೋಜನೆಯ ಬಜೆಟ್‌ ಅನ್ನು ಮಂಗಳವಾರ ಮಂಡಿಸಲಾಯಿತು. 
 
ಪಟ್ಟಣ ಕಚೇರಿಯಲ್ಲಿ ಅಧ್ಯಕ್ಷೆ ನೀಲಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಎಸ್. ಕೃಷ್ಣಮೂರ್ತಿ ಅವರು ₹ 17.21 ಲಕ್ಷ ಉಳಿತಾಯ ಬಜೆಟ್‌ ಮಂಡಿಸಿದರು. 
 
ಆದಾಯದ ಮೂಲ: ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ₹ 22 ಲಕ್ಷ, ನೀರಿನ ತೆರಿಗೆಯಿಂದ ₹ 5.50 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ ₹ 4.30 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ₹ 2.50 ಲಕ್ಷ, ಕಟ್ಟಡ ಪರವಾನಗಿ ಶುಲ್ಕ ₹ 1 ಲಕ್ಷ, ವಾರ್ಷಿಕ ಹರಾಜು ಬಾಬ್ತು ₹ 5 ಲಕ್ಷ, ಜಾಹೀರಾತು ತೆರಿಗೆ ₹ 20 ಸಾವಿರ ಸೇರಿದಂತೆ ಎಲ್ಲಾ ಆದಾಯದ ಮೂಲಗಳಿಂದ ₹ 40.50 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
 
ಸರ್ಕಾರದ ಅನುದಾನ: ಎಸ್‌.ಎಫ್‌.ಸಿ ಯೋಜನೆಯ ಅನುದಾನ ₹ 2 ಕೋಟಿ, ಸ್ಟಾಂಪ್‌ಡ್ಯೂಟಿ ₹ 2 ಲಕ್ಷ, ಎಸ್‌.ಎಫ್‌.ಸಿ ವೇತನ ಅನುದಾನ ₹ 10 ಲಕ್ಷ, 14ನೇ ಹಣಕಾಸು ಯೋಜನೆ ₹ 50 ಲಕ್ಷ, ನಗರೋತ್ಥಾನದ ಅನುದಾನ ₹ 5 ಕೋಟಿ ಸೇರಿದಂತೆ ಒಟ್ಟು ₹ 7.82 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. 
 
ಯೋಜನೆಗಳ ವಿವರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ₹ 3 ಕೋಟಿ ಹಣವನ್ನು ಮೀಸಲಿಡಲಾಗಿದೆ. ಪಟ್ಟಣ ಹಾಗೂ ಅದರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ₹1 ಕೋಟಿ, ನೂತನ ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆ ನಿರ್ವಹಣೆಗೆ ₹ 1 ಕೋಟಿ, ನೂತನ ಉದ್ಯಾನವನ ನಿರ್ಮಾಣ ಮತ್ತು ಅಭಿವೃದ್ಧಿಗೆ ₹ 10 ಲಕ್ಷ, ಪ್ರಾಯೋಗಿಕ
ವಾಗಿ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ₹ 15 ಲಕ್ಷ, ನಾಗರಿಕರಿಗೆ ವಿಶ್ರಾಂತಿ ಪಡೆಯಲು ಸಿಮೆಂಟ್‌ ಬೆಂಚ್‌ಗಳ ನಿರ್ಮಾಣಕ್ಕಾಗಿ ₹ 15 ಲಕ್ಷ, ಶೇ. 24.10 ರ ಯೋಜನೆಯಿಂದ ₹ 48.20 ಲಕ್ಷ, ಶೇ 7.25ರ ಯೋಜನೆಯಡಿ ₹ 14 ಲಕ್ಷ, ಅಂಗವಿಕಲರ ಕಲ್ಯಾಣ ಯೋಜನೆಯಡಿ ₹ 6 ಲಕ್ಷ ಮೀಸಲಿಡಲಾಗಿದೆ ಎಂದು ಎಸ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.
 
ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಮಹಾಂತಣ್ಣ, ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಮುಖ್ಯಾಧಿಕಾರಿ ಟಿ.ಜಯಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.
 
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT