ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವೃದ್ಧಿಗೆ ₹1,500 ಕೋಟಿ ವ್ಯಯ

ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರ ಬ್ಯಾರೇಜಿಗೆ ಬಾಗಿನ ಅರ್ಪಿಸಿದ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ
Last Updated 3 ಫೆಬ್ರುವರಿ 2017, 6:45 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದಲ್ಲಿನ ಅಂತ ರ್ಜಲ ವೃದ್ಧಿಗೆ ವಿವಿಧ ಕಾರ್ಯಕ್ರಮಗ ಳಡಿ ₹ 1,500 ಕೋಟಿ ಹಣ ವಿನಿಯೋ ಗಿಸಲಾಗಿದೆ ಎಂದು ಸಣ್ಣ ನೀರಾ ವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಜಮಖಂಡಿ ತಾಲ್ಲೂಕಿನ ಚಿಕ್ಕಪಡ ಸಲಗಿ ಬ್ಯಾರೇಜ್‌ ಬಳಿ ರೈತರೇ ನಿರ್ಮಿಸಿ ರುವ ಕೃಷ್ಣೆಯ ಮಡಿಲಿನ ಶ್ರಮಬಿಂದು ಸಾಗರಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ನೀರು ರೈತರ ಜೀವ ಜಲವಾಗಿದೆ. ನೀರಿನ ಸಂರಕ್ಷಣೆಗೆ ಮುಂದಾಗಿರುವ ರೈತ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದ ಸಚಿವರು, ನೀರಾವರಿ ಯೋಜನೆಯಡಿ ಬಾಂದಾರ, ಚೆಕ್‌ ಡ್ಯಾಂ ಹಾಗೂ ಅಂತರ್ಜಲದ ಸಲುವಾಗಿ ಜಿಲ್ಲೆಗೆ ₹ 135 ಕೋಟಿ ಹಣ ಖರ್ಚು ಮಾಡ ಲಾಗಿದೆ ಎಂದು ವಿವರಿಸಿದರು.

ರೈತರಿಂದ ರೈತರ ಸಹಾಯದಿಂದ ನಿರ್ಮಿಸಿ, ಶ್ರಮಬಿಂದು ಸಾಗರದಲ್ಲಿ ಇಂತಹ ಬರದ ಪರಿಸ್ಥಿತಿಯಲ್ಲಿ 4 ಟಿ.ಎಂ.ಸಿ ನೀರು ಹಿಡಿದಿಡುವ ಕಾರ್ಯ ರಾಜ್ಯಕ್ಕೆ ಮಾದರಿ. ಹಿಂಗಾರು ಮತ್ತು ಮುಂಗಾರು ಮಳೆ ವಿಫಲದಿಂದ 160 ತಾಲ್ಲೂಕುಗಳಲ್ಲಿ ಬರಗಾಲವಿದೆ. ಕಳೆದ 42 ವರ್ಷಗಳಿಂದ ಕಾಣದ ಬರಗಾಲ ಈ ವರ್ಷ ಆವರಿಸಿದೆ. ರಾಜ್ಯದ ಜಲಾಶಯ ಗಳಲ್ಲಿ ನೀರು ಇಲ್ಲ. ಕುಡಿಯುವ ನೀರಿಗಾಗಿ 13 ರಿಂದ 14 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ ಎಂದರು.

ಈ ಬರಗಾಲದಲ್ಲಿಯೂ ಇಲ್ಲಿನ ರೈತರು ಅಸಾಧ್ಯವಾದುದನ್ನು ಸಾಧಿಸಿ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಜಮಖಂಡಿ ತಾಲ್ಲೂಕು ಕರ್ನಾಟಕದ ಪಂಜಾಬ್ ಆಗಿದೆ. ನೀರು, ಜೀವ ಜಲ ಸದ್ಯ ಅವಶ್ಯ. ನೀರನ್ನು ಮಿತವಾಗಿ ಬಳಸುವದನ್ನು ರೈತರಿಂದಲೇ ನಡೆಯಬೇಕಿದೆ ಎಂದರು.

ನೀರಿಗಾಗಿ 2,000 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಬತ್ತುತ್ತಿದೆ. ಹಲವು ನದಿ ಗಳು ಬತ್ತಿ ಹೋಗಿವೆ. ಈ  ಪರಿಸ್ಥಿತಿಯಲ್ಲಿ ರೈತರು ನೀರನ್ನು ಮಿತವಾಗಿ ಬಳಿಸ ಬೇಕಿದೆ. ಇಸ್ರೇಲ್ ದೇಶದಲ್ಲಿನ ನೀರು ಬಳಸುವ ಪದ್ದತಿ ನಮ್ಮಲ್ಲು ಬರಬೇಕಿದೆ. ಹೆಚ್ಚಿನ ನೀರು ಬಳಕೆಯಿಂದ ಭೂಮಿ ಹಾನಿ ಆಗುತ್ತಿದ್ದು, ಇದರಿಂದ ಸವಳು-ಜವಳು ಉಂಟಾಗುತ್ತದೆ ಎಂದರು.

ನಾನು ಸಹ ನನ್ನ ಕ್ಷೇತ್ರದಲ್ಲಿ ₹ 150 ಕೋಟಿಯಷ್ಟು ಹಣವನ್ನು ವೆಚ್ಚಮಾಡಿ, 18 ಬ್ಯಾರೇಜ್‌ ನಿರ್ಮಾಣ ಮಾಡಿದ್ದೇನೆ. ನಿರ್ಮಾಣ ಮಾಡಿರುವುದರಿಂದ 1000 ಅಡಿಯಷ್ಟು ಆಳ ಕೊಳವೆಬಾವಿ ಕೊರೆ ದಾಗ ಸಿಗುವಂತಾ ನೀರು ಇಂದು 100–200 ಆಳದಲ್ಲಿ ಸಿಗುತ್ತಿದೆ. ಇದರಿಂದ ನೀರನ ಕೊರತೆಯನ್ನು  ಸ್ವಲ್ಪ ಪ್ರಮಾಣ ವಾಗಿ ನಿಭಾಯಿಸಿದಂತಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ರೈತರ ಈ ಯಶೋಗಾಥೆ ರಾಜ್ಯಕ್ಕೆ ಮಾದರಿ. ಎಲ್ಲ ರೈತರು ಈ ರೀತಿಯ ನೀರಿನ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗ ಬೇಕು ಎಂದರು. ಜಮಖಂಡಿ ಶಾಸಕ ಸಿದ್ದು ನ್ಯಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರು ಶ್ರಮಬಿಂದು ಸಾಗರಕ್ಕೆ ಬಾಗಿನ ಅರ್ಪಿಸಿದರು. ಮುಗಳ ಖೋಡದ ಡಾ.ಮುರುಘ ರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಸುರಳಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT