ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕೃಷಿ ವಿಧಾನ ಹೀಗೆ

ಎಣಿಕೆ ಗಳಿಕೆ
Last Updated 6 ಫೆಬ್ರುವರಿ 2017, 20:28 IST
ಅಕ್ಷರ ಗಾತ್ರ
ಮನೆ ನಿರ್ಮಾಣ: 10/10 ಅಡಿ ನೆರಳು ಪರದೆಯ ಮನೆ ನಿರ್ಮಿಸಬೇಕು. ಅದರಲ್ಲಿ 6 ಅಡಿ ಎತ್ತರ, 4 ಅಡಿ ಅಗಲ ಮತ್ತು 8 ಅಡಿ ಉದ್ದದ 8 ಭಾಗಗಳನ್ನು  ಮಾಡಬೇಕು. ಒಂದು ಭಾಗದಲ್ಲಿ ಒಂದು ಅಡಿ ಅಗಲ ಹಾಗೂ ಒಂದೂವರೆ ಅಡಿ ಉದ್ದದ 9 ಟ್ರೇಗಳನ್ನು ಅಳವಡಿಸಬೇಕು. 
 
ಈ ರೀತಿಯಾಗಿ ಒಟ್ಟು 72 ಟ್ರೇಗಳನ್ನು ಅಳವಡಿಸಬಹುದು.
 
**
ಜಲಕೃಷಿ ವಿಧಾನದಲ್ಲಿ ಮೇವು ಬೆಳೆಸಲು ರಾಗಿ, ಗೋಧಿ, ಓಟ್ಸ್, ಬಾರ್ಲಿ, ಹುರುಳಿ, ಅಲಸಂದೆ ಹೀಗೆ ಅನೇಕ ತರಹದ ಬೀಜಗಳನ್ನು ಬಳಸಬಹುದಾದರೂ ಗೋವಿನ ಜೋಳ ಉತ್ತಮ.
 
**
ಕಾಳು ಹಾಕುವ ವಿಧಾನ: ಗೋವಿನ ಜೋಳವನ್ನು 24 ಗಂಟೆ ನೀರಿನಲ್ಲಿ ನೆನೆಹಾಕಿ, ನಂತರ 24ಗಂಟೆ  ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಿಸಬೇಕು. ಮೊಳಕೆ ಒಡೆದ ಕಾಳುಗಳನ್ನು ಒಂದು ಟ್ರೇಗೆ 550 ಗ್ರಾಂನಂತೆ ಮೊದಲನೆಯ ವಿಭಾಗದಲ್ಲಿ ಇಡಬೇಕು.
 
ಎಂಟು ದಿನಗಳವರೆಗೆ ಒಂದು ವಿಭಾಗದಿಂದ ಒಂದು ವಿಭಾಗಕ್ಕೆ ಬದಲಾಯಿಸುತ್ತಾ ಹೋಗಬೇಕು. 10ನೇ ದಿನಕ್ಕೆ ಪೌಷ್ಟಿಕವಾದ ಪಶುಆಹಾರ ದೊರೆಯುತ್ತದೆ. 
 
**
ಈ ವಿಧಾನದಿಂದಾಗಿ ಒಂದು ಕೆ.ಜಿ ಗೋವಿನ ಜೋಳದಿಂದ  10 ದಿನಗಳಲ್ಲಿ 3-4 ಇಂಚು ದಪ್ಪ ಬೇರು ಇರುವ, 6-7 ಇಂಚು ಎತ್ತರ ಬೆಳೆಯುವ ಸುಮಾರು 8-10 ಕೆ.ಜಿ. ತೂಕವುಳ್ಳ ಮೇವು ಲಭ್ಯ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT