ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದಾಸ ಸಮ್ಮೇಳನಕ್ಕೆ ಚಾಲನೆ

Last Updated 11 ಫೆಬ್ರುವರಿ 2017, 12:47 IST
ಅಕ್ಷರ ಗಾತ್ರ

ಉಡುಪಿ: ಭಕ್ತಿ ವಾಹಿನಿ ಹರಿಯುವಲ್ಲಿ ಪರಮಾತ್ಮನ ಸ್ಮರಣೆ ಸದಾ ನೆಲೆಸುತ್ತದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಹರಿದಾಸ ಸಮ್ಮೇಳನ ಟ್ರಸ್ಟ್‌ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಸಹಯೋಗದಲ್ಲಿ ನಗರದ ರಾಜಾಂಗ ಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ಅಖಿಲ ಭಾರತ ಹರಿದಾಸ ಸಮ್ಮೇಳ ನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 

‘ನಾರಾಯಣ’ ಎಂಬ ನಾಲ್ಕು ಅಕ್ಷ  ರದ ದೇವರನಾಮವನ್ನು ಹೇಳಲು ಕಷ್ಟ ವಿಲ್ಲ. ಅತ್ಯಂತ ಸುಲಭವಾಗಿದೆ. ಅಲ್ಲದೆ, ಅವರವರ ನಾಲಿಗೆ ಅವರ ಸ್ವಾಧೀನ ದಲ್ಲಿದೆ. ಆದರೂ ಜನರು ಅಸಡ್ಡೆ ತೋರುತ್ತಿದ್ದಾರೆ. ಆ ಮೂಲಕ ನರಕದ ಹಾದಿಯಲ್ಲಿ ಸಾಗಿದ್ದಾರೆ. ಇದಕ್ಕಿಂತ ಆಶ್ಚ ರ್ಯದ ವಿಷಯ ಬೇರೊಂದಿಲ್ಲ ಎಂದು ವಿಷಾದಿಸಿದರು.

ಭಕ್ತಿ ಮಾರ್ಗದಲ್ಲಿ ಮುನ್ನಡೆದು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು. ಆಗ ಜೀವನದಲ್ಲಿ ಎಲ್ಲವೂ ಸಿದ್ದಿ ಯಾಗುತ್ತದೆ. ಸಮಾಜದಲ್ಲಿ ಹರಿದಾಸರ ಜ್ಞಾನಭಕ್ತಿಯ ಪ್ರಸಾರ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರು ತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು.

ಪರಗಿ ಸರ್ವಾಧಾರ ವಿಠಲದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಜಯತೀರ್ಥ ಸಂಕೀರ್ತನೆ ಪಠಿಸಿದರು. ವೇದಾ ವಾಮನ್‌ ರಾವ್‌ ಪ್ರಾರ್ಥಿಸಿದರು. ಹರಿನಾರಾಯಣ ವಿಠಲ ದಾಸ ಸ್ವಾಗತಿಸಿದರು. ವರಹರಿ ವಿಠಲದಾಸ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT