ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಯೊಬ್ಬರ ಮನಸ್ಸು ಮಕ್ಕಳ ಮನಸ್ಸಾಗಬೇಕು’

ಡಾ.ಶಿವರಾಮ ಕಾರಂತ ಬಾಲವನದಲ್ಲಿ ‘ಮಕ್ಕಳ ಹಬ್ಬ’
Last Updated 18 ಫೆಬ್ರುವರಿ 2017, 6:54 IST
ಅಕ್ಷರ ಗಾತ್ರ
ಪುತ್ತೂರು: ಮಕ್ಕಳ ಮನಸ್ಸು ಯಾವುದೇ ಜಾತಿ, ಧರ್ಮ, ದ್ವೇಷಗಳಿಲ್ಲದೆ ಪರಿಶುದ್ಧವಾಗಿದೆ. ಆದರೆ ಬೆಳೆದಂತೆ ಹೆತ್ತವರು ಮತ್ತು ಸಮಾಜ ಅವರಲ್ಲಿ ಇವೆಲ್ಲವನ್ನೂ ಕಲಿಸುವುದರಿಂದ ಮಕ್ಕಳು ಹಾದಿ ತಪ್ಪುವಂತಾಗುತ್ತಿದೆ. ಹೀಗಾಗಿ ಪ್ರತಿಯೊ ಬ್ಬರ ಮನಸ್ಸು ಮಕ್ಕಳ ಮನಸ್ಸಾಗಬೇಕಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು. 
 
ಇಲ್ಲಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಧಾರವಾಡದ ಬಾಲ ವಿಕಾಸ ಅಕಾಡೆಮಿ, ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯಿತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಅಕಾಡೆಮಿ ಜಿಲ್ಲಾ ಕಾರ್ಯಾ ನುಷ್ಠಾನ ಸಮಿತಿ, ಡಾ.ಶಿವರಾಮ ಕಾರಂತ ಬಾಲವನ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಪುತ್ತೂರು ಮಹಾ ಲಿಂಗೇಶ್ವರ ದೇವಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶುಕ್ರ ವಾರ ನಡೆದ ಜಿಲ್ಲಾ ಮಟ್ಟದ ‘ಮಕ್ಕಳ ಹಬ್ಬ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಕ್ಕಳ ಬದುಕಿನ ಸಾಮಾ ಜಿಕ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಮಕ್ಕಳ ಮತ್ತು ಮಹಿಳೆ ಯರ ಮರಣ ನಿಯಂತ್ರಣದಲ್ಲಿ ಪ್ರಗತಿ ಸಾಧಿಸುತ್ತಿದೆ. ಅಂಗನವಾಡಿಗಳ ಮೂ ಲಕ ಮಕ್ಕಳಿಗೆ, ಗರ್ಭಿಣಿ, ಬಾಣ ತಿಯ ರಿಗೆ, ಕಿಶೋರಿಯರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸುತ್ತಿದೆ ಎಂದರು. 
 
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂ ತಳಾ ಶೆಟ್ಟಿ ಅವರು ಮಾತನಾಡಿ, ಬಾಲ ವನದಲ್ಲಿ ಮಕ್ಕಳ ಧ್ವನಿ ಪ್ರತಿಧ್ವನಿಸು ತ್ತಿರುವುದು ಕಾರಂತರ ಆತ್ಮಕ್ಕೆ ಶಾಂತಿ ಯನ್ನು ನೀಡಬಹುದು. ಕಾರಂತರ ಮಕ್ಕಳ ಪ್ರೀತಿಗೆ ಮಕ್ಕಳ ಹಬ್ಬ ಜೀವಂತಿಕೆಯ ಸಾಕ್ಷಿಯಾಗಿದೆ ಎಂದರು. 
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾ ಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮ ನಾಥ ಶೆಟ್ಟಿ, ಉಪವಿಭಾಗಾಧಿಕಾರಿ ಡಾ. ರಘುನಂದನ್ ಮೂರ್ತಿ, ತಹಶೀಲ್ದಾರ್ ಗಾರ್ಗಿ ಜೈನ್, ಜಿಲ್ಲಾ ಮಕ್ಕಳ ಕಲ್ಯಾಣಾ ಧಿಕಾರಿ ಉಸ್ಮಾನ್, ಬಾಲವಿಕಾಸ ಅಕಾ ಡೆಮಿ ಸದಸ್ಯೆ ಹೇಮ, ತಾಲ್ಲೂಕು ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಮತ್ತಿತರರು ಇದ್ದರು. 
 
ತಾಲ್ಲೂಕು ಶಿಕ್ಷಣ ಪರಿವೀಕ್ಷಣಾ ಧಿಕಾರಿ ಸುಂದರ ಗೌಡ ಸ್ವಾಗತಿಸಿದರು. ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಅಧಿಕಾರಿ ಶಾಂತಿ ಹೆಗಡೆ ವಂದಿಸಿ, ಪ್ರೊ. ಬಿ.ಜೆ.ಸುವರ್ಣ ನಿರೂಪಿಸಿದರು.
 
* ಜಿಲ್ಲಾ ಮಟ್ಟದ ಈ ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ನಿರೀಕ್ಷಿತ ಸಹಕಾರ ನೀಡಿಲ್ಲ, ತಾಲ್ಲೂಕು ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳು ಗೈರಾಗಿದ್ದಾರೆ

ಶಕುಂತಳಾ ಟಿ.ಶೆಟ್ಟಿ, ಶಾಸಕಿ 

* ಪುತ್ತೂರಿನ ಐತಿಹಾಸಿಕ ಬೀರಮಲೆ ಬೆಟ್ಟವನ್ನು ಟ್ರೀಪಾರ್ಕ್ ಆಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು
ಬಿ.ರಮಾನಾಥ ರೈ, ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT