ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರ: ಏಳು ವಾಹನ ಬಿಡುಗಡೆ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮುಂಚೂಣಿ ವಾಹನ ತಯಾರಿಕಾ ಕಂಪೆನಿ ಮಹೀಂದ್ರ  ಆ್ಯಾಂಡ್‌ ಮಹೀಂದ್ರಾ, ಶುಕ್ರವಾರ ನಗರದಲ್ಲಿ ಏಕಕಾಲಕ್ಕೆ ಏಳು ಹೊಸ ‘ಸುಪ್ರೊ’ ಸರಣಿಯ ವಾಹನಗಳನ್ನು ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಈ ಪೈಕಿ ನಾಲ್ಕು ಪ್ರಯಾಣಿಕರ ಮಿನಿ ವ್ಯಾನ್‌ ಮತ್ತು ಮೂರು ಸರಕು ಸಾಗಣೆ  ವಾಹನ (ಮಿನಿ ಟ್ರಕ್‌) ಸೇರಿವೆ. ಈ ಏಳು ವಾಹನಗಳ ಸೇರ್ಪಡೆಯೊಂದಿಗೆ   ‘ಸುಪ್ರೊ’ ಸರಣಿಯ ವಾಹನಗಳ ಸಂಖ್ಯೆ 11ಕ್ಕೆ ಏರಿದಂತಾಗಿದೆ.

‘ಸ್ವಂತ ಬಳಕೆ, ವಾಣಿಜ್ಯ ಬಳಕೆ, ಶಾಲಾ ವಾಹನ ಹೀಗೆ ವಿವಿಧ ವಲಯದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈ ವಾಹನಗಳನ್ನು ವಿನ್ಯಾಸ ಮಾಡಲಾಗಿದೆ’ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿವೇಕ್‌ ನಯ್ಯರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕು ಚಕ್ರಗಳ ಸಣ್ಣ ವಾಹನ ತಯಾರಿಕೆಯಲ್ಲಿ ಕಂಪೆನಿ ಮುಂಚೂಣಿಯಲ್ಲಿದ್ದು ಮಾರುಕಟ್ಟೆಯಲ್ಲಿ ಶೇ51ರಷ್ಟು ಪಾಲು ಹೊಂದಿದೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಸುಪ್ರೊ ಸರಣಿಯಲ್ಲಿ ಡೀಸೆಲ್‌, ಸಿಎನ್‌ಜಿ, ವಿದ್ಯುತ್‌ಚಾಲಿತ ವಾಹನಗಳ ಆಯ್ಕೆ ನೀಡಲಾಗಿದೆ.
‘ಸುಪ್ರೊ ಮಿನಿ ವ್ಯಾನ್‌ ದೇಶದ ಮೊದಲ ಸಿಎನ್‌ಜಿ ಸರಕು ಸಾಗಾಣಿಕೆ ವಾಹನ ಎಂಬ ಹೆಗ್ಗಳಿಕೆ ಹೊಂದಿದೆ’ ಎಂದು ನಯ್ಯರ್‌ ತಿಳಿಸಿದರು. ಬೆಂಗಳೂರಿನಲ್ಲಿ ಮಿನಿ ವ್ಯಾನ್‌
ಬೆಲೆ ₹4.61 ಲಕ್ಷದಿಂದ (ಎಕ್ಸ್‌–ಷೋರೂಂ) ಆರಂಭ. ಮಿನಿ ಟ್ರಕ್‌
ಬೆಲೆ  ₹4.33 ಲಕ್ಷ ಇದೆ.

ನಾಲ್ಕೈದು ತಿಂಗಳ ನಂತರ ಸಹಜ ಸ್ಥಿತಿ
‘ನೋಟು ರದ್ದತಿಯ ನಂತರ ಕುಸಿದಿದ್ದ ದೇಶದ ವಾಹನ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಲು ಇನ್ನೂ ನಾಲ್ಕೈದು ತಿಂಗಳಾಗಬಹುದು’ ಎಂದು ವಿವೇಕ್‌ ನಯ್ಯರ್‌ ಅಭಿಪ್ರಾಯಪಟ್ಟರು.
‘ಹಿಂದಿನ ಎರಡು–ಮೂರು ತಿಂಗಳಿಗೆ ಹೋಲಿಸಿದರೆ ಸದ್ಯಕ್ಕೆ ದೇಶದ ವಾಹನ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT