ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ನಗರಪಾಲಿಕೆಗೆ ಇಂದು ಮತದಾನ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಏಷ್ಯಾದ ಅತಿ ದೊಡ್ಡ ಸ್ಥಳೀಯ ಸಂಸ್ಥೆಯಾಗಿರುವ ಆಡಳಿತವಾಗಿರುವ ಬೃಹನ್‌ಮುಂಬೈ ಮಹಾನಗರಪಾಲಿಕೆಗೆ ಮಂಗಳವಾರ ಮತದಾನ ನಡೆಯಲಿದೆ.

ಮಹಾರಾಷ್ಟ್ರದ ಆಡಳಿತಾರೂಢ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ನಡುವೆ ಒಡಕು ಉಂಟಾಗಿರುವುದರಿಂದ ಈ ಚುನಾವಣೆ ಮಹತ್ವದ್ದಾಗಿದೆ.
ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಚುನಾವಣಾ ಫಲಿತಾಂಶವು ಇಬ್ಬರೂ ನಾಯಕರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಜತೆಗೆ, ಮಹಾರಾಷ್ಟ್ರ ಸರ್ಕಾರದ ಸ್ಥಿರತೆಯೂ ಚುನಾವಣಾ ಫಲಿತಾಂಶವನ್ನು ಆಧರಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಠಾಣೆ,  ಉಲ್ಹಾಸ್‌ನಗರ, ಪುಣೆ, ಪಿಂಪ್ರಿ–ಚಿಂಚವಾಡ, ಸೊಲ್ಲಾಪುರ, ನಾಸಿಕ್, ಅಕೋಲಾ, ಅಮರಾವತಿ ನಾಗಪುರ ನಗರಪಾಲಿಕೆಗಳು ಹಾಗೂ 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯಿತಿ ಸಮಿತಿಗಳಿಗೂ ಮಂಗಳವಾರ ಚುನಾವಣೆ ನಡೆಯಲಿದೆ.

ಬೃಹತ್ ಪಾಲಿಕೆ
* ಬಿಎಂಸಿಯ ವಾರ್ಷಿಕ ಬಜೆಟ್‌ನ ಮೊತ್ತ ₹37,052
* ಬಿಎಂಸಿ ಹೊಂದಿರುವ ನಿಶ್ಚಿತ ಠೇವಣಿಯ ಮೊತ್ತ ₹51,000 ಕೋಟಿ
* ದೇಶದಾದ್ಯಂತ ಪಾವತಿಸಲಾಗುತ್ತಿರುವ ಒಟ್ಟು ಆದಾಯ ತೆರಿಗೆ ₹2 ಲಕ್ಷ ಕೋಟಿ ಪೈಕಿ, 33% ಮುಂಬೈಯಿಂದ ಪಾವತಿ

ಪ್ರತ್ಯೇಕ ಸ್ಪರ್ಧೆ
ಪ್ರಸ್ತುತ ಬೃಹನ್‌ಮುಂಬೈ ಮಹಾನಗರಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಶಿವಸೇನಾ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಕಳೆದ ಎರಡು ದಶಕಗಳಿಂದ ಶಿವಸೇನಾ ಮತ್ತು ಬಿಜೆಪಿ ನಿರಂತರವಾಗಿ ಅಧಿಕಾರ ಪಡೆಯುತ್ತಾ ಬಂದಿವೆ.

ಬಿಎಂಸಿ: ಚುನಾವಣಾ ವಿವರ

227 ಸ್ಥಾನಗಳು

2,275 ಅಭ್ಯರ್ಥಿಗಳು ಕಣದಲ್ಲಿ 

92 ಲಕ್ಷ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT