ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವ

Last Updated 21 ಫೆಬ್ರುವರಿ 2017, 4:30 IST
ಅಕ್ಷರ ಗಾತ್ರ
ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಾರ್ಚ್‌ 3ರಿಂದ 5ರವರೆಗೆ ನಡೆಯಲಿ ರುವ ಹನ್ನೆರಡನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಲುವಾಗಿ ನಾಗರಿಕ ಸ್ವಾಗತ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.
 
ಸಮಿತಿಯ ಅಧ್ಯಕ್ಷರಾಗಿ ಪೋಲಾ ರಾಧಾಕೃಷ್ಣ, ಗೌರವಾಧ್ಯಕ್ಷರಾಗಿ ಗಾದೆಂ ಗೋಪಾಲಕೃಷ್ಣ, ಉಪಾಧ್ಯಕ್ಷರಾಗಿ ಡಾ.ಡಿ.ಎಲ್‌.ರಮೇಶ ಗೋಪಾಲ, ಎನ್‌.ಯಶವಂತರಾಜ, ಪ್ರಧಾನ ಕಾರ್ಯ ದರ್ಶಿಯಾಗಿ ಉಡೇದ ಬಸವರಾಜ, ಕಾರ್ಯದರ್ಶಿಗಳಾಗಿ ಡಾ.ಸಿ.ಯೋಗಾ ನಂದರೆಡ್ಡಿ, ಎಸ್‌.ಸತೀಶಬಾಬು, ಗಣ ಪಾಲ ಐನಾಥರೆಡ್ಡಿ, ಮರ್ಚೆಡ್ ಮಲ್ಲಿಕಾರ್ಜುನಗೌಡ ಸೇರಿದಂತೆ 39ಕ್ಕೂ ಹೆಚ್ಚಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವಕ್ಕೆ ಅಗತ್ಯ ನೆರವು ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸುವಲ್ಲಿ ಸಮಿತಿಯ ಪದಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ವಸತಿ, ಊಟ ವ್ಯವಸ್ಥೆ ಯನ್ನೂ ಒದಗಿಸಲಿದ್ದಾರೆ ಎಂದರು. 
 
ರಾಜ್ಯದ ವಿವಿಧ ಹದಿನಾರು ಜಿಲ್ಲೆ ಗಳಿಂದ ಸರಿಸುಮಾರು 21ಕ್ಕೂ ಹೆಚ್ಚಿನ ಕಾಲೇಜು ತಂಡಗಳು ಭಾಗವಹಿಸಲಿವೆ. ತಂಡಗಳ ಸಂಖ್ಯೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
 
ಪ್ರತಿಬಾರಿ ಅಭಿನಯ, ನಿರ್ದೇಶನ ಗಳಿಗೆ ಪ್ರಾಮುಖ್ಯ ನೀಡಿತ್ತಾದರೂ, ಈ ಬಾರಿಯ ನಾಟಕೋತ್ಸವದಲ್ಲಿ ನೇಪಥ್ಯದ ರಂಗ ಸಜ್ಜಿಕೆ – ರಂಗ ಪರಿಕರ, ಪ್ರಸಾಧನ – ವೇಷಭೂಷಣ ಹಾಗೂ ಧ್ವನಿ ಮತ್ತು ಬೆಳಕು ಸಂಯೋಜನೆ ಕಲಾವಿದರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನವೂ ನಡೆಯಲಿದೆ. ಸರ್ವಾಧ್ಯಕ್ಷರು ಅದೇ ಹಿನ್ನೆಲೆಯುಳ್ಳವರಾಗಿದ್ದರಿಂದ ನೇಪಥ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದರು.
 
ಕಾಲೇಜು ತಂಡಗಳಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಹಾಗೂ ₹  10 ಸಾವಿರ ನಗದು ಹಾಗೂ ಫಲಕ ಗಳನ್ನು ನೀಡಲಾಗುವುದು. ಉತ್ತಮ ನಟ-ನಟಿ, ನಿರ್ದೇಶಕ, ರಂಗ ಸಜ್ಜಿಕೆ, ಸಂಗೀತ, ಪ್ರಸಾಧನ, ಧ್ವನಿ- – ಬೆಳಕು, ವೇಷ–ಭೂಷಣ ಹಾಗೂ ಉದಯೋ ನ್ಮುಖ ನಾಟಕಕಾರ ರಂಗ ಪುರಸ್ಕಾರ ವನ್ನೂ ನೀಡಲಾಗುವುದು ಎಂದರು.
 
ಸಮಿತಿಯ ಪ್ರಧಾನ ಕಾರ್ಯದರ್ಶಿ ಉಡೇದ ಬಸವರಾಜ ಮಾತನಾಡಿ, ಇದೇ 22ರಂದು ನಾಟಕೋತ್ಸವದ ಸರ್ವಾಧ್ಯಕ್ಷ ಶಶಿಧರ ಅಡಪ ಅವರಿಗೆ ಬೆಂಗಳೂರಿನಲ್ಲಿ ಆಹ್ವಾನ ನೀಡ ಲಾಗುವುದು ಎಂದರು. ಸಮಿತಿಯ ಪದಾಧಿಕಾರಿಗಳಾದ ಎನ್‌.ಯಶವಂತ ರಾಜ, ಪೋಲಾ ರಾಧಾಕೃಷ್ಣ, ಗಾದೆಂ ಗೋಪಾಲಕೃಷ್ಣ,  ಗಣಪಾಲ ಐನಾಥ ರೆಡ್ಡಿ, ರಂಗತೋರಣ ಸಂಸ್ಥೆಯ ಮುಖ್ಯಸ್ಥ ರಾದ ಕೆ.ಆರ್‌.ಮಲ್ಲೇಶಕುಮಾರ್, ಅಡವಿಸ್ವಾಮಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT