ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಕುಲಪತಿಗೆ ಆಹ್ವಾನ: ವಿರೋಧ

Last Updated 4 ಮಾರ್ಚ್ 2017, 6:45 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಕರ್ನಾಟಕ ವಿ.ವಿ ಘಟಿಕೋತ್ಸವಕ್ಕೆ ಜೆ.ಎನ್‌.ಯು ಕುಲಪತಿ ಡಾ.ಜಗದೀಶ ಕುಮಾರ್‌ ಅವರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ನಗರದ ಪ್ರಥಮ ದರ್ಜೆ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ತಾಲ್ಲೂಕು ಘಟಕದ  ಪದಾಧಿಕಾರಿಗಳು ನಂತರ ಪ್ರಭಾರ ಪ್ರಾಚಾರ್ಯ ಪ್ರೊ. ಅರುಣ್‌ಚಂದನ್‌ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾ ರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಶಿಧರ ನಾಯಕ್, ‘ಡಾ.ಜಗದೀಶ ಕುಮಾರ್‌ ಅವರು ಜೆಎನ್‌ಯುನಲ್ಲಿ ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ. ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳ ಮೇಲೆ ವಿನಾ ಕಾರಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೇ, ಶಿಸ್ತುಕ್ರಮದ ಹೆಸರಿನಲ್ಲಿ ಭಾರಿ ಮೊತ್ತದ ದಂಡ ವಿಧಿಸುತ್ತಿದ್ದಾರೆ. ಅವರ ಈ ಧೋರಣೆ ಸರಿಯಲ್ಲ’ ಎಂದರು.

‘ಕುಲಪತಿಯವರು ದಲಿತ ವಿರೋಧಿ ನಿಲುವು ಹೊಂದಿದ್ದಾರೆ. ನಾಲ್ಕು ತಿಂಗಳಿನಿಂದ ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್‌ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳದೆ ವಿದ್ಯಾರ್ಥಿ ವಿರೋಧಿ ನಿಲುವನ್ನು ಅವರು ಹೊಂದಿದ್ದಾರೆ’ ಎಂದು ಅವರು ಟೀಕಿಸಿದರು.

ಘಟಿಕೋತ್ಸವದ ಉದ್ಘಾಟಕರಾಗಿ ಅವರು ಭಾಗವಹಿಸಿದರೆ  ವಿ.ವಿಯ ಘನತೆ ಹಾಳಾಗುತ್ತದೆ’ ಎಂದು ಶಶಿಧರ ನಾಯಕ್‌ ಹೇಳಿದರು. ಬಸವರಾಜ ಭೋವಿ, ಅರುಣ ಪೂಜಾರ, ಡಿವೈಎಫ್ಐ ಅಧ್ಯಕ್ಷ ಚಂದ್ರು ಲಮಾಣಿ, ಹನುಮಂತ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT