ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಫ್‌ಸಿ ವಿರುದ್ಧ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟೀಕೆ

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಮಹಿಳೆಯರಿಗೆ ಸಂಬಂಧಿಸಿದ ಕಥಾವಸ್ತು ಹಾಗೂ ಸಲಿಂಗಕಾಮ ವಿಚಾರದ ಎರಡು ಚಿತ್ರಗಳಿಗೆ ಪ್ರಮಾಣಪತ್ರ ನೀಡಲು ನಿರಾಕರಿಸಿದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ (ಎಐಐ) ಟೀಕೆ ವ್ಯಕ್ತಪಡಿಸಿದೆ.

‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಕಾ’ ಹಾಗೂ ‘ಕಾ ಬಾಡಿಸ್ಕೇಪ್ಸ್‌್’ ಚಿತ್ರಗಳಿಗೆ ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿ ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಐಐ ಕಾರ್ಯನಿರ್ವಾಹಕ ನಿರ್ದೇಶಕ ಆಕಾರ್‌ ಪಟೇಲ್‌ ‘ಜನರು ತಮಗೆ ಬೇಕಾದ ಚಿತ್ರಗಳನ್ನು ವೀಕ್ಷಿಸುವ ನಿರ್ಧಾರ ಕೈಗೊಳ್ಳುವಷ್ಟು ಪ್ರಬುದ್ಧರಿದ್ದಾರೆ’ ಎಂದು ಹೇಳಿದ್ದಾರೆ. 

ಸಿಬಿಎಫ್‌ಸಿ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಬಾರದು ಎಂದು ಎಐಐ ಹೇಳಿದೆ.

‘ಮಹಿಳೆಯರ ಲೈಂಗಿಕತೆ ಹಾಗೂ ಸಲಿಂಗಕಾಮದ ಸಂಬಂಧಗಳನ್ನು ಹೊಂದಿವೆ ಎನ್ನುವ ಕಾರಣಕ್ಕಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿಬಿಎಫ್‌ಸಿ ನಿರಾಕರಿಸಿದೆ. ಇದು ಕಲಾಭಿವ್ಯಕ್ತಿ ಕುರಿತು ಬಹಿರಂಗವಾಗಿ ನಡೆಸಲಾದ ವಿಮರ್ಶೆ’ ಎಂದು ಎಐಐ ಹೇಳಿದೆ.

‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಕಾ’ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಫೆ.24ರಂದು ನಿರಾಕರಿಸಲಾಗಿತ್ತು. ಇದಾದ ನಾಲ್ಕು ದಿನಗಳ ಬಳಿಕ, ಜಯನ್‌ ಚೆರಿಯನ್‌್ ನಿರ್ದೇಶನದ ‘ಕಾ ಬಾಡಿಸ್ಕೇಪ್ಸ್‌’ ಚಿತ್ರಕ್ಕೂ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿತ್ತು.

‘ಕಾ ಬಾಡಿಸ್ಕೇಪ್ಸ್‌ ಚಿತ್ರದಲ್ಲಿ ಸಲಿಂಗಕಾಮವನ್ನು ವೈಭವೀಕರಿಸಲಾಗಿದೆ. ಹಿಂದು ಧರ್ಮವನ್ನು, ನಿರ್ದಿಷ್ಟವಾಗಿ ಹನುಮಂತನನ್ನು ಸಲಿಂಗಕಾಮಿ ಎಂದು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಇದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ’ ಎಂದು ಸಿಬಿಎಫ್‌ಸಿ ಹೇಳಿತ್ತು.

**

ಕಳಪೆ ಚಿತ್ರಗಳ ಪ್ರದರ್ಶನಕ್ಕೆ ಸಮಸ್ಯೆ ಆಗುವುದಿಲ್ಲ. ಆದರೆ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಹುಮಾನ ಪಡೆದ ಚಿತ್ರಕ್ಕೆ ಅಡ್ಡಿಯಾಗಿರುವುದು ಬೇಸರದ ವಿಚಾರ.
-ಕೊಂಕಣಾ ಸೇನ್‌, ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಕಾ ಚಿತ್ರದ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT