ಡಮಾಸ್ಕಸ್/ಸಿರಿಯಾ: ಇಲ್ಲಿನ ಬಾಬ್ ಮುಸಲ್ಲಾ ಬಳಿಯ ಬಾಬ್–ಅಲ್ ಸಾಗೀರ್ ಪ್ರದೇಶದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಶಿಯಾ ಯಾತ್ರಾರ್ಥಿಗಳು ಸೇರಿದಂತೆ 44 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೆಲವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಬಾಂಬ್ ರಸ್ತೆಯ ಬಳಿ ಬಸ್ ಚಲಿಸುವಾಗ ಸ್ಫೋಟಗೊಂಡಿದೆ. ಮತ್ತೊಂದು ಬಾಂಬರ್ ಶಿಯಾ ಸಮುದಾಯದ ಪವಿತ್ರ ಸ್ಥಳವಾದ ಬಾಬ್‌ಅಲ್–ಸಾಗೀರ್ ಪ್ರದೇಶದಲ್ಲಿ ಸ್ವತಃ ತಾನೇ ಸ್ಫೋಟಿಸಿಕೊಂಡಿದ್ದಾನೆ.

ಈ ಸ್ಥಳಕ್ಕೆ ಶಿಯಾ ಸಮುದಾಯಕ್ಕೆ ಸೇರಿದ ಯಾತ್ರಾರ್ಥಿಗಳು ಪ್ರಪಂಚದ ಮೂಲೆ ಮೂಲೆಯಿಂದಲೂ ಆಗಮಿಸುತ್ತಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ಮುಖ್ಯಸ್ಥ ರಾಮೀ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಶಿಯಾಪಂಗಡಕ್ಕೆ ಸೇರಿದ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಅಲ್‌ಕೈದಾ ಹಾಗೂ ಐಎಸ್ ಸಂಘಟನೆಗೆ ಸೇರಿದ ಸುನ್ನಿ ತೀವ್ರವಾದಿಗಳು ದಾಳಿ ನಡೆಸಿದ್ದಾರೆ. ಕೇವಲ ಸಿರಿಯಾ ಮಾತ್ರವಲ್ಲ ನೆರೆ ರಾಷ್ಟ್ರವಾದ ಇರಾಕ್‌ನಲ್ಲಿಯೂ ದಾಳಿ ನಡೆಸುವ ಶಂಕೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ಜನವರಿ ತಿಂಗಳಿನಲ್ಲಿ ಸೌಸ ಜಿಲ್ಲೆಯಲ್ಲಿ ಕೂಡ ನಡೆದ ಅವಳಿ ಬಾಂಬ್ ಸ್ಫೋಟ ನಡೆದಿತ್ತು. ಈ ವೇಳೆ 8 ಯೋಧರು ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದರು. 2011ರಲ್ಲಿ ನಡೆದ ಸ್ಫೋಟದಲ್ಲಿಯೂ ಕೂಡ 40 ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.