ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ತಪ್ಪು ದಾರಿಗೆಳೆದ ಬಿಜೆಪಿ’

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲಖನೌ: ಮತದಾರರನ್ನು ತಪ್ಪು ದಾರಿಗೆ ಎಳೆಯುವ ಮೂಲಕ ಬಿಜೆಪಿ ಚುನಾವಣೆಯನ್ನು ಗೆದ್ದಿದೆ ಎಂದು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿ ಸುತ್ತಿರುವ ಅಖಿಲೇಶ್ ಯಾದವ್ ಹೇಳಿದರು. ಸೋಲಿನ ನಂತರ ಅಖಿಲೇಶ್, ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

‘ತಮ್ಮ ನೇರ ನಡೆನುಡಿ ಜನತೆಗೆ ಇಷ್ಟವಾದಂತಿಲ್ಲ, ಅದಕ್ಕಾಗಿ ಅವರು ‘ಬುಲೆಟ್ ಟ್ರೈನಿಗೆ’ ಮತ ಹಾಕಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಟ್ಯೂಬ್‌ಲೆಸ್ ಟೈರ್ ಆಗಿರುವುದರಿಂದ ನಮ್ಮ ಸೈಕಲ್ ಪಂಕ್ಷರ್ ಆಗಲಿಲ್ಲ ಎಂದರು. ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಅಖಿಲೇಶ್ ಹೇಳಿದರು.

**

ಕಾಂಗ್ರೆಸ್ಸಿಗೂ ಸಿಕ್ಕಿತ್ತು ಭಾರಿ ಗೆಲುವು

1952ರಲ್ಲಿ ಒಟ್ಟು 430ರ ಪೈಕಿ ಕಾಂಗ್ರೆಸ್ 388 ಸೀಟುಗಳನ್ನು ಗೆದ್ದಿತ್ತು. 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಜನತಾಪಾರ್ಟಿಗೆ 352 ಸೀಟುಗಳು ದೊರೆತಿದ್ದವು. 1980ರಲ್ಲಿ ಕಾಂಗ್ರೆಸ್ 309 ಸೀಟುಗಳನ್ನು ಗೆದ್ದಿತ್ತು.

ಉತ್ತರಪ್ರದೇಶ ವಿಭಜನೆ ಬಳಿಕ 403 ಸೀಟುಗಳ ಪೈಕಿ ಬಿಜೆಪಿ 312 ಸೀಟುಗಳ ಗೆಲುವಿನ ವಿಕ್ರಮ ಸಾಧಿಸಿದೆ. ರಾಮಜನ್ಮಭೂಮಿ ಆಂದೋಲನದ ಫಲವಾಗಿ 1991ರಲ್ಲಿ 221 ಸೀಟುಗಳನ್ನು ಗಳಿಸಿದ್ದೇ ಉತ್ತರಪ್ರದೇಶದಲ್ಲಿ ಈವರೆಗೆ ಬಿಜೆಪಿ ಗಳಿಸಿದ್ದ ದೊಡ್ಡ ಗೆಲುವು. ಆನಂತರದ ಇಲ್ಲಿಯವರೆಗಿನ ಪಯಣ ಇಳಿಜಾರಿನ ಹಾದಿಯದು. 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಹಾಗೂ 2012ರಲ್ಲಿ 47. ಇದೀಗ ಮೋದಿ ನೇತೃತ್ವದಲ್ಲಿ ದಿಗ್ವಿಜಯ ಕಂಡಿದೆ.

**

ಅಮೇಠಿ: ಕಾಂಗ್ರೆಸ್‌  ಸೋಲು

ಅಮೇಠಿ: ನೆಹರೂ–ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಅಮೇಠಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನೆಲಕ್ಕಚ್ಚಿದೆ. ಮೂರು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಎಸ್‌ಪಿಯ ಶಾಸಕ ರಾಕೇಶ್ ಪ್ರತಾಪ್‌ ಅವರು ಅಮೇಠಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

**

ಮತ್ತೆ ರಾಮ ಮಂದಿರ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಜಯ ಸಿಕ್ಕಿರುವುದು ರಾಮ ಮಂದಿರ ನಿರ್ಮಾಣದ ಕುರಿತ ಚರ್ಚೆಯನ್ನು ಮತ್ತೆ ಮುಂಚೂಣಿಗೆ ತಂದಿದೆ. ‘ರಾಮ ಮಂದಿರ ವಿಚಾರ ಈಗಾಗಲೇ ಪಕ್ಷದ ಕಾರ್ಯಸೂಚಿಯಲ್ಲಿ ಇದೆ.  ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಲು  ಬದ್ಧರಾಗಿದ್ದೇವೆ.  ಮಂದಿರ ನಿರ್ಮಾಣ ಸೇರಿದಂತೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

**

ಬಿಜೆಪಿ ತೆಕ್ಕೆಗೆ ದಾದ್ರಿ
ಗ್ರೇಟರ್‌ ನೊಯಿಡಾ:
 2015ರಲ್ಲಿ ಕೋಮುದಳ್ಳುರಿಗೆ ತುತ್ತಾಗಿದ್ದ ದಾದ್ರಿ ಮತ್ತು ಜೇವಾರ್‌ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿಎಸ್‌ಪಿ ಹುರಿಯಾಳುಗಳನ್ನು ಸೋಲಿಸಿದ್ದಾರೆ.

ಗೆಲುವಿನ ನಗೆ ಬೀರಿದ ಆರೋಪಿಗಳು
ಲಖನೌ:
ಮುಜಫ್ಫರ್‌ ನಗರ ಕೋಮುಗಲಭೆ ಪ್ರಕರಣದ ಆರೋಪಿಗಳಾದ, ಬಿಜೆಪಿಯ  ಸಂಗೀತ್‌ ಸೋಮ್‌ ಮತ್ತು ಸುರೇಶ್‌ ರಾಣಾ ಅವರು ಸರ್ಧಾನಾ ಮತ್ತು ಠಾಣಾ ಭವನ್‌ ಕ್ಷೇತ್ರಗಳಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

**

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದು ಎಎಪಿ ಈಗಲೂ ಭಾವಿಸುವುದು, ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಜಯಗಳಿಸಬಹುದು ಎಂದು ಪಾಕಿಸ್ತಾನ ಅಂದುಕೊಂಡಂತೆ ಆದೀತು!
@ImmortalizeBoi

ಸೈಕಲ್ ಸವಾರಿಗೆ ಬ್ರೇಕ್‌ ಹಾಕುವುದು ಹಸ್ತ ಎಂಬುದು ಮತ್ತೆ ಸಾಬೀತಾಗಿದೆ!
@SirJadeja

ಜನ ಬ್ಯಾಂಕ್‌ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರೂ, ಅವರು ಸರತಿಯಲ್ಲಿ ನಿಂತು ನಿಮಗೆ ಮತ ಚಲಾಯಿಸಿದ್ದಾರೆ ಎಂದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿದ್ದೀರಿ ಎನ್ನಬಹುದು!
@VirenderSehweg

ಬಿಜೆಪಿ ಕಾರ್ಯಕರ್ತನಾಗಿರುವ ನನಗೆ ಈಗ ತಲೆಬಿಸಿ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಅವರ ನಾಯಕತ್ವ ಪ್ರಶ್ನಿಸಿ, ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಇಳಿಸಿದರೆ ಏನು ಮಾಡುವುದು?!
@jineesh_blr

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT