ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಪ್ಪು, ಕೋಳಿ ತ್ಯಾಜ್ಯಕ್ಕೆ ಪ್ರತ್ಯೇಕ ಟೆಂಡರ್‌

Last Updated 13 ಮಾರ್ಚ್ 2017, 6:21 IST
ಅಕ್ಷರ ಗಾತ್ರ

ಮಂಗಳೂರು:  ತ್ಯಾಜ್ಯ ವಿಲೇವಾರಿಯ ಹೊಣೆ ಹೊತ್ತಿರುವ ಆ್ಯಂಟನಿ ವೇಸ್ಟ್‌ ಕಂಪೆನಿ ಮತ್ತು ಮಹಾನಗರ ಪಾಲಿಕೆ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಅಲ್ಪ ಪ್ರಮಾಣದ ಹಿನ್ನಡೆ ಆಗುತ್ತಿದೆ. ತ್ಯಾಜ್ಯ ಗಳ ವಿಲೇವಾರಿ ಸಮರ್ಪಕವಾಗಿ ಆಗದೇ ಇರುವುದರಿಂದ ನಗರದ ರಸ್ತೆಗಳಲ್ಲಿ ಇನ್ನೂ ಕಸದ ರಾಶಿ ರಾರಾಜಿಸುತ್ತಲೇ ಇದೆ. ಸ್ಮಾರ್ಟ್‌ ಸಿಟಿ ಯೋಜನೆಗೆ ಭಾಜನ ವಾಗಿರುವ ಮಂಗಳೂರು ಮಹಾನಗ ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಪಾಲಿಕೆ, ಇದೀಗ ತ್ಯಾಜ್ಯ ವಿಲೇವಾರಿಗೆ ಹೊಸ ಯೋಜನೆಯೊಂದಿಗೆ ಹಮ್ಮಿ ಕೊಂಡಿದೆ.

ಮಂಗಳೂರು ನಗರದ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಆ್ಯಂಟನಿ ವೇಸ್ಟ್‌ ಕಂಪೆನಿಗೆ ವಹಿಸಲಾಗಿದೆ. ಎರಡು ವರ್ಷ ಕಳೆಯುವಷ್ಟರಲ್ಲಿಯೇ ಕಂಪೆನಿಯ ಧೋರಣೆಗಳು, ಪಾಲಿಕೆಯ ಆಡಳಿತಕ್ಕೆ ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಆರೋ ಪಗಳು ಕೇಳಿ ಬರುತ್ತಿವೆ. ಒಪ್ಪಂದದಂತೆ ಆ್ಯಂಟನಿ ವೇಸ್ಟ್‌ ಕಂಪೆನಿ ನಡೆಯುತ್ತಿಲ್ಲ ಎನ್ನುವ ಆರೋಪ ಪಾಲಿಕೆ ಆಡಳಿತ ದ್ದಾದರೆ, ಸಮರ್ಪಕವಾಗಿ ಹಣ ಬಿಡು ಗಡೆ ಮಾಡುತ್ತಿಲ್ಲ ಎನ್ನುವ ದೂರು ಕಂಪೆ ನಿಯದ್ದಾಗಿದೆ. ಇದೆಲ್ಲದರ ಮಧ್ಯೆ ನಗ ರದ ಜನರಿಗೆ ಕಸದಿಂದ ಮುಕ್ತಿ ದೊರೆಯದಂತಾಗಿದೆ.

ಪಾಲಿಕೆಯಿಂದಲೇ ತ್ಯಾಜ್ಯ ವಿಲೇ ವಾರಿ ಮಾಡುವುದು ಸಾಧ್ಯವಿಲ್ಲ. ಹಾಗಾ ಗಿ ಸದ್ಯಕ್ಕಿರುವ ಒಪ್ಪಂದದಂತೆಯೇ ಆ್ಯಂ ಟನಿ ವೇಸ್ಟ್‌ ಕಂಪೆನಿಯಿಂದ ತ್ಯಾಜ್ಯ ವಿಲೇ ವಾರಿ ಮಾಡಬೇಕಾಗಿದೆ. ಆದರೆ, ಹೆಚ್ಚು ವರಿ ಕಸದ ನಿರ್ವಹಣೆಗಾಗಿ ಪಾಲಿಕೆ ಪ್ರತ್ಯೇಕ ಟೆಂಡರ್‌ ಕರೆಯಲು ಮುಂದಾ ಗಿದೆ. ಕೋಳಿ ತ್ಯಾಜ್ಯ ಹಾಗೂ ಎಳೆನೀರು ಚಿಪ್ಪುಗಳ ವಿಲೇವಾರಿಗೆ ಪ್ರತ್ಯೇಕ ಟೆಂ ಡರ್‌ ಕರೆಯುವ ಪ್ರಕ್ರಿಯೆಯನ್ನು ಪಾಲಿಕೆ ಈಗಾಗಲೇ ಆರಂಭಿಸಿದೆ.

‘ಆ್ಯಂಟನಿ ವೇಸ್ಟ್‌ ಕಂಪೆನಿಯು ನಿತ್ಯ 200 ಟನ್‌ ಕಸ ವಿಲೇವಾರಿ ಮಾಡಬೇಕು ಎನ್ನುವುದು ಒಪ್ಪಂದದ ಕರಾರು. ಆದರೆ, ಕಂಪೆನಿಯು ನಿತ್ಯ 300 ಟನ್‌ ತ್ಯಾಜ್ಯ ವಿಲೇವಾರಿಯ ಬಿಲ್‌ ನೀಡುತ್ತಿದೆ. ಇದರಿಂದ ಕಂಪೆನಿಗೆ ಪಾವತಿಸಬೇಕಾದ ಹಣದಲ್ಲಿ ವ್ಯತ್ಯಾಸ ಆಗುತ್ತಿದೆ. ಒಪ್ಪಂದದ ಪ್ರಕಾರ 200 ಟನ್‌ಗೆ ಮಾತ್ರ ಬಿಲ್‌ ಪಾವ ತಿಸಲು ಸಾಧ್ಯ. ಆದರೆ, ಕಂಪೆನಿಯಿಂದ ಹೆಚ್ಚುವರಿ ಬಿಲ್‌ ಕಳುಹಿಸಲಾಗಿದೆ. ಈ ಕುರಿತು ಪರಿಶೀಲಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಹೆಚ್ಚುವರಿ ಬಿಲ್‌ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿರ್ಧಾರ ಪ್ರಕಟವಾಗಬೇಕಾಗಿದೆ’ ಎನ್ನು ವುದು ಪಾಲಿಕೆ ಅಧಿಕಾರಿಗಳು ನೀಡುವ ಸಮಜಾಯಿಷಿ.

ಆ್ಯಂಟನಿ ವೇಸ್ಟ್‌ ಕಂಪೆನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ವೂ ಬಹುತೇಕ ಪಾಲಿಕೆ ಸದಸ್ಯರದ್ದಾ ಗಿದೆ. ಹೀಗಾಗಿ ಆ್ಯಂಟನಿ ವೇಸ್ಟ್‌ ಕಂಪೆನಿ, ಒಪ್ಪಂದಕ್ಕೆ ಅನುಗುಣವಾಗಿ 200 ಟನ್‌ ಮಾತ್ರ ಕಸದ ವಿಲೇವಾರಿ ಮಾಡಬೇಕು. ಹೆಚ್ಚುವರಿ ಕಸದ ವಿಲೇವಾರಿಗೆ ಪ್ರತ್ಯೇಕ ಟೆಂಡರ್‌ ಕರೆಯಲು ಪಾಲಿಕೆ ಆಡಳಿತ ನಿರ್ಧರಿಸಿದೆ.

‘ಪ್ರಮುಖವಾಗಿ ಕೋಳಿತ್ಯಾಜ್ಯ ಮತ್ತು ಎಳೆನೀರು ಚಿಪ್ಪುಗಳ ವಿಲೇವಾರಿಯೇ ಪ್ರಮುಖ ಸಮಸ್ಯೆ ಆಗುತ್ತಿದ್ದು, ಇದಕ್ಕಾ ಗಿಯೇ ಪ್ರತ್ಯೇಕ ಟೆಂಡರ್‌ ಕರೆಯಲಾಗು ವುದು’ ಎಂದು ಆಯುಕ್ತ ಎಂ. ಮುಹ ಮ್ಮದ್‌ ನಜೀರ್‌ ಹೇಳುತ್ತಾರೆ.

ಕಾರ್ಮಿಕರಿಗೆ ನೇರ ವೇತನ: ಇನ್ನೊಂದೆಡೆ ಆ್ಯಂಟನಿ ವೇಸ್ಟ್‌ ಕಂಪೆ ನಿಯ ಪೌರ ಕಾರ್ಮಿಕರು ಸಮರ್ಪಕ ವೇತನ ಪಾವತಿಗಾಗಿ ಇತ್ತೀಚೆಗಷ್ಟೇ ಪ್ರತಿ ಭಟನೆ ನಡೆಸಿದ್ದು, ಒಂದು ದಿನ ಕಸವೆಲ್ಲ ರಸ್ತೆಯ ಪಕ್ಕದಲ್ಲಿ ಉಳಿಯುವಂತಾಗಿತ್ತು.

ಇದಕ್ಕೂ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಪಾಲಿಕೆ, ಆ್ಯಂಟನಿ ವೇಸ್ಟ್‌ ಕಂಪೆನಿಯ ಪೌರ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಪಾಲಿಕೆಯಿಂದಲೇ ನೇರವಾಗಿ ವೇತನ ಪಾವತಿಸಲು ನಿರ್ಧ ರಿಸಿದೆ. ‘ಆ್ಯಂಟನಿ ವೇಸ್ಟ್‌ ಕಂಪೆನಿಯಲ್ಲಿ ಒಟ್ಟು 900 ಜನ ಕಾರ್ಮಿಕರಿದ್ದು, ಆ ಪೈಕಿ 631 ಜನರು ಪೌರ ಕಾರ್ಮಿಕ ರಾಗಿದ್ದಾರೆ. ಪಾಲಿಕೆಯಲ್ಲಿ 200 ಕಾರ್ಮಿ ಕರಿದ್ದು, 12 ವಾರ್ಡ್‌ಗಳ ಸ್ವಚ್ಛತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಪಾಲಿಕೆಯ ಪೌರ ಕಾರ್ಮಿಕರಿಗೆ ಈಗಾಗಲೇ ನೇರವಾಗಿ ವೇತನ ಪಾವತಿಸುತ್ತಿದ್ದು, ಇದೇ ಮಾದರಿ ಯಲ್ಲಿ ಏಪ್ರಿಲ್‌ 1 ರಿಂದಲೇ ಆ್ಯಂಟನಿ ವೇಸ್ಟ್‌ನ ಪೌರ ಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿಸಲಾಗು ವುದು’ ಎಂದು ಆಯುಕ್ತ ಮುಹಮ್ಮದ್‌ ನಜೀರ್‌ ಸ್ಪಷ್ಟಪಡಿಸಿದ್ದಾರೆ.

ಸ್ವಚ್ಛ ಮಂಗಳೂರು ನಮ್ಮ ಕನಸು. ಹಾಗಾಗಿ ಸ್ವಚ್ಛತೆ ಕಾಪಾಡುವುದಕ್ಕೆ ಅಗತ್ಯ ವಿರುವ ಕ್ರಮಗಳನ್ನು ಕೈಗೊಳ್ಳಲಾಗು ವುದು. ಈಗಾಗಲೇ ಪ್ರತ್ಯೇಕ ಟೆಂಡರ್‌ ಹಾಗೂ ನೇರವಾಗಿ ವೇತನ ಪಾವತಿ ಕುರಿತು ನಿರ್ಧರಿಸಲಾಗಿದೆ ಎಂದು ಅವರು ಹೇಳುತ್ತಾರೆ.

ಪೌರ ಕಾರ್ಮಿಕರಿಗೆ ನೇರವಾಗಿ ಪಾಲಿಕೆಯಿಂದಲೇ ವೇತನ ಪಾವತಿಸಲು, ಬ್ಯಾಂಕ್‌, ಸರ್ಕಾರ ಮತ್ತು ಕಂಪೆನಿಗಳ ಮಧ್ಯೆ ತ್ರಿಮುಖ ಒಪ್ಪಂದ ಮಾಡಿಕೊಳ್ಳಲಾಗುವುದು
-ಎಂ. ಮುಹಮ್ಮದ್‌ ನಜೀರ್‌, ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT