ಬೆಂಗಳೂರು:
ಸರಕು ಮತ್ತು ಸೇವಾ ತೆರಿಗೆ

* ಸರಕು ಮತ್ತು ಸೇವಾ ತೆರಿಗೆಯನ್ನು 01ನೇ ಜುಲೈ 2017 ರಿಂದ ದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
* ಕರ್ನಾಟಕವು ಸರಕು ಮತ್ತು ಸೇವಾ ತೆರಿಗೆಯಲ್ಲಿ ದೇಶದಲ್ಲಿಯೇ ಅತೀ ಹೆಚ್ಚಿನ ಮಟ್ಟದ ಸ್ಥಿತ್ಯಂತರದ ಪ್ರಗತಿಯನ್ನು ಸಾಧಿಸಿದೆ.
* ಸರಕು ಮತ್ತು ಸೇವಾ ತೆರಿಗೆಯ ಕುರಿತು ಅರಿವು ಮೂಡಿಸಲು ಕರದಾತರು ಹಾಗೂ ವೃತ್ತಿನಿರತರೊಂದಿಗೆ ಸಂಹವನಕ್ಕಾಗಿ 100 ಕ್ಕೂಹೆಚ್ಚು ಕಾರ್ಯಾಗಾರಗಳ ಹಾಗೂ ರೋಡ್ ಶೋಗಳ ಮೂಲಕ ಬೃಹತ್ ಪ್ರಮಾಣದ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
* ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಾಕಷ್ಟು ಸಾಮರ್ಥ್ಯ ಸಂವರ್ಧನೆಗಾಗಿ ಇಲಾಖೆಯ 3000ಕ್ಕೂ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ.

ಮೌಲ್ಯವರ್ಧಿತ ತೆರಿಗೆ
ಪರಿಹಾರಗಳು ಮತ್ತು ಸುಧಾರಣಾ ಕ್ರಮಗಳು
* ಭತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಹಾಗೂ ಅಕ್ಕಿ, ರಾಗಿರೈಸ್ (ಸಂಸ್ಕರಿಸಿದ ರಾಗಿ) ಮತ್ತು ಗೋಧಿ ಪದಾರ್ಥಗಳ ಮೇಲಿನ ತೆರಿಗೆಯ ವಿನಾಯಿತಿಗೊಳಿಸಲಾಗಿದೆ.

* ಸಿರಿಧಾನ್ಯಗಳಾದ ನವಣೆ, ಸಾಮೆ, ಆರಕ ಮತ್ತು ಬರಗು ಇವುಗಳ ಹಿಟ್ಟುಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ.
* ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿಯ ಸಿಪ್ಪೆಯ ಮೇಲಿನ ತೆರಿಗೆಯನ್ನು ವಿನಾಯಿತಿಗೊಳಿಸಲಾಗಿದೆ.

ಆಡಳಿತಾತ್ಮಕ ಕ್ರಮಗಳು
* 2003ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆಯ ಪ್ರಕರಣ 40ಕ್ಕೆ ತಿದ್ದುಪಡಿ ಮಾಡುವ ಮೂಲಕ 2012-13 ಹಾಗೂ 2013-14ರ ತೆರಿಗೆ ಅವಧಿಗಳಿಗೆ ಸಂಬಂಧಿಸಿದ ಕರನಿರ್ಧರಣೆ ಅಥವಾ ಮರುಕರ ನಿರ್ಧರಣೆಗಳನ್ನು ಅಂತಿಮಗೊಳಿಸಲು ಇದ್ದ ಕಾಲಮಿತಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

* ಪ್ರಕರಣ 40 ಕ್ಕೆ ತಿದ್ದುಪಡಿ ಮಾಡುವ ಮೂಲಕ ಕರನಿರ್ಧರಣೆ ಅಥವಾ ಮರುಕರನಿರ್ಧರಣೆಗೆ ಕಾಲಮಿತಿಯನ್ನು ಪರಿಗಣಿಸುವಾಗ ಮರುಪರಿಶೀಲನಾ ನಡಾವಳಿಗಳನ್ನು ವಿಲೇ ಮಾಡಲು ತೆಗೆದುಕೊಳ್ಳುವ ಅವಧಿಯನ್ನು ಹೊರತುಪಡಿಸಲಾಗಿದೆ.

* ಬಾಕಿ ಇರುವ ಪೂರ್ಣ ತೆರಿಗೆ ಮತ್ತು ಬಾಕಿ ಇರುವ ಬಡ್ಡಿ ಮತ್ತು ದಂಡದ ಶೇಕಡಾ 10ರಷ್ಟನ್ನು 31ನೇ ಮೇ 2017 ರ ಒಳಗೆ ಪಾವತಿಸಿದಲ್ಲಿ, ಇನ್ನುಳಿದ ಶೇಕಡಾ 90 ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅನುಕೂಲವಾಗುವಂತೆ ಕರಸಮಾಧಾನ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.