ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಪ್ರಧಾನಿ ನವಾಜ್‌ ಷರೀಫ್‌ ಎದುರು ಗಾಯತ್ರಿ ಮಂತ್ರ ಹಾಡಿದ ಯುವತಿ

Last Updated 17 ಮಾರ್ಚ್ 2017, 12:58 IST
ಅಕ್ಷರ ಗಾತ್ರ
ADVERTISEMENT

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ಸಮುದಾಯದವರು ಆಯೋಜಿಸಿದ್ದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಯುವತಿಯೊಬ್ಬರು ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಎದುರು ಗಾಯತ್ರಿ ಮಂತ್ರ ಹಾಡಿರುವ ವಿಡಿಯೊ ವೈರಲ್‌ ಆಗಿದೆ.

ನವಾಜ್‌ ಷರೀಫ್‌ ಅವರು ಹಿಂದೂಗಳ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನರೋದ ಮಾಲಿನಿ ಎಂಬ ಯುವತಿ ಪ್ರಧಾನಿಗಳ ಎದುರಿನಲ್ಲೇ ಗಾಯತ್ರಿ ಮಂತ್ರವನ್ನು ಹಾಡಿದರು. ಈ ಗಾಯನವನ್ನು ಆಲಿಸಿದ ಪ್ರಧಾನ ಮಂತ್ರಿಗಳು ಹಾಡಿನ ಕೊನೆಯಲ್ಲಿ ಕರತಡನ ಮಾಡಿದರು.

ಪ್ರಧಾನಿಗಳ ಈ ನಡೆಗೆ ಪಾಕ್‌ ಮಾಧ್ಯಮಗಳು ಮತ್ತು ಬುದ್ದಿಜೀವಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ವಿಡಿಯೊ ಭಾರತ ಮತ್ತು ಪಾಕಿಸ್ತಾನದಲ್ಲೂ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT