ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿಗಾಗಿ ಮಾಯಕೊಂಡ ಬಂದ್‌

Last Updated 18 ಮಾರ್ಚ್ 2017, 7:05 IST
ಅಕ್ಷರ ಗಾತ್ರ

ಮಾಯಕೊಂಡ: ತಾಲ್ಲೂಕು ರಚನೆಗೆ ಒತ್ತಾಯಿಸಿ ಶುಕ್ರವಾರ ‘ಮಾಯಕೊಂಡ ಬಂದ್‌’ ಆಚರಿಸಲಾಯಿತು.

ಅಂಗಡಿ ಮುಂಗಟ್ಟು ಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾ ಗಿತ್ತು. ಬಸ್ ಸಂಚಾರ ಕೆಲ ಕಾಲ ಸ್ಥಗಿತ ಗೊಂಡಿತ್ತು. ಶಾಲಾ, ಕಾಲೇಜು ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಂದ್‌ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಪ್ರತಿಭಟನಾ ಸಭೆಯಲ್ಲಿ ಮಾತ ನಾಡಿದ ಮುಖಂಡರು, ತಾಲ್ಲೂಕು ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮುಖಂಡ ಎಸ್. ನೀಲಪ್ಪ ಮಾತ ನಾಡಿ, ‘ಮಾಯಕೊಂಡ ಮತ್ತು ಸುತ್ತ ಮುತ್ತಲ ಗ್ರಾಮಗಳಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ಹಿಂದುಳಿದ ಪ್ರದೇಶವಾದ ಮಾಯಕೊಂಡವನ್ನು ತಾಲ್ಲೂಕು ಮಾಡಲು ಎಲ್ಲಾ ಜನಪ್ರತಿನಿಧಿಗಳು ಹಾಗೂ ಮುಖಂಡರು ಶ್ರಮಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ‘ತಾಲ್ಲೂಕು ಹೋರಾಟದ ಕೂಗಿಗೆ ಸರ್ಕಾರ ಸ್ಪಂದಿಸಿಲ್ಲ. ಯಾವುದೇ ಅರ್ಹತೆ ಇಲ್ಲದಿದ್ದರೂ ಕೆಲವು ತಾಲ್ಲೂಕುಗಳನ್ನು ಘೋಷಿಸಲಾ ಗಿದೆ. ಮಾಯಕೊಂಡ ಕೈಬಿಟ್ಟು ಸರ್ಕಾರ ಅಪಚಾರ ಮಾಡಿದೆ. ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಲೂ ಸಿದ್ಧ’ ಎಂದು ಗುಡುಗಿದರು.

ಬಿಜೆಪಿ ಮುಖಂಡ ಆನಂದಪ್ಪ ಮಾತನಾಡಿ, ‘ಎಲ್ಲಾ ಗ್ರಾಮಸ್ಥರು ಸಂಘಟಿತರಾಗಿ ಹೋರಾಟ ನಡೆಸಿದರೆ ಮಾತ್ರ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಸಾಧ್ಯ. ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ಮುಖಂಡ ವೆಂಕಟೇಶ್ ಮಾತ ನಾಡಿ, ‘ಎಲ್ಲರೂ ಪರಸ್ಪರ ಸಂಘಟಿತ ರಾಗಿ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗಬೇಕು’ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಒತ್ತಡ ಹೇರಬೇಕು’ ಎಂದರು.

ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರುದ್ರೇಶ್, ಜಿ.ಪಿ.ಮುಪ್ಪಣ್ಣ, ರೈತ ಸಂಘದ ಬೀರಪ್ಪ ಮಾತನಾಡಿದರು.

ಬಿಜೆಪಿ ಮುಖಂಡ ಪ್ರೊ.ಲಿಂಗಣ್ಣ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ರಾಜಶೇಖರ ಸಂಡೂರು, ಸುಲೋಚನಮ್ಮ, ಮಲ್ಲಿಕಾರ್ಜುನಪ್ಪ, ವನಜಾಕ್ಷಮ್ಮ, ಮಮತಾ, ಪರಶುರಾಮ್‌, ಬಿ.ಟಿ. ಹನುಮಂತಪ್ಪ, ಆರ್.ನಾಗರಾಜಪ್ಪ, ಹನುಮಂತಪ್ಪ, ಮುಖಂಡರಾದ ಗೋಪಾಲ್, ಕನ್ನಡ ಯುವಶಕ್ತಿ ಕೇಂದ್ರ ಅಧ್ಯಕ್ಷ ಶ್ರೀನಿವಾಸ, ಗುರುನಾಥ ಇದ್ದರು.

ಶಾಸಕರ ವಿರುದ್ಧ ಕಿಡಿ: ಗ್ರಾಮ ಪಂಚಾಯ್ತಿ ಸದಸ್ಯ ರುದ್ರೇಶ್, ಪೂಜಾರ್ ಶಶಿಧರ ಮತ್ತು ಉಮಾಶಂಕರ ಮಾತ ನಾಡಿ, ‘ಶಾಸಕರು ಮಾಯಕೊಂಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT