ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಸಂಪುಟ ಸದಸ್ಯನ ವಿರುದ್ಧ ತನಿಖೆ ನಡೆಸಿದ್ದ ಪ್ರೀತ್‌ ಬರಾರ

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಜಾಗೊಂಡಿರುವ ಭಾರತ ಮೂಲದ ಅಮೆರಿಕದ ಅಟಾರ್ನಿ ಪ್ರೀತ್‌ ಬರಾರ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಂಪುಟದ  ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಟಾಮ್‌ ಪ್ರೈಸ್‌ ವಿರುದ್ಧ  ಅವ್ಯವಹಾರ ಪ್ರಕರಣಕ್ಕೆ  ಸಂಬಂಧಿಸಿ ತನಿಖೆ ನಡೆಸುತ್ತಿದ್ದರು  ಎಂದು  ಮಾಧ್ಯಮ ಸಂಸ್ಥೆಯೊಂದು ಬಹಿರಂಗ ಮಾಡಿದೆ.

‘ಸಂಸದರಾಗಿದ್ದ ವೇಳೆ ಟಾಮ್‌ ಅವರು ಆರೋಗ್ಯ ಷೇರುಗಳನ್ನು  ಸರಿಯಾದ ರೀತಿಯಲ್ಲಿ ಮಾರಾಟ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು,  ಈ ಕುರಿತು ಬರಾರ ತನಿಖೆ ನಡೆಸಿದ್ದರು’ ಎಂದು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ತನಿಖಾ ವರದಿಗಳನ್ನು ಪ್ರಕಟಿಸುವುದರಲ್ಲಿ ಪ್ರಸಿದ್ಧವಾಗಿರುವ ಪ್ರೊಪಬ್ಲಿಕಾ  ವರದಿ ಮಾಡಿದೆ. ಒಬಾಮ ಕೇರ್‌ ಆರೋಗ್ಯ ಸೇವೆರದ್ದು ಮಾಡುವಲ್ಲಿ ಟಾಮ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರೊಪಬ್ಲಿಕಾ ಪ್ರಕಟಿಸಿರುವ ವರದಿಗೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT