ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್ ವರದಿ ವಿರುದ್ಧ ಹೋರಾಟ

‘ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’ ಸಮ್ಮೇಳನದಲ್ಲಿ ಕಲ್ಕುಳಿ ವಿಠಲ ಹೆಗಡೆ
Last Updated 20 ಮಾರ್ಚ್ 2017, 6:11 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಕಸ್ತೂರಿರಂಗನ್ ವರದಿ ವಿರುದ್ಧ ಮಲೆನಾಡಿನ ಜನರು ಗಟ್ಟಿ ದನಿಯಲ್ಲಿ ಹೋರಾಡಬೇಕಿದೆ’ ಎಂದು ಪರಿಸರ ತಜ್ಞ ಕಲ್ಕುಳಿ ವಿಠಲ ಹೆಗಡೆ ಹೇಳಿದರು.

ನಗರದ ಚೈತನ್ಯ ಸಮಾಜ ಸೇವೆ ಮತ್ತು ತರಬೇತಿ ಕೇಂದ್ರದಲ್ಲಿ ಭಾನುವಾರ ‘ಅಂಬೇಡ್ಕರ್‌ ಜ್ಞಾನ ದರ್ಶನ ಅಭಿಯಾನ’ ಅಂತರರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಲೆನಾಡ ರೈತರ ಬದುಕು ಇಂದು ಹುಲಿಯ ಬಾಯಲ್ಲಿ ಜೀವನ ನಡೆಸುವಂತಿದೆ. ಒಕ್ಕಲೆಬ್ಬಿಸುವ ಭೀತಿಯಲ್ಲಿ ಅವರಿದ್ದಾರೆ. ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಸರ್ಕಾರ ಅಲೆಮಾರಿಗಳು, ಗಿರಿಜನರನ್ನು ಒಕ್ಕಲೆಬ್ಬಿಸಿತ್ತು. ಇದೀಗ ಸರ್ಕಾರ ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಳಿಸಲು ಅಲ್ಲಿರುವ ಜನರನ್ನು ಸರ್ಕಾರ ಒಕ್ಕಲೆಬ್ಬಿಸಲು ಹೊರಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅರಣ್ಯ ಇಲಾಖೆ ಅಧಿಕಾರಿಗಳು ಪರಿಸರ ಹಾಗೂ ಕಾಡನ್ನು ಉಳಿಸಿದ ಉದಾಹರಣೆಯೇ ಇಲ್ಲ. ಅರಣ್ಯದಲ್ಲಿ ಇರುವ ಜೀವ ಜಗತ್ತು ಅಳಿವಿನಂಚಿ
ನಲ್ಲಿದೆ ಎಂದು ಕಸ್ತೂರಿರಂಗನ್‌ ವರದಿಯಲ್ಲಿದೆ. ಇಲ್ಲಿನ ಗಿರಿಜನರು, ಆದಿವಾಸಿಗಳು ಅಳಿವಿನಂಚಿನಲ್ಲಿದ್ದಾರೆ. ಇವರನ್ನು ರಕ್ಷಿಸಬೇಕಿದೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಭಾಗದ ಜನತೆಗೆ ನೀರು ನೀಡುವ ಸಲುವಾಗಿ 11 ಕಿ.ಮೀ. ಮಾರ್ಗದಲ್ಲಿ ಸುಮಾರು 23 ಸಾವಿರ ಮರ ಕಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಇದರ ಬದಲಿಗೆ ಆರು ಕಿ.ಮೀ.ನಷ್ಟು ಸಮೀಪದ ಇನ್ನೊಂದು ಮಾರ್ಗದ ಮೂಲಕ ಯೋಜನೆ ರೂಪಿಸಿ
ದರೆ, ಮರಗಳ ಮಾರಣಹೋಮ ತಪ್ಪುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕ ಪ್ರೊ.ಮೇಟಿ ಮಲ್ಲಿಕಾರ್ಜುನ್ ಮಾತನಾಡಿ, ‘ಈಚೆಗೆ ಮಲೆನಾಡು ಬಂಡವಾಳಶಾಹಿಗಳ ಕೇಂದ್ರವಾಗಿದೆ. ಮಳೆಕಾಡಿನ ಜೈವಿಕ ನೀತಿಗೆ ವಿರುದ್ಧವಾಗಿ ಆರ್ಥಿಕ ಶಕ್ತಿಗಳು ಪ್ರಹಾರ ನಡೆಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ‘ಹಿಂದುಳಿದ ಸಮುದಾಯ ದವರು ಶಿಕ್ಷಿತರಾಗಬೇಕು. ನಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯಲು ಆಗ ಮಾತ್ರ ಸಾಧ್ಯ.

ರಾಜಕೀಯ ಹಿತಾಸಕ್ತಿಗೆ ಅಂಬೇಡ್ಕರ್‌ ಅವರನ್ನು ಬಳಸಿಕೊಳ್ಳಲಾಗುತ್ತಿದೆಯೇ ವಿನಾ ಅವರ ತತ್ವಗಳನ್ನು ರಾಜಕೀಯದಲ್ಲಿ ಅನುಸರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಚಿಕ್ಕಮಗಳೂರು ಸಂಚಾಲಕ ಗೌಸ್ ಮೊಹಿದ್ದೀನ್, ಲವ, ಚಿಕ್ಕಮಗಳೂರು ಸಿಪಿಐ ಮುಖಂಡ ಬಿ.ಅಮ್ಜದ್, ಹೇಮಂತ್, ಮಂಜುಳಾ, ಶಿವಬಸಪ್ಪ, ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಕೆ.ಟಿ.ಗಂಧಾಗರ್, ರಾಧಾ ಸುಂದರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT