ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ತೆರೆಯಲು 15 ದಿನದ ಗಡುವು

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಿರ್ಣಯ
Last Updated 22 ಮಾರ್ಚ್ 2017, 6:42 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 15 ದಿನಗ ಳಲ್ಲಿ ಗೋ ಶಾಲೆಗಳನ್ನು ತೆರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಜಿಲ್ಲಾ ಪಂಚಾಯಿತಿ ಸದಸ್ಯರು ಒಮ್ಮತದ ನಿರ್ಣಯ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲ ತೇಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಜಿಲ್ಲೆ ತೀವ್ರ ಬರ ಎದುರಿಸುತ್ತಿದೆ. ಜಾನುವಾ ರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಅಭಾವ ಉಂಟಾಗಿದೆ. ಇದುವ ರೆಗೂ ಗೋಶಾಲೆಗಳನ್ನು ಜಿಲ್ಲೆಯಲ್ಲಿ ತೆರೆದಿಲ್ಲ. ಪಕ್ಕದ ಹಾಸನ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗೋಶಾಲೆ ಗಳನ್ನು ತೆರೆಯಲಾಗಿದೆ. ಚಿಕ್ಕಮಗಳೂ ರಿನಲ್ಲಿ ಏಕೆ ಇದು ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದರು.

‘ಈಗಾಗಲೇ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ತೆರೆದಿದ್ದ ಗೋಶಾಲೆ ಗಳಲ್ಲಿ ಪಶುಗಳಿಗೆ ಕಾಲುಬಾಯಿ ರೋಗ ಕಂಡುಬಂದಿದೆ. ಕಡೂರು ಗಡಿಭಾಗದ ಬಾಣಾವರದಲ್ಲಿಯೂ ಈ ರೋಗದ ಲಕ್ಷಣ ಕಂಡುಬಂದಿದೆ. ಗೋವುಗಳನ್ನು ಒಂದೇ ಜಾಗದಲ್ಲಿ ಸೇರಿಸುವುದರಿಂದ ಕಾಲುಬಾಯಿ ರೋಗದ ವೈರಸ್‌ ಹರಡುವ ಸಂಭವ ಇದೆ. ಇದರಿಂದ ಗೋಶಾಲೆಗಳನ್ನು ತೆರೆದಿಲ್ಲ’ ಎಂದು ಪಶು ಸಂಗೋಪನಾ ಇಲಾಖೆಯ ಅಧಿ ಕಾರಿಗಳು ಸಮಜಾಯಿಷಿ ನೀಡಿದರು.

ಕಾಂಗ್ರೆಸ್‌ ಸದಸ್ಯ ಮಹೇಶ್ ಒಡೆ ಯರ್ ಮಾತನಾಡಿ,  ಕಂದಾಯ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಗೋಶಾಲೆ ತೆರೆಯುತ್ತಿಲ್ಲವೆಂದು ಅಸಮಾ ಧಾನ ವ್ಯಕ್ತಪಡಿಸಿದರು.

15 ದಿನಗಳಲ್ಲಿ ಗೋಶಾಲೆ ತೆರೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಪಂಚಾಯಿತಿಯ ಎಲ್ಲ ಸದಸ್ಯರು ಧರಣಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಮಾತನಾಡಿ, ಎನ್.ಆರ್. ಪುರದ ಸುತ್ತಮುತ್ತಲ ಭಾಗದಲ್ಲಿನ ಕೆರೆ ಗಳು ಬತ್ತಿಹೋಗಿವೆ. ಕಾಡುಪ್ರಾಣಿ-ಪಕ್ಷಿ ಗಳಿಗೆ ಕುಡಿಯುಲು ನೀರಿಲ್ಲದೆ ಗ್ರಾಮ ಗಳತ್ತ ಬಂದು, ನಾಯಿಗಳ ಬಾಯಿಗೆ ಆಹಾರವಾಗುತ್ತಿವೆ. ಅರಣ್ಯ ಇಲಾಖೆಗೆ ಕಾಡು ಪ್ರಾಣಿಗಳಿಗೆ ನೀರು ಒದಗಿಸುವ ಬಗ್ಗೆ ಇಲಾಖೆಗೆ ಚುರುಕುಮುಟ್ಟಿಸಬೇಕು ಎಂದು ಸಭೆ ಗಮನ ಸೆಳೆದರು.

ಮೆಸ್ಕಾಂಗೆ ತರಾಟೆ: ಸಾರ್ವಜನಿಕ ಬಳಕೆಗೆ ವಿದ್ಯುತ್ ಪರಿವರ್ತಕ ನೀಡಲು ಹಿಂದೇಟು ಹಾಕು ತ್ತೀರಿ, ಖಾಸಗಿಯ ವರು ಹಣ ನೀಡಿದರೆ ಮರುದಿನವೇ ವಿದ್ಯುತ್‌ ಪರಿವರ್ತಕ ಅವರಿಗೆ ಸಿಕ್ಕಿಬಿ ಡುತ್ತದೆ. ಸಾರ್ವಜನಿಕ ಅಗತ್ಯಕ್ಕೆ ಯಾಕೆ ಅಷ್ಟು ಬೇಗ ಸಿಗು ವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಸದಸ್ಯೆ ಚಂದ್ರಮ್ಮ ಮಾತನಾಡಿ ಕುಡಿ ಯುವ ನೀರಿಗೆ ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್‌ ಅನುದಾನ ದುರುಪ ಯೋಗವಾಗುತ್ತಿದೆ ಎಂದರು. ವಿಶ್ವಮಹಿಳಾ ದಿನಾಚರಣೆಗೆ ಜಿಲ್ಲಾ ಪಂಚಾಯಿತಿ ಮಹಿಳಾ ಸದಸ್ಯರಿಗೆ ಆಹ್ವಾನ ನೀಡದೆ ಕಡೆಗಣಿಸಲಾಗಿದೆ ಎಂದು ಸದಸ್ಯೆ ಕವಿತಾ ಲಿಂಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಮಹಿಳಾ ಸದಸ್ಯರು ಎದ್ದುನಿಂತು ಸಹಮತ ವ್ಯಕ್ತಪಡಿಸಿದರು.

ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ಸಭೆಯ ಕ್ಷಮೆಯಾ ಚಿಸಿದರು. ಸಭೆಗೂ ಮೊದಲು ಬಸವಶ್ರೀ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಸೋಮಶೇಖರ್, ಶೃಂ ಗೇರಿ ಶಿವಶಂಕರ್‌, ಪ್ರಭಾಕರ್‌ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆರ್‌.ರಾಗಪ್ರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT