ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಪಾಲಿಸಲು ಕಟ್ಟುನಿಟ್ಟಿನ ಸೂಚನೆ

ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ–ಎಸ್‌ಐ ಮಂಜುನಾಥ್‌ ಎಚ್ಚರಿಕೆ
Last Updated 22 ಮಾರ್ಚ್ 2017, 9:43 IST
ಅಕ್ಷರ ಗಾತ್ರ

ಮಾಗಡಿ: ಅವಸರವೇ ಅಪಘಾತಕ್ಕೆ ಕಾರಣ ಎಂಬುದನ್ನು ವಾಹನ ಚಾಲಕರು ಗಮನಿಸಬೇಕು. ಮಾಗಡಿ–ಬೆಂಗಳೂರು ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌.ಡಿ.ಆರ್‌. ತಿಳಿಸಿದರು.

ಮಾಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹೊಸಪೇಟೆ ಸರ್ಕಾರಿ ಶಾಲೆಯ ಬಳಿ ಬಿ.ಕೆ.ರಸ್ತೆಯಲ್ಲಿ ಶಾಲಾ ವಲಯ ಸೂಚನಾ ಫಲಕ ಅಳವಡಿಸಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ.  ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಯಲ್ಲಿದೆ. ಅಪರಾಧದ ಕೃತ್ಯಗಳು ಕಂಡುಬಂದಲ್ಲಿ ತಕ್ಷಣ ಠಾಣೆಗೆ ತಿಳಿಸಬಹುದು. ಅವರ ಹೆಸರನ್ನು ಬಹಿರಂಗ ಪಡಿಸು ವುದಿಲ್ಲ ಎಂದು ಅವರು ಹೇಳಿದರು.

‘ಹೊಸಪೇಟೆ ವೃತ್ತದಲ್ಲಿ ನಾಲ್ಕು ರಸ್ತೆಗಳಲ್ಲೂ ರಸ್ತೆ ಉಬ್ಬು ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ. ಹೊಸಪೇಟೆ ರಸ್ತೆಯ ಬಳಿ ಬೇಕರಿ, ಅಂಗಡಿಗಳ ಮುಂದೆ ವಾಹನ ನಿಲ್ಲಿಸಬಾರದು, ರಸ್ತೆ ಬದಿ ತರಕಾರಿ ಮಾರುವವರು ರಸ್ತೆಯಿಂದ 5 ಅಡಿ ದೂರದಲ್ಲಿ ಕುಳಿತುಕೊಳ್ಳಬೇಕು.

ವಾಹನಗಳ ಸಂಚಾರಕ್ಕೆ ತೊಂದರೆಯಾದರೆ ತರಕಾರಿ ಮಾರುವವರು ಮತ್ತು ರಸ್ತೆ ಬದಿಯ ಬೇಕರಿ ಅಂಗಡಿ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು’ ಎಂದರು.

ತಿರುಮಲೆ ಮಹಾದ್ವಾರ, ರಂಗನಾಥ ಪುರದ ತಿರುವಿನಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ ಪಿಎಸ್‌ಐ, ಕಲ್ಯಾಬಾಗಿಲು ನಾರಸಿಂಹ ವೃತ್ತದಲ್ಲಿ ಆಟೊಗಳನ್ನು ನಿಲ್ಲಿಸಲು ಕಬ್ಬಿಣದ ಪೈಪ್‌ ಅಳವಡಿಸಿದರು.

ಆಟೊ ಚಾಲಕರು ಕಡ್ಡಾಯವಾಗಿ ಕಬ್ಬಿಣದ ಪೈಪ್‌ನಿಂದ ಆಚೆ ವಾಹನ ಸಾಲಾಗಿ ನಿಲ್ಲಿಸಬೇಕು. ಚಾಲಕರು ಸಮವಸ್ತ್ರ ಧರಿಸಿರಬೇಕು. ರಿಕ್ಷಾಗಳ ದಾಖಲಾತಿ ಪೊಲೀಸರು ಕೇಳಿದಾಗ ತೋರಿಸಬೇಕು ಎಂದು ಅವರು ಸೂಚಿಸಿದರು.

ಬಿ.ಕೆ.ರಸ್ತೆಯ ಸಿದ್ದಾರೂಢಾಶ್ರಮ ಮತ್ತು ಹೊಸ ಮಸೀದಿ ಮೊಹಲ್ಲಾದಲ್ಲಿ ರಸ್ತೆ ಉಬ್ಬುಗಳಿಗೆ ಬಿಳಿ ಪಟ್ಟಿಬರೆಸಿದರು. ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿ ರಾತ್ರಿ ವರೆಗೆ ಪಟ್ಟಣದ ವಿವಿಧೆಡೆಗಳಲ್ಲಿ ಸಂಚಾರ ನಿಯಮಗಳ ನಾಮಫಲಕ ಅಳವಡಿಸಿದರು. ಹೊಂಬಾಳಮ್ಮನಪೇಟೆ ಮಂಜುನಾಥ ಯುವಕರ ತಂಡದವರು ಅಳವಡಿಸಲು ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT