ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಾಗಲು ಒಪ್ಪದ ದಾಳಿಕೋರ

ಬ್ರಿಟನ್‌ ಸಂಸತ್‌ ಬಳಿ ದಾಳಿ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಲಂಡನ್‌ : ಬ್ರಿಟನ್‌ ಸಂಸತ್‌ ಬಳಿ ದಾಳಿ ನಡೆಸಿದ ವ್ಯಕ್ತಿಯು ಮುಖ್ಯ ದ್ವಾರದ ಮೂಲಕ ಸಂಸತ್ತಿನ ಆವರಣ ಪ್ರವೇಶಿಸಲು ಮುಂದಾಗಿದ್ದ ಎಂದು ಮೂಲಗಳು ತಿಳಿಸಿವೆ.
 
‘ಮಫ್ತಿಯಲ್ಲಿದ್ದ ಪೊಲೀಸರು ಶರಣಾಗುವಂತೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರತಿದಾಳಿಗೆ ಮುಂದಾದ ಆತನನ್ನು ಗುಂಡಿಟ್ಟು ಕೊಲ್ಲಲಾಗಿದೆ’ ಎಂದು ಹೇಳಿವೆ. 
 
ಪಾದಚಾರಿಗಳ ಮೇಲೆರಗಿದ ಕಾರು: ಸಂಸತ್‌ ಕಟ್ಟಡದ ಸಮೀಪದಲ್ಲಿರುವ ವೆಸ್ಟ್‌ಮಿನಿಸ್ಟರ್‌ ಸೇತುವೆ ಬಳಿ ವ್ಯಕ್ತಿಯೊಬ್ಬ ಕಾರನ್ನು ಪಾದಚಾರಿಗಳ ಮೇಲೆ ಹರಿಸಿದ್ದು, ಮಹಿಳೆಯೊಬ್ಬರು ಬಲಿಯಾಗಿ, ಹಲವರು ಗಾಯಗೊಂಡಿದ್ದಾರೆ.
 
ಇದು ಕೂಡಾ ಭಯೋತ್ಪಾದಕ ದಾಳಿಯೇ ಎಂಬುದು ಸ್ಪಷ್ಟವಾಗಿಲ್ಲ. ದಾಳಿಯಲ್ಲಿ ಒಟ್ಟು ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.
 
‘ಸಂಸತ್‌ ಕಟ್ಟಡದ ಸಮೀಪದಲ್ಲಿ ಇನ್ನಷ್ಟು ಅಹಿತಕರ ಘಟನೆಗಳು ವರದಿಯಾಗಿವೆ’ ಎಂದು ‘ಹೌಸ್‌ ಆಫ್‌ ಕಾಮನ್ಸ್‌’ ಸಭಾಧ್ಯಕ್ಷ ಡೇವಿಡ್‌ ಲಿಡಿಂಗ್ಟನ್‌ ತಿಳಿಸಿದ್ದಾರೆ.  ‘ಈ ಘಟನೆಗಳಿಗೆ ಒಂದಕ್ಕೊಂದು ಸಂಬಂಧವಿದೆಯೇ ಎಂಬುದು ತಿಳಿದುಬಂದಿಲ್ಲ. 
 
ಪೊಲೀಸರಿಂದ ಖಚಿತ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗದು’ ಎಂದಿದ್ದಾರೆ. ಪಾದಚಾರಿಗಳ ಮೇಲೆ ಕಾರು ಹರಿಸಿದ ಅದೇ ವ್ಯಕ್ತಿ ಆ ಬಳಿಕ ಪೊಲೀಸ್‌ ಅಧಿಕಾರಿ ಮೇಲೆ ದಾಳಿ ನಡೆಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ‘ವೆಸ್ಟ್‌ಮಿನಿಸ್ಟರ್‌ ಸೇತುವೆ ಸಮೀಪ ಹಲವು ಗಾಯಾಳುಗಳು ಬಿದ್ದಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
 
‘ಜನರ ಚೀರಾಟ ಕೇಳಿದಾಗ ಕಚೇರಿಯ ಕಿಟಕಿಯಿಂದ ಹೊರಗೆ ಇಣುಕಿದೆ.  ಸುಮಾರು 40 ರಿಂದ 50 ಮಂದಿ ಸೇತುವೆ ಬಳಿಯಿಂದ ಸಂಸತ್‌ ಕಚೇರಿಯತ್ತ ಓಡುತ್ತಿರುವುದನ್ನು ನೋಡಿದೆ’ ಎಂದು ‘ಪ್ರೆಸ್‌ ಅಸೋಸಿಯೇಷನ್‌’ ಸಂಪಾದಕ ಆ್ಯಂಡ್ರ್ಯೂ ವುಡ್‌ಕಾಕ್‌ ತಿಳಿಸಿದ್ದಾರೆ.
 
ಕಳೆದ ನಾಲ್ಕು ವರ್ಷಗಳಲ್ಲಿ ಲಂಡನ್‌ನಲ್ಲಿ ನಡೆದ ದೊಡ್ಡ ದಾಳಿ ಇದಾಗಿದೆ. 2013 ರಲ್ಲಿ ಆಗ್ನೇಯ ಲಂಡನ್‌ನ ಬೀದಿಯಲ್ಲಿ ಇಬ್ಬರು ದಾಳಿಕೋರರು ಬ್ರಿಟನ್‌ನ ಯೋಧನನ್ನು ಇರಿದು ಸಾಯಿಸಿದ್ದರು. 
 
2005 ರಲ್ಲಿ ನಾಲ್ವರು ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 52 ಮಂದಿ ಬಲಿಯಾಗಿದ್ದರು. ಲಂಡನ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT