ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿದಾರನ ವಿರುದ್ಧ ವಂಚನೆ ಪ್ರಕರಣ

Last Updated 23 ಮಾರ್ಚ್ 2017, 5:55 IST
ಅಕ್ಷರ ಗಾತ್ರ

ಮಂಗಳೂರು: ನಗರದ ಚೇಳ್ಯಾರ್‌ ಪದವು ನಿವಾಸಿ ಪುರಂದರ ಎಂಬುವ ವರು ಪಾಸ್‌ಪೋರ್ಟ್‌ ಪಡೆಯಲು ನಕಲಿ ಅಂಕಪಟ್ಟಿ ಸೃಷ್ಟಿಸಿ, ಅರ್ಜಿಯೊಂದಿಗೆ ಸಲ್ಲಿ ಸಿದ್ದು ಈ ಕುರಿತು ಅವರ ವಿರುದ್ಧ ಮಂಗ ಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಬೆಂಗಳೂರು ಪ್ರಾದೇಶಿಕ ಪಾಸ್‌ ಪೋರ್ಟ್‌ ಕಚೇರಿಯ ಸಹಾಯಕ ಪಾಸ್‌ ಪೋರ್ಟ್‌ ಅಧಿಕಾರಿ ಅಮರಜ್ಯೋತಿ ಎಂಬುವವರು ಸಲ್ಲಿಸಿರುವ ದೂರನ್ನು ಆಧರಿಸಿ ಆರೋಪಿಯ ವಿರುದ್ಧ ಬುಧ ವಾರ ಪ್ರಥಮ ಮಾಹಿತಿ ವರದಿ (ಎಫ್‌ ಐಆರ್‌) ದಾಖಲು ಮಾಡಲಾಗಿದೆ ಎಂದು ಮಂಗಳೂರು ಉತ್ತರ ಠಾಣೆ ಪೊಲೀಸರು ತಿಳಿಸಿದ್ದಾರೆ.

2016ರ ಫೆಬ್ರುವರಿ 18ರ ಸಂಜೆ 5 ಗಂಟೆಗೆ ಪಾಸ್‌ಪೋರ್ಟ್‌ಗಾಗಿ ಪುರಂ ದರ ಅರ್ಜಿ ಸಲ್ಲಿಸಿದ್ದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲ ಯದಲ್ಲಿ ಎಸ್‌ಎಸ್‌ಲ್‌ಸಿ ಪೂರೈಸಿರು ವುದಾಗಿ ಅಂಕಪಟ್ಟಿಯೊಂದನ್ನು ಅರ್ಜಿ ಯ ಜೊತೆ ಸಲ್ಲಿಸಿದ್ದರು.

ಈ ಅಂಕಪಟ್ಟಿ ನಕಲಿ ಎಂಬುದು ಪಾಸ್‌ಪೋರ್ಟ್‌ ಅಧಿ ಕಾರಿಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಸಂಬಂಧ ನಕಲಿ ಅಂಕಪಟ್ಟಿ ತಯಾರಿಸಿ, ಸಲ್ಲಿಸಿರುವುದು ಮತ್ತು ಸುಳ್ಳು ಪ್ರಮಾಣಪತ್ರ ಸಲ್ಲಿಸಿ ವಂಚಿಸಿರುವ ಆರೋಪದ ಮೇಲೆ ಆರೋಪಿ ವಿರುದ್ಧ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT