ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೇಡಿಕೆಗೆ ಸಿಎಂ, ಪಿಎಂ ಸ್ಪಂದಿಸಲಿ

ಮಹಾದಾಯಿ ಧರಣಿ ವೇದಿಕೆ; ಹೋರಾಟಗಾರ ಚಂದ್ರಗೌಡ ಪಾಟೀಲ ಆಗ್ರಹ
Last Updated 23 ಮಾರ್ಚ್ 2017, 9:31 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿಗೆ  ಜನಪ್ರತಿ ನಿಧಿಗಳು  ಆಸಕ್ತಿ ವಹಿಸುತ್ತಿಲ್ಲ. ನಿರಂತರ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಮುಖ್ಯವಾಗಿ ಸಿಎಂ ಹಾಗೂ ಪಿಎಂ ರೈತರ ಒತ್ತಾಸೆಗೆ ಸ್ಪಂದಿಸಬೇಕೆಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 616ನೇ ದಿನ  ಬುಧವಾರ ಅವರು ಮಾತನಾಡಿದರು.

ಈ ಭಾಗದ ಶಾಸಕರು, ಸಂಸದರು  ಮಹಾದಾಯಿಗೆ ಸಕಾರಾತ್ಮಕವಾಗಿ ಸ್ಪಂದಿ ಸುತ್ತಿಲ್ಲ. ಯೋಜನೆ ಜಾರಿಗೆ ತಮ್ಮ ನಾಯಕರ ಮೇಲೆ ಒತ್ತಡ ಹೇರುವುದಾಗಿ ಹೇಳಿ ಈಗ ಮರೆತಂತೆ ಕಾಣುತ್ತಿದೆ. ಜನಪ್ರತಿನಿಧಿಗಳ ಮಾತು ಬರಿ ಭರವಸೆಯಾಗಿದೆ. ಪ್ರಧಾನಿ ಮೋದಿಯವರ ಮೇಲೆ ಎಲ್ಲ ಪ್ರಜೆಗಳು ಸಕಾರಾತ್ಮಕ ಭಾವನೆ ಹೊಂದಿ ಪ್ರಗತಿಯ ಆಶಯ ಹೊಂದಿದ್ದರು. ರೈತರು ಕನಸು ಕಂಡಿ ದ್ದರು. ಆದರೆ ಅವರ ಮೇಲಿಟ್ಟ ಭರವಸೆ ಹುಸಿಯಾಗುತ್ತಿದೆ.

ಕೆಲವು ಯೋಜನೆ ಗಳು ಹೆಸರಿಗೆ ಮಾತ್ರ ಆದಂತಾಗಿವೆ. ಆದ್ದರಿಂದ ನಮ್ಮ  ನೀರು ನಮಗೆ ಸಿಗು ತ್ತಿಲ್ಲ. ಈ ಯೋಜನೆಗೆ ಕೆಲವು ಜನಪ್ರತಿ ನಿಧಿಗಳು ಹಗಲುಗಳ್ಳರಂತೆ ವರ್ತಿಸುತ್ತಿ ದ್ದಾರೆ. ಅವರು ಮಹಾದಾಯಿ ನೀರು ತರದೇ ಹೋದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಚಲುವಣ್ಣವರ ಪಾಟೀಲ ಎಚ್ಚರಿಸಿದರು.

ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತ ನಾಡಿ, ನ್ಯಾಯಮಂಡಳಿ ಸೂಚನೆಯನ್ನು ಮೂರು  ರಾಜ್ಯದ ಮುಖ್ಯಮಂತ್ರಿಗಳು ಪಾಲಿಸಲು ಮುಂದಾಗಬೇಕು. ದೆಹಲಿ ಯಲ್ಲಿ ಪ್ರಧಾನಿಗಳ ಮಧ್ಯಸ್ಥಿಕೆ ಸೂಕ್ತ ಎಂದು ಹೇಳಿದ್ದಾರೆ.

ಮುಖಾಮುಖಿ ಭೇಟಿ ಮಾಡಬೇಕು. ಪ್ರಧಾನಿ ದೆಹಲಿ ಯಲ್ಲಿಯೇ ಮೂರು ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ನಡೆಸಿ ತಾವೇ ಮಧ್ಯ ಪ್ರವೇಶಿಸಬೇಕು, ನ್ಯಾಯಮಂಡಳಿ ಸಲಹೆ ಪ್ರಧಾನಿ ಮೂಲಕ ಸಾಕಾರಗೊಳ್ಳಬೇಕು ಎಂದು ಹೇಳಿದರು. 

ಹೋರಾಟ ಸಮಿತಿ ಸದಸ್ಯೆ ಅನಸವ್ವ ಶಿಂಧೆ ಮಾತನಾಡಿ ರೈತರ ಸಂಕಷ್ಟ ಅರಿಯದ ಸರ್ಕಾರಗಳು ಇದ್ದು ಸತ್ತಂತೆ, ಅವುಗಳಿಗೆ ರೈತರ ಉದ್ಧಾರ ಬೇಕಿಲ್ಲ. ಮತಗಳಷ್ಟೇ ಸಾಕು. ಇವರ ಮೂಲಕ  ಕಂಡ ಕನಸು ನುಚ್ಚು ನೂರಾಗಿದೆ.ಮತ್ತೇ ಇವರಿಗೆ ಒಣಕೆ,  ಪೊರಕೆ  ಚಳವಳಿ ಬೇಕಾಗಿದೆ. ಮಹಿಳೆಯರು ಹೋರಾಟಕ್ಕೆ ಒಗ್ಗಟ್ಟಿನಿಂದ ಬೆಂಬಲಿಸಬೇಕೆಂದರು.

ಧರಣಿಯಲ್ಲಿ  ಎಸ್‌.ಬಿ.ಜೋಗಣ್ಣ ವರ, ಚಂದ್ರಗೌಡ ಪಾಟೀಲ,  ವೆಂಕಪ್ಪ ಹುಜರತ್ತಿ, ಪುಂಡಲೀಕ ಯಾದವ,  ಭೀಮಪ್ಪ ದಿವಟಗಿ,  ಚನ್ನಬಸವ್ವ ಆಯಟ್ಟಿ, ಮೈಲಾರಪ್ಪ ಬಾಗೂರು, ಗಿರಿಜವ್ವ ಕುಂಬಾರ, ಗಂಗವ್ವ ಇದ್ದರು.

ಕಪ್ಪತಗುಡ್ಡ ಹೋರಾಟ: ತಿಮ್ಮಕ್ಕ ಬೆಂಬಲ
ಸಿಂದಗಿ: ‘
ಉತ್ತರ ಕರ್ನಾಟಕದ ಸಸ್ಯಕಾಶಿ ಕಪ್ಪತಗುಡ್ಡ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಸಾಲು ಮರದ ತಿಮ್ಮಕ್ಕ ಹೇಳಿದರು.

ಬುಧವಾರ ಸಿಂದಗಿಯಲ್ಲಿ ಸುದ್ದಿಗಾ ರರ ಜತೆಗೆ ಮಾತನಾಡಿದ ಅವರು, ‘ಸರ್ಕಾರ ಕಪ್ಪತಗುಡ್ಡ ವಿಷಯವಾಗಿ ಜವಾಬ್ದಾರಿ ನಡೆ ಇಡುತ್ತಿಲ್ಲ. ಕಪ್ಪತಗುಡ್ಡ ನೈಸರ್ಗಿಕ ಸಸ್ಯ ಸಂಪತ್ತು ಹೊಂದಿದ್ದು, ಅಲ್ಲಿ ಚಿನ್ನದ ಅದಿರು ಗಣಿಗಾರಿಕೆಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ.

ಇದನ್ನು ಸಂರಕ್ಷಿಸಲು ಗದಗ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಆರೋಗ್ಯ ಸರಿಯಲ್ಲದ ಕಾರಣ ಹೋರಾ ಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ’ ಎಂದು ತಿಳಿಸಿದರು.

‘ವಿವಿಧೆಡೆ ಅರಣ್ಯಕ್ಕೆ ಬೆಂಕಿ ಬೀಳು ತ್ತಿದೆ. ಅರಣ್ಯ ಸಚಿವ ರಮಾನಾಥ ರೈ ಅವರು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಅವರು ದೂರಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹಾಕುವ ಸಂಘಟನೆಗಳು ಕಪ್ಪತಗುಡ್ಡ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT