ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಕಲಾ ತಂಡಗಳ ಮೆರುಗು

Last Updated 24 ಮಾರ್ಚ್ 2017, 9:10 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.

ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಮಹಿಳಾ ಮತ್ತು ಪುರುಷರ ಡೊಳ್ಳು ಕುಣಿತ ತಂಡಗಳು, ಹಗಲು ವೇಷಗಾರ ಕಲಾವಿದರು, ಪೂರ್ಣ ಕುಂಭ ಹೊತ್ತ ಮಹಿಳೆಯರು, ಶಾಲಾ ಮಕ್ಕಳು ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದರು.

ಸಮ್ಮೇಳನದ ಅಧ್ಯಕ್ಷ ರಂಗರಾವ್ ನಿಡಗುಂದಿ ಅವರನ್ನು ಅಲಂಕೃತ ಎತ್ತಿನಬಂಡಿಯಲ್ಲಿ ಸಮ್ಮೇಳನದ ಅಂಗಣದತ್ತ ಕರೆದೊಯ್ಯಲಾಯಿತು.

ಕಲಾ ತಂಡಗಳೇ ಮೇಳೈಸಿದ್ದ ಗ್ರಾಮದಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗಿದೆ.

ಉದ್ಘಾಟನೆ
ಕಸಾಪ ಅದ್ಯಕ್ಷ ಡಾ.ಮನು ಬಳಿಗಾರ್ ಅವರು ಸಮ್ಮೇಳನ ಉದ್ಘಾಟನೆ ನೆರವೇರಿಸಿದರು. ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಮನು ಬಳಿಗಾರ್ ಸ್ಮರಿಸಿದರು.

ಬೆಂಗಳೂರಿನಲ್ಲಿ ಕನ್ನಡ ಉಳಿಯಬಹುದೇ ಎಂಬ ಆತಂಕ ಇದೆ. ಕನ್ನಡ ಉಳಿದಿರುವುದೇ ಈ ಭಾಗದಲ್ಲಿ. ಏಕೆಂದರೆ ಇದು ತಿರುಳ್ಗನ್ನಡ ನಾಡು. ಇಂಗ್ಲಿಷ್ ವ್ಯಾಮೋಹ ಅಡುಗೆ ಮನೆವರೆಗೂ ಬಂದಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT