ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪ್ರಜೆ ಮೇಲೆ ಹಲ್ಲೆ ಪ್ರಕರಣ

ಸ್ಪಷ್ಟನೆ ನೀಡಲು ನಗರಸಭೆ ಸದಸ್ಯ ರೂಬೆನ್‌ ಆಗ್ರಹ
Last Updated 25 ಮಾರ್ಚ್ 2017, 7:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ನಗರಸಭೆ ಸಭಾಂಗಣ ದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತಳ್ಳುವ ಗಾಡಿ ಹರಾಜು ಪ್ರಕ್ರಿಯೆ ನಡೆಯುತ್ತಿರುವಾಗ ನಗರದ ಪ್ರಥಮ ಪ್ರಜೆ ನಗರ ಸಭೆ ಅಧ್ಯಕ್ಷೆ ಮೇಲೆ ಮಹಿಳೆಯೊಬ್ಬರು ಏಕಾಏಕಿ ಹಲ್ಲೆ ನಡೆಸಿದರು.

ಇದು ಇಡೀ ಚಿಕ್ಕಮಗಳೂರು ಜನತೆ ತಲೆ ತಗ್ಗಿಸುವಂತ ಹುದು. ಈ ಘಟನೆ ನಗರಸಭೆಯಲ್ಲಿ ಬಿಜೆಪಿಯ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿ’ ಎಂದು ನಗರಸಭೆಯ ಸದಸ್ಯ ರೂಬೆನ್ ಮೊಸೆಸ್ ಟೀಕಿಸಿದ್ದಾರೆ.

ಜಿಲ್ಲೆಯ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ಇದರಿಂದ ಚಿಕ್ಕಮ ಗಳೂರಿಗೆ ಒಂದು ಕಪ್ಪು ಚುಕ್ಕೆ ಇಟ್ಟಂತಾ ಗಿದೆ. ಘಟನೆಯಿಂದ ಎಲ್ಲಾ ನಗರಸಭೆ ಸದಸ್ಯರು, ಸಿಬ್ಬಂದಿ ತಲೆತಗ್ಗಿಸುವಂತಾ ಗಿದೆ. ಘಟನೆ ಬಗ್ಗೆ ಶಾಸಕ ಸಿ.ಟಿ.ರವಿ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಶಾಸಕ ಸಿ.ಟಿ.ರವಿ ಅವರು ಹೊಡಿ, ಕಡಿ, ಬಡಿ, ಹೇಳಿಕೆಗಳನ್ನು ನೀಡಿರುವುದನ್ನು ನೋಡಿದರೆ, ಅದಕ್ಕೆ ಪೂರಕವಾಗಿ ಇಂತಹ ಘಟನೆ ನಡೆದಿದೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಗರಸಭೆಯಲ್ಲಿ ತಳ್ಳುವಗಾಡಿಯ ಹರಾಜು ಪ್ರಕ್ರಿಯೆ ನಡೆಯುವಾಗ ಅಧಿಕಾ ರಿಗಳ ಸಮ್ಮುಖದಲ್ಲಿ ನೂರಾರು ಜನರು ಇರುವಾಗ ಏಕಾಏಕಿ ಬಂದ ಒಬ್ಬ ಮಹಿಳೆ ನಗರಸಭೆ ಅಧ್ಯಕ್ಷರಿಗೆ ಅವಾಚ್ಯ ವಾಗಿ ನಿಂದಿಸಿ, ಜಡೆ ಎಳೆದು, ಹಲ್ಲೆ ಮಾಡಿದರೂ ಸಹ ಅವರು ಮರು ಮಾತ ನಾಡದೆ ಸಂಸದರ ಕಚೇರಿಗೆ ಹೋಗಿ ಅವಿತುಕೊಂಡರು. ಇದು ಹಲವು ಅನುಮಾನಕ್ಕೆ ಆಸ್ಪದವಾಗಿದೆ.

ಇಂತಹ ಬೆಳವಣಿಗೆ ನಡೆದರೂ ಅಧ್ಯಕ್ಷರು ಪೊಲೀಸರಿಗೆ ಏಕೆ ದೂರು ನೀಡಿಲ್ಲ? ಜಗಳಕ್ಕೆ ಕಾರಣವೇನು? ಹಲ್ಲೆ ನಡೆಸಿದ ಮಹಿಳೆ ಯಾರು? ಈ ಮಹಿಳೆಗೂ ನಗರ ಸಭೆ ಅಧ್ಯಕ್ಷರಿಗೂ ಸಂಬಂಧವೇನು? ಎನ್ನುವುದನ್ನು ಶಾಸಕ ಸಿ.ಟಿ.ರವಿ ಮತ್ತು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಸಾರ್ವಜನಿಕರಿಗೆ ಸ್ಟಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಗುವಿನ ವಾತಾವರಣ: ನಗರಸಭೆಯ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಯಲ್ಲಿ ಬಿಗುವಿನ ವಾತಾವರಣ ಇತ್ತು. ಕಚೇರಿ ಕೆಲಸ ನಿಮಿತ್ತ ಬಂದಿದ್ದ ಸಾರ್ವಜನಕರಿಗೆ ಅಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯದೆ ಮೂಕ ಪ್ರೇಕ್ಷಕರಂತೆ ನಿಂತಿದ್ದರು. ನಗರಸಭೆ ಆಯುಕ್ತರ ಕಚೇರಿ ಬಾಗಿಲು ಒಳಗಿನಿಂದ ಬಂದ್ ಆಗಿತ್ತು. ಮಾಧ್ಯಮ ಪ್ರತಿನಿಧಿಗಳನ್ನು ಕಚೇರಿ ಒಳಗಡೆ ಬಿಡಲಿಲ್ಲ.

ನಗರಸಭೆ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದರು ಎನ್ನಲಾದ ಮಹಿಳೆ ಯನ್ನು ನಗರಸಭೆ ಬಿಜೆಪಿ ಸದಸ್ಯರು ಬೆಂಗಾವಲಿನಲ್ಲಿ ಕಾರಿಗೆ ಹತ್ತಿಸಿಕೊಂಡು ಕ್ಷಣಾರ್ಧದಲ್ಲಿ ಕರೆದೊಯ್ದರು. ಮಾಧ್ಯ ಮ ಪ್ರತಿನಿಧಿಗಳು ಘಟನೆ ಬಗ್ಗೆ ವಿವರ ಕೇಳಲು ಮುಂದಾದಾಗ ಮಾಧ್ಯಮದ ವರ ಜತೆಗೆ ಮಾತನಾಡಲು ಅವಕಾಶ ನೀಡದೆ, ಬಲವಂತವಾಗಿ ಕರೆದೊಯ್ದರು. ನಗರಸಭೆ ಅಧ್ಯಕ್ಷರ ಮೇಲೆ ದಾಳಿ ನಡೆಸಿದ ಮಹಿಳೆಯನ್ನು ನಗರಸಭೆಯಲ್ಲಿ ಈ ಹಿಂದೆ ಎಂಜಿನಿಯರ್‌ ಆಗಿದ್ದವರ ಪತ್ನಿ ಎನ್ನಲಾಗಿದೆ.

ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಅವರಿಗೆ ಘಟನೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ‘ಅಂತಹ ಯಾವುದೇ ಗಲಾಟೆ ಏನೂ ನಡೆದಿಲ್ಲ. ನಗರಸಭೆಯಲ್ಲಿ ಇವತ್ತು ಸಂತೆ ಮಾರುಕಟ್ಟೆಯ ತಳ್ಳುವ ಗಾಡಿಗಳ ಶುಲ್ಕ ವಸೂಲಾತಿಯ ಗುತ್ತಿಗೆ ಹರಾಜು ಇತ್ತು. ಹರಾಜು ಪ್ರಕ್ರಿಯೆ ನಡೆಯಿತಷ್ಟೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT