ರಾಯಚೂರು: ರಾಮಮಂದಿರ ಸೇರಿದಂತೆ ಯಾವುದೇ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳನ್ನು ನಿರ್ಮಿಸಲು ಅವಕಾಶ ನೀಡಬಾರದು. ಈಗಾಗಲೇ ಇರುವ ಧಾರ್ಮಿಕ ಕೇಂದ್ರಗಳನ್ನೆಲ್ಲ ಒಡೆದು ಹಾಕಬೇಕು ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಕೂಡಾ ದೇವಸ್ಥಾನಗಳನ್ನು ಒಡೆಯಬೇಕೆನ್ನುವ ಮಾತನ್ನು ಹೇಳಿದ್ದಾರೆ. ದೇಶದ ಮೇಲೆ 26 ಬಾರಿ ದಾಳಿ ನಡೆದಾಗ ಈ ದೇವರೆಲ್ಲ ಏನು ಮಾಡುತ್ತಿದ್ದವು. ಇಂತಹ ದೇವರುಗಳಿಗೆ ಏಕೆ ದೇವಸ್ಥಾನ ಕಟ್ಟಬೇಕು ಎಂದು ಪ್ರಶ್ನಿಸಿದರು.

ರಾಮನು ಅಸಲಿಗೆ ದೇವರೇ ಅಲ್ಲ. ಹೀಗಾಗಿ ರಾಮಮಂದಿರ ನಿರ್ಮಾಣವೆ ಅನಗತ್ಯ. ರಾಮಾಯಣದಲ್ಲಿ ವಾಲ್ಮೀಕಿ ಉಲ್ಲೇಖಿಸಿದಂತೆ ಆತ 12 ಗುಣಗಳನ್ನು ಹೊಂದಿರುವ ಯುಗಪುರುಷ ಇರಬಹುದು ಅಷ್ಟೆ. ರಾಮ, ಕೃಷ್ಣ ಇವರೆಲ್ಲ ಚಾತುವರ್ಣಗಳನ್ನು ರಕ್ಷಿಸಿದ್ದಾರೆ. ಇವರೆಲ್ಲ ಸಮಾನತಾವಾದಿಗಳಲ್ಲ. ಮೇಲು, ಕೀಳನ್ನು ಪೋಷಣೆ ಮಾಡಿಕೊಂಡು ಬಂದಿರುವವರಿಗೆ ದೇವಸ್ಥಾನ ನಿರ್ಮಿಸಬಾರದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.